'ನಾಗರಹಾವು' ಸೆಟ್ ನಲ್ಲಿ 'ರಾಜಕಾಲುವೆ' ಬಗ್ಗೆ ಗುಡುಗಿದ ದರ್ಶನ್
ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ 'ನಾಗರಹಾವು' ಚಿತ್ರದ ವಿಶೇಷ ಹಾಡೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಣಿಸಿಕೊಳ್ಳುತ್ತಾರೆ, ಅಂತ ನಿಮಗೆ ಈಗಾಗಲೇ ಹೇಳಿದ್ದೀವಿ.
ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಬರೀ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ದಕ್ಷಿಣ ಭಾರತದ ಚಿತ್ರರಂಗದಲ್ಲೂ ಭಾರಿ ಸುದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಮತ್ತೆ ಕಾಣಬಹುದು ಅನ್ನೋದು ಅಭಿಮಾನಿಗಳ ಮತ್ತೊಂದು ದೊಡ್ಡ ಖುಷಿ ಕೂಡ ಆಗಿದೆ.['ನಾಗರಹಾವು' ಚಿತ್ರದಲ್ಲಿ ದರ್ಶನ್: ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಇಲ್ಲಿದೆ]
ಇನ್ನು ಈಗಾಗಲೇ ದರ್ಶನ್ ಅವರ ಸ್ಪೆಷಲ್ ಸಾಂಗ್ ಶೂಟ್ ಮೈಸೂರಿನಲ್ಲಿ ಶುರುವಾಗಿದೆ. ಆಗಲೇ ಒಂದು ದಿನದ ಶೂಟಿಂಗ್ ಮುಗಿದಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ವಿಶೇಷ ಹಾಡಿನ ಚಿತ್ರೀಕರಣ ಭರದಿಂದ ಸಾಗಿದೆ.
ಸದ್ಯಕ್ಕೆ ಹಾಡಿನ ಚಿತ್ರೀಕರಣದ ಮೇಕಿಂಗ್ ಝಲಕ್ ಮತ್ತು ಕಲರ್ ಫುಲ್ ಸ್ಟಿಲ್ ಗಳು ಹೊರಬಿದ್ದಿದೆ. ಹಾಡಿನಲ್ಲಿ ದರ್ಶನ್ ಅವರು ಪಕ್ಕಾ ತಾಯಿ ಕನ್ನಡಾಂಬೆಯ ಮಗನಾಗಿ, ಸಾಂಪ್ರದಾಯಿಕ ಬಟ್ಟೆಯಲ್ಲಿ ಮಿಂಚಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ದರ್ಶನ್ ಅವರು ರಾಜಕಾಲುವೆ ಬಗ್ಗೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಜೀದ್ ಖುರೇಷಿ ನಿರ್ಮಾಣದ 'ನಾಗರಹಾವು' ಚಿತ್ರದ ಕಲರ್ ಫುಲ್ ಮೇಕಿಂಗ್ ಝಲಕ್ ಮತ್ತು ದರ್ಶನ್ ಅವರು ರಾಜಕಾಲುವೆ ಬಗ್ಗೆ ಏನಂದ್ರು.?, ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ಯಾವ ಹಾಡು
'ಉರಗ ದೊರೆ ನಡೆದು ಬರುತಿರೆ ಗಡಗಡಿಸಿದೆ ಧರೆ, ಗುಡುಗುಡುಗಿದೆ ಧರೆ ನಡುಗಿದೆ, ದುರುಳರ ಎದೆ ಢವಗುಡುತಿದೆ, ನೋಡು ಮತ್ತೆ ಹೆಡೆಯ ಬಿಚ್ಚಿದೆ, ಹಾವು ನಾಗರಹಾವು', ಎಂಬ ಟೈಟಲ್ ಹಾಡಿಗೆ ದರ್ಶನ್ ಅವರು ಜಬರ್ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಎರಡು ದಿನಗಳ ಕಾಲ ನಡೆಯುತ್ತಿರುವ 'ನಾಗರಹಾವು' ವಿಶೇಷ ಹಾಡಿನ ಶೂಟಿಂಗ್ ನಲ್ಲಿ ನಟ ದರ್ಶನ್ ಅವರು ಅಪ್ಪಟ ಕನ್ನಡಾಂಬೆಯ ಮಗನಂತೆ ಕಂಗೊಳಿಸುತ್ತಿದ್ದರು. ['ವಿಷ್ಣು' ದಾದಾ ಮತ್ತು 'ಜಗ್ಗು ದಾದಾ' ದರ್ಶನ್ ಕುರಿತು ಈಗಷ್ಟೇ ಬಂದ ಬಿಗ್ ನ್ಯೂಸ್]

ಎರಡನೇ ದಿನಕ್ಕೆ ಕಾಲಿಟ್ಟ ಚಿತ್ರೀಕರಣ
ನಿನ್ನೆ (ಸೆಪ್ಟೆಂಬರ್ 2) ಆರಂಭವಾದ ಹಾಡಿನ ಚಿತ್ರೀಕರಣ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಮೈಸೂರು ಮಹಾರಾಜ ಗ್ರೌಂಡ್ ನಲ್ಲಿ ಹಾಡಿನ ಶೂಟಿಂಗ್ ಮುಂದುವರಿದಿದ್ದು, ದರ್ಶನ್ ಅವರು ನೂರಾರು ಸಹ ಕಲಾವಿದರ ಜೊತೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.['ದಾಸ' ದರ್ಶನ್ ಜೊತೆ ಡ್ಯಾನ್ಸ್ ಮಾಡ್ಬೇಕಾ.? ಇಲ್ಲಿದೆ ಗೋಲ್ಡನ್ ಚಾನ್ಸ್]

ವಿಷ್ಣು ಅವರಿಗೆ ಅರ್ಪಣೆ
ಈ ವಿಶೇಷ ಹಾಡನ್ನು ಲೆಜೆಂಡ್ ನಟ ಡಾ.ವಿಷ್ಣುವರ್ಧನ್ ಅವರಿಗೆ ಅರ್ಪಿಸಲಾಗಿದ್ದು, ಕವಿರಾಜ್ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕ ವಿಜಯ ಪ್ರಕಾಶ್ ಅವರು ಹಾಡಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ವಿಷ್ಣು ಅವರ ಬೃಹತ್ ