Don't Miss!
- Sports
ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲಲಿದ್ದೇವೆ ಎಂದು ಭವಿಷ್ಯ ನುಡಿದ ಜಿಂಬಾಬ್ವೆ ಆಟಗಾರ
- News
ಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠ
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?
ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸೇರಿ ಮಾಡಿದ ಸಿನಿಮಾ 'ರಾಬರ್ಟ್'. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಕೊರೊನಾ ಸಮಯದಲ್ಲಿ ಬಂದ ರಾಬರ್ಟ್ ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಮಾಡುವುದರ ಮೂಲಕ ಹೊಸ ದಾಖಲೆ ಬರೆದಿತ್ತು.
'ರಾಬರ್ಟ್' ಚಿತ್ರದ ಬಳಿಕ ಇದೇ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತೆ ಎನ್ನಲಾಗಿತ್ತು. ಅದುವೇ 'ಸಿಂಧೂರ ಲಕ್ಷ್ಮಣ' ಸಿನಿಮಾ. ಈ ಚಿತ್ರ ಈ ಮೂವರ ಕಾಂಬಿನೇಷನ್ನಲ್ಲಿ ಈಗಾಗಲೇ ಮೂಡಿ ಬರಬೇಕಿತ್ತು. ಆದರೆ ದರ್ಶನ್ ಮತ್ತು ಉಮಾಪತಿ ನಡುವಿನ ಭಿನ್ನಾಭಿಪ್ರಾಯದಿಂದ ಸಿನಿಮಾ ನಿಂತಿತ್ತು.
ದರ್ಶನ್
ನಟನೆಯ
'ಕ್ರಾಂತಿ'
ರಿಲೀಸ್ಗೆ
ಮುಹೂರ್ತ
ಫಿಕ್ಸ್!
ಹಾಗಾಗಿ ಆ ನಂತರ ಈ ಸಿನಿಮಾ ಆಗುವುದು ಅನುಮಾನ ಎನ್ನಲಾಗಿತ್ತು. ಜೊತೆಗೆ ಈ ಬಗ್ಗೆ ಸಿನಿಮಾಗೆ ಸಂಬಂಧ ಪಟ್ಟವರು ಎಲ್ಲೂ ಮಾತನಾಡಿರಲಿಲ್ಲ. ಆದರೆ ಈಗ ಈ ಬಗ್ಗೆ ನಿರ್ಮಾಪಕ ಉಮಾಪತಿ ಮಾತನಾಡಿದ್ದು, ಸಿನಿಮಾ ಆಗುತ್ತೆ ಎಂದಿದ್ದಾರೆ.

'ಸಿಂಧೂರ ಲಕ್ಷ್ಮಣ' ಉಮಾಪತಿ ಸಿದ್ಧ!
'ಸಿಂಧೂರ ಲಕ್ಷ್ಮಣ' ಟೈಟಲ್ ರೈಟ್ಸ್ ತೆಗೆದುಕೊಂಡು ಹಲವು ದಿನಗಳೇ ಆಗಿದೆ. ಈಗ ನಿರ್ಮಾಪಕ ಉಮಾಪತಿ ಮತ್ತೆ ಚಿತ್ರವನ್ನು ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರವನ್ನು ಮಾಡಬೇಕೆಂದು, ಚಿತ್ರದ ಹಕ್ಕನ್ನು ಉಮಾಪತಿಯವರು ಖರೀದಿಸಿದ್ದರು. ಈ ಸಿನಿಮಾ ಶುರುವಾಗುವುದೇ ಇಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ ಇದೀಗ ಉಮಾಪತಿ ಅವರು ಸಿನಿಮಾದ ತಯಾರಿ ಮಾಡಿಕೊಳ್ಳುತ್ತಾರೆ. 'ಸಿಂಧೂರ ಲಕ್ಷ್ಮಣ' ಸಿನಿಮಾ ನಿಂತ್ತಿಲ್ಲ. ಮತ್ತೆ ಸಿನಿಮಾದ ಕೆಲಸಕ್ಕೆ ನಿರ್ಮಾಪಕ ಉಮಾಪತಿ ಚಾಲನೆ ನೀಡಿದ್ದಾರೆ.
ಪ್ರಥಮ್
ನನ್ನ
3ನೇ
ಮಗ
ಎಂದ
ದರ್ಶನ್
ತಾಯಿ:
'ಕ್ರಾಂತಿ'ಗೆ
ನನ್ನ
ಬೆಂಬಲ
ಎಂದ
'ನಟ
ಭಯಂಕರ'!

