ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!

By Naveen

Recommended Video

ದರ್ಶನ್ ಈಗ ಭಗತ್ ಸಿಂಗ್..! | Filmibeat Kannada

ನಟ ದರ್ಶನ್ ಎಂದ ತಕ್ಷಣ ಈಗ 'ಕುರುಕ್ಷೇತ್ರ' ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ಡಿ ಬಾಸ್ ಹಸ್ತಿನಾಪುರದ ರಾಜ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಈ ಚಿತ್ರದ ನಂತರ ಮತ್ತೊಂದು ಮಹತ್ವದ ಪಾತ್ರದ ಮೂಲಕ ದರ್ಶನ್ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ಹೌದು.. ನಟ ದರ್ಶನ್ ಈಗ ಭಗತ್ ಸಿಂಗ್ ವೇ‍ಷ ತೊಟ್ಟಿದ್ದಾರೆ.

ದರ್ಶನ್ ಒಬ್ಬ ಪಕ್ಕಾ ಮಾಸ್ ಹೀರೋ. ಸಾಲು ಸಾಲು ಮಾಸ್ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ದಾಸ ಅದೇ ರೀತಿ ವಿಶೇಷ ಪಾತ್ರಗಳಿಗೆ ಸಹ ಜೀವ ತುಂಬಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀತಿಯ ಶ್ರೇಷ್ಠ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಸದ್ಯ ಭಗತ್ ಸಿಂಗ್ ಪಾತ್ರವನ್ನು ದರ್ಶನ್ ಯಾವ ಸಿನಿಮಾದಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಮುಂದಿದೆ ಓದಿ...

'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾ

'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾ

ನಟ ದರ್ಶನ್ ಭಗತ್ ಸಿಂಗ್ ಅವರ ಬಗ್ಗೆ ಸಿನಿಮಾ ಮಾಡುತ್ತಿಲ್ಲ ಬದಲಿಗೆ 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ಆ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ನಟನೆಯ ಈ ಚಿತ್ರದಲ್ಲಿ ದರ್ಶನ್ ಒಂದು ಪಾತ್ರ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಅದೇ ರೀತಿ ಈಗ ದರ್ಶನ್ ಪಾತ್ರ ರಿವೀಲ್ ಆಗಿದೆ.

ಆಕರ್ಷಕ ಲುಕ್

ಆಕರ್ಷಕ ಲುಕ್

ಈಗಾಗಲೇ, ಸಿನಿಮಾದ ದರ್ಶನ್ ಅವರ ಲುಕ್ ರಿವೀಲ್ ಆಗಿದೆ. ಭಗತ್ ಸಿಂಗ್ ವೇಷದಲ್ಲಿರುವ ದರ್ಶನ್ ಅವರ ಫೋಟೋ ಹೊರಬಂದಿದೆ. ಮೀಸೆ ಬಿಟ್ಟು, ಟೋಪಿ ಹಾಕಿಕೊಂಡು ಥೇಟ್ ಭಗತ್ ಸಿಂಗ್ ರೀತಿಯೇ ದರ್ಶನ್ ಕಾಣಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳಿಗಂತು ಅವರ ಲುಕ್ ತುಂಬ ಇಷ್ಟ ಆಗಿದೆ.

ನಂಗೆ ಸೂಟ್ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದ ದರ್ಶನ್

ನಂಗೆ ಸೂಟ್ ಆಗುತ್ತಾ? ಎಂದು ಪ್ರಶ್ನೆ ಮಾಡಿದ್ದ ದರ್ಶನ್

ಭಗತ್ ಸಿಂಗ್ ಪಾತ್ರ ಮಾಡಬೇಕು ಎಂದು 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರತಂಡ ದರ್ಶನ್ ಅವರನ್ನು ಕೇಳಿಕೊಂಡಿದೆ. ಆಗ ದರ್ಶನ್ 'ನಂಗೆ ಈ ಪಾತ್ರ ಸೂಟ್ ಆಗುತ್ತಾ..?' ಎಂದು ಪ್ರಶ್ನೆ ಕೇಳಿದ್ದರಂತೆ. ಆ ಬಳಿಕ ಭಗತ್ ಸಿಂಗ್ ಅವರ ಗೆಟಪ್, ಡ್ರೆಸ್, ಲುಕ್ ಬಗ್ಗೆ ಮಾತನಾಡಿ ಖುಷಿಯಿಂದ ಪಾತ್ರವನ್ನು ಒಪ್ಪಿಕೊಂಡರಂತೆ.

ಚಿತ್ರದ ಐತಿಹಾಸಿಕ ಸನ್ನಿವೇಶ

ಚಿತ್ರದ ಐತಿಹಾಸಿಕ ಸನ್ನಿವೇಶ

'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರಕ್ಕೂ ಭಗತ್ ಸಿಂಗ್ ಪಾತ್ರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಈ ಚಿತ್ರದಲ್ಲಿ ಒಂದು ಐತಿಹಾಸಿಕ ಸನ್ನಿವೇಶ ಬರಲಿದೆಯಂತೆ. ಈ ದೃಶ್ಯದಲ್ಲಿ ದರ್ಶನ್ ಭಗತ್ ಸಿಂಗ್ ಆಗಿ ನಟಿಸಲಿದ್ದಾರೆ. ಇನ್ನು 'ಇನ್ಸ್ ಪೆಕ್ಟರ್ ವಿಕ್ರಂ' ಹಾಗೂ ಭಗತ್ ಸಿಂಗ್ ಗೆ ಇರುವ ಲಿಂಕ್ ಅನ್ನು ಸಿನಿಮಾದಲ್ಲಿಯೇ ನೋಡಬೇಕಂತೆ

'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಬಗ್ಗೆ

'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಬಗ್ಗೆ

'ಇನ್ಸ್ ಪೆಕ್ಟರ್ ವಿಕ್ರಂ' ನಟ ಪ್ರಜ್ವಲ್ ದೇವರಾಜ್ ಅವರ ನಟನೆಯ ಹೊಸ ಸಿನಿಮಾವಾಗಿದೆ. ಈಗಾಗಲೇ ಈ ಚಿತ್ರದ ಟೀಸರ್ ಯೂ ಟ್ಯೂಬ್ ನಲ್ಲಿ ಹಿಟ್ ಆಗಿದೆ. ಈ ಹಿಂದೆ 'ಪುಷ್ಪಕ ವಿಮಾನ' ಸಿನಿಮಾಗೆ ಬಂಡವಾಳ ಹಾಕಿದ್ದ ವಿಖ್ಯಾತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀನರಸಿಂಹ ಚಿತ್ರದ ನಿರ್ದೇಶನ ಮಾಡಿದ್ದಾರೆ. 'ಜಾಕಿ' ಭಾವನ ಈ ಚಿತ್ರದ ನಾಯಕಿ ಆಗಿದ್ದಾರೆ.

More from Filmibeat

English summary
Actor Darshan played Bhagat Singh role in Prajwal Devaraj's 'Inspector Vikram' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X