ಎಲ್ಲಾ ಕಡೆಯಿಂದ ಉಮಾಪತಿ ಹೆಸರು ಕೇಳಿಬರ್ತಿದೆ; ದರ್ಶನ್ ಸ್ಫೋಟಕ ಮಾಹಿತಿ

ತನ್ನ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಪತ್ರಿಕಾಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನಿನ್ನೆ ಎಸಿಪಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಸ್ವಲ್ಪ ಟೈಂ ಕೊಡಿ ಎಂದಿದ್ದ ದರ್ಶನ್ ಇಂದು ದಿಢೀರ್ ಪ್ರೆಸ್ ಮೀಟ್ ಮಾಡಿ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದರು.

ದರ್ಶನ್ ಸ್ನೇಹಿತರ ಜೊತೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರೆಸ್ ಮೀಟ್ ಮಾಡಿದ ದರ್ಶನ್, ಎಲ್ಲಾ ಕಡೆಯಿಂದ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದೆ ಎಂದು ಹೇಳಿದ್ದಾರೆ. ಆರೋಪಿ ಅರುಣಾ ಕುಮಾರಿಯನ್ನು ಮೊದಲು ಪರಿಚಯಿಸಿದ್ದು ನಿರ್ಮಾಪಕ ಉಮಾಪತಿ ಎಂದು ದರ್ಶನ್ ಹೇಳಿದ್ದಾರೆ.

ಉಮಾಪತಿ ಅವರ ಅಣ್ಣ ದೀಪಕ್ ಅವರ ಕಡೆಯಿಂದ ಆರೋಪಿ ಅರುಣಾ ಕುಮಾರಿ ಪರಿಚಯ ಆದವರು. ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಪರಿಚಯ ಮಾಡಿದ್ದರು. ಲೋನ್ ವಿಚಾರವಾಗಿ ಸ್ನೇಹಿತರ ಹೆಸರೆಲ್ಲ ಹೇಳಲು ಪ್ರಾರಂಭಿಸಿದ್ರು. ಬಳಿಕ ಉಮಾಪತಿ ಬಳಿ ಮನೆಗೆ ಕರೆದುಕೊಂಡು ಬರಲು ಹೇಳಿದೆ ಎಂದರು. "ತೋಟದ ಮನೆ ವೇರಿಫೈ ಮಾಡಬೇಕು ಅಂತ ಹೇಳಿದ್ರು. ತೋಟದ ಮನೆ ನನ್ನ ಹೆಸರಿನಲ್ಲಿ ಇಲ್ಲ ಪತ್ನಿ ಹೆಸರಿನಲ್ಲಿ ಇದೆ ಅಂತ ಹೇಳಿದರೂ, ವೇರಿಫೈ ಮಾಡಬೇಕು ಅಂದ್ರು. ಹಾಗಾಗಿ ತೋಟದ ಮನೆ ಹೋಗಲು ಹೇಳಿದೆ" ಎಂದು ದರ್ಶನ್ ಹೇಳಿದ್ರು. ಮುಂದೆ ಓದಿ...

ದರ್ಶನ್ ಸ್ನೇಹಿತರನ್ನು ನೋಡಿ ಶಾಕ್ ಆದ ಅರುಣಾ

ದರ್ಶನ್ ಸ್ನೇಹಿತರನ್ನು ನೋಡಿ ಶಾಕ್ ಆದ ಅರುಣಾ

"ಸ್ನೇಹಿತರಾದ ಹರ್ಷ ಮತ್ತು ನಾಗು, ರಾಕಿ ಅವರಿಗೂ ತೋಟದ ಮನೆಗೆ ಹೋಗಲು ಹೇಳಿದೆ. ಹರ್ಷ ಮತ್ತು ನಾಗು ನೋಡಿ ಅರುಣಾ ಕುಮಾರಿ ನೋಡಿ ಶಾಕ್ ಆದರು. ಬಳಿಕ ಅರುಣಾ ಕುಮಾರಿ ಯಾರಿಗೋ ಫೋನ್ ಮಾಡಿ ಎಲ್ಲರೂ ಬಂದಿದ್ದಾರೆ ಅಂತ ಮಾತನಾಡಿದ್ರು. ಅಲ್ಲಿ ಹರ್ಷ ಮತ್ತು ರಾಕಿಗೆ ತಲೆ ಕೊಟ್ಟೋಯ್ತು" ಎಂದರು.

ತೋಟದ ಮನೆಯಲ್ಲಿ ಮಾತುಕತೆ

ತೋಟದ ಮನೆಯಲ್ಲಿ ಮಾತುಕತೆ

"ಬ್ಯಾಂಕ್ ಗೆ ದರ್ಶನ್ ಸ್ನೇಹಿತರಾದ ಹರ್ಷ ಮತ್ತು ರಾಕಿ ಬಂದಿರು ಅಂತ ಅರುಣಾ ಮೊದಲು ಹೇಳಿದ್ರು. ತೋಟದ ಮನೆ ವೇರಿಫೈ ಮಾಡಲು ಬಂದ ಸಮಯದಲ್ಲಿ ಹರ್ಷ ಮತ್ತು ರಾಕಿ ಇಬ್ಬರೂ ಬ್ಯಾಂಕ್ ಗೆ ಬಂದಿದ್ದು ನಾವೆನಾ ಅಂತ ಕೇಳಿದ್ರು. ಲೋನ್ ತೆಗೆದುಕೊಳ್ಳುತ್ತಿರುವುದು ನಾವ ಆದರೆ ನಮಗೆ ಫೋನ್ ಮಾಡಬೇಕು ಅಲ್ವಾ ಅಂತ ಕೇಳಿದ್ರು. ಆದರೆ ಅರುಣಾ ನೀವಲ್ಲ ಅಂತ ಹೇಳಿದ್ರು. ಬಳಿಕ ಅಲ್ಲಿಂದ ಹೋಗಲು ಹೇಳಿದ್ವಿ" ಎಂದರು.

ಬ್ಯಾಂಕ್ ನಲ್ಲಿ ವಿಚಾರಿಸಿದ ಬಳಿಕ ದೂರು ನೀಡಿದ್ವಿ

ಬ್ಯಾಂಕ್ ನಲ್ಲಿ ವಿಚಾರಿಸಿದ ಬಳಿಕ ದೂರು ನೀಡಿದ್ವಿ

"ಬಳಿಕ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ಅರುಣಾ ಕುಮಾರಿ ಎನ್ನುವರೇ ಇರಲಿಲ್ಲ. ಬಳಿಕ ಅನುಮಾನ ಬಂತು. ನಾವು ಸ್ನೇಹಿತರೆಲ್ಲ ಕುಳಿತು ಮಾತನಾಡಿದ್ವಿ. ಬಳಿಕ ಉಮಾಪತಿಗೆ ಕಚೇರಿಗೆ ಹೋಗಿ ಅಲ್ಲಿ. ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ದೂರು ನೀಡಿದೆವು" ಎಂದು ಹೇಳಿದ್ರು.

ಸತ್ಯ ಹೇಳಬೇಕು ಅಂತ ಅರುಣಾ ಕುಮಾರಿ ಕಾಲ್ ಮಾಡಿದ್ರು

ಸತ್ಯ ಹೇಳಬೇಕು ಅಂತ ಅರುಣಾ ಕುಮಾರಿ ಕಾಲ್ ಮಾಡಿದ್ರು

"ದೂರು ನೀಡಿದ ಬಳಿಕ ಜೂನ್ 18ರ ಬೆಳಗ್ಗೆ ಕಾಲ್ ಬಂತು. ನಾನು ಮಾತನಾಡಬೇಕು ಸತ್ಯ ಹೇಳಬೇಕು ಅಂತ ಅರುಣಾ ಕುಮಾರಿ ಹೇಳಿದರು. ಮನೆಗೆ ಒಬ್ಬರೆ ಬಂದ್ರು. ಯಾರು ಮಾಡಿಸಿದ್ದು ಅಂತ ಕೇಳಿದ್ರೆ ಮಲ್ಲೇಶ್ ಎನ್ನುವವರ ಹೆಸರು ಹೇಳಿದ್ರು. ಮಲ್ಲೇಶ್ ನಂಬರ್ ಗೆ ಕಾಲ್ ಮಾಡಿದ್ರೆ ಬೇರೆ ಯಾರಿಗೋ ಹೋಯ್ತು. ಇದು ಫೇಕ್ ಎನ್ನುವುದು ಗೊತ್ತಾಯ್ತು. ಸತ್ಯ ಹೇಳಿ ಹೋಗಿ ಅಂತ ಕೇಳಿದ್ವಿ. ಬಳಿಕ ಉಮಾಪತಿ ದೂರಿನ ಕಾಪಿ ತೋರಿಸಿದ್ವಿ. ಕಾಪಿ ನೋಡಿದ ಬಳಿಕ ಉಮಾಪತಿ ಅವರೇ ಹೀಗೆಲ್ಲ ಮಾಡಿಸಿದ್ದು ಅಂತ ಉಮಾಪತಿ ಹೆಸರು ಹೇಳಿದ್ರು. ಬಳಿಕ ಅಲ್ಲಿಂದ ಅರುಣಾ ಕುಮಾರಿಯನ್ನು ಕಳುಹಿಸಿದ್ವಿ" ಎಂದು ದರ್ಶನ್ ಹೇಳಿದ್ರು.