ತರುಣ್ ಸುಧೀರ್ ಹೇಳೋದೇನು?
ನಿರ್ಮಾಪಕ ಉಮಾಪತಿ ಸಿನಿಮಾವನ್ನು ಶುರು ಮಾಡುತ್ತೇವೆ ಸದ್ಯ ಸ್ಕ್ರಿಪ್ಟ್ ವರ್ಕ್ ನಡೀತಾ ಇದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್ ಕೂಡ "ಈ ಸಿನಿಮಾದ ಹಕ್ಕು ಉಮಾಪತಿ ಅವರ ಬಳಿ ಇದೆ. ಅವರು ಸಿನಿಮಾದ ಸ್ಕ್ರಿಪ್ಟ್ ಕೆಲಸ ಮಾಡುತ್ತೇವೆ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ನಾನು ಸದ್ಯ ದರ್ಶನ್ ಅವರ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. 'ಸಿಂಧೂರ ಲಕ್ಷ್ಮಣ' ಚಿತ್ರದ ಬಗ್ಗೆ ಇನ್ನು ಏನು ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಅದು ಸಾಧ್ಯ ಆಗಬಹುದು" ಎಂದಿದ್ದಾರೆ.

ಸ್ಕ್ರಿಪ್ಟ್ ಪೂಜೆ ನೆರವೇರಿತ್ತು!
'ಸಿಂಧೂರ ಲಕ್ಷ್ಮಣ' ಸಿನಿಮಾದ ಸ್ಕ್ರಿಪ್ಟ್ ಪೂಜೆ ಈ ಹಿಂದೆಯೆ ನೆರವೇರಿತು. ತರುಣ್ ಸುಧೀರ್ ಉಮಾಪತಿ ಸೇರಿ ಪೂಜೆಯನ್ನು ಮಾಡಿದ್ದರು. ಆಗಲೇ ಚಿತ್ರ ಶುರುವಾಗುತ್ತೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ 'ಸಿಂಧೂರ ಲಕ್ಷ್ಮಣ' ಸಿನಿಮಾದ ಬದಲಿಗೆ ದರ್ಶನ್ 'ಕ್ರಾಂತಿ' ಸಿನಿಮಾ ಸೆಟ್ಟೇರಿದೆ. 'ಕ್ರಾಂತಿ' ಚಿತ್ರದ ಬಳಿಕ ದರ್ಶನ್ ತರುಣ್ ನಿರ್ದೇಶನದಲ್ಲಿ ತಮ್ಮ 56ನೇ ಸಿನಿಮಾ ಮಾಡಲಿದ್ದಾರೆ. ಬಹುಶ: ಆ ಬಳಿಕ 'ಸಿಂಧೂರ ಲಕ್ಷ್ಮಣ' ಶುರು ಆದರೂ ಆಗಬಹುದು. ಸದ್ಯಕ್ಕಂತೂ ನಿರ್ಮಾಪಕ ಉಮಾಪತಿ ತೆರೆಮರೆಯಲ್ಲಿ 'ಸಿಂಧೂರ ಲಕ್ಷ್ಮಣ' ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನು ಆರಂಭಿಸಿದ್ದಾರಂತೆ.
ಚಾರ್ಲಿಯ
ಹಳೆ
ಗೆಳೆಯ
ದರ್ಶನ್:
ಸೋಶಿಯಲ್
ಮೀಡಿಯಾದಲ್ಲಿ
ವಿಡಿಯೋ
ವೈರಲ್!

'ಸಿಂಧೂರ ಲಕ್ಷ್ಮಣ' ಕಥೆ ಸಜ್ಜಾಗುತ್ತಿದೆ!
ಈ ಬಗ್ಗೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ ನಿರ್ಮಾಪಕ ಉಮಾಪತಿ, "ಸಿನಿಮಾ ಆಗುತ್ತೆ 'ಸಿಂಧೂರ ಲಕ್ಷ್ಮಣ' ಸಿನಿಮಾ ಮಾಡಬೇಕೆಂದು ಸಾಕಷ್ಟು ಯೋಜನೆಯನ್ನು ರೂಪಿಸಿದ್ದೆವು. ಅದರಂತೆಯೇ ಇದೀಗ ಸ್ಕ್ರಿಪ್ಟ್ ಕೆಲಸಗಳು ಆರಂಭವಾಗಿವೆ. ಎಲ್ಲವೂ ಫೈನಲ್ ಆದ ನಂತರ ದರ್ಶನ್ ಅವರು ಏನು ಹೇಳುತ್ತಾರೆ ಎನ್ನುವುದನ್ನು ನೋಡಬೇಕಿದೆ. ಈ ಸಿನಿಮಾವನ್ನು ದರ್ಶನ ಸರ್ಗಾಗಿಯೇ ಶುರುಮಾಡಿದ್ದು. ಚಿತ್ರದಲ್ಲಿ ಅವರೇ ಇರಬೇಕು ಎಂದು ಬಯಸುತ್ತೇನೆ." ಎಂದಿದ್ದಾರೆ