ಎಲ್ಲಾ ಕಡೆಯಿಂದ ಉಮಾಪತಿ ಹೆಸರು ಕೇಳಿಬರುತ್ತಿದೆ

ಎಲ್ಲಾ ಕಡೆಯಿಂದ ಉಮಾಪತಿ ಹೆಸರು ಕೇಳಿಬರುತ್ತಿದೆ

"ಪೊಲೀಸ್ ವಿಚಾರಣೆಯಲ್ಲೂ ಉಮಾಪತಿ ಹೆಸರು ಹೇಳಿದ್ದಾರೆ. ಎಲ್ಲಾ ಕಡೆಯಿಂದನೂ ಉಮಾಪತಿ ಹೆಸರು ಕೇಳಿಬರುತ್ತಿದೆ. ಸತ್ಯ ಹೇಳಿದ್ರೆ ಮಕ್ಕಳನ್ನು ಸಾಯಿಸುವುದಾಗಿ ಉಮಾಪತಿ ಬೆದರಿಕೆ ಹಾಕ್ತಿದ್ದಾರೆ ಎಂದು ಹೇಳ್ತಿದ್ದಾರೆ" ಎಂದು ದರ್ಶನ್ ಹೇಳಿದ್ರು.

Recommended Video

ಪೊಲೀಸರ ಕರೆಗೆ ಬೆಚ್ಚಿ ಬಿದ್ದ ದರ್ಶನ್! | Darshan | Filmibeat Kannada
ಉಮಾಪತಿ ಜೊತೆ ಅರುಣಾ ಕುಮಾರಿ ಚಾಟಿಂಗ್ ಬಹಿರಂಗ

ಉಮಾಪತಿ ಜೊತೆ ಅರುಣಾ ಕುಮಾರಿ ಚಾಟಿಂಗ್ ಬಹಿರಂಗ

"ಉಮಾಪತಿ ಜೊತೆ ಆರೋಪಿ ಅರುಣಾ ಕುಮಾರಿ ಮಾಡಿರುವ ಚಾಟ್ ಇಲ್ಲಿದೆ ಎಂದು ಪಾಟ್ಸಪ್ ಚಾಟ್ ಅನ್ನು ಬಹಿರಂಗ ಪಡಿಸಿದ್ರು. ಇಲ್ಲಿ ಕುಳಿತವರ ಮೇಲೆ ಅನುಮಾನವಿಲ್ಲ. ಇದನ್ನೆಲ್ಲ ಯಾರು ಮಾಡ್ತಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯಾರೆ ಮಾಡಿದ್ರು ಅವರನ್ನು ಸುಮ್ಮನೆ ಬಿಡಲ್ಲ. ಈ ಬಗ್ಗೆ ಈಗ ಉಮಾಪತಿ ಅವರೆ ಸ್ಪಷ್ಟನೆ ನೀಡಬೇಕು. ಸ್ವಲ್ಪ ಟೈಂ ಕೊಡಿ ಅಂತ ಉಮಾಪತಿ ಹೇಳಿದ್ದಾರೆ" ಎಂದು ದರ್ಶನ್ ಮಾತನಾಡಿದ್ರು.

More from Filmibeat

English summary
Darshan held Press Meet on Rs 25 Crore Fraud Case Controversy today; A woman and two men have been booked for allegedly creating forged documents of actor Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X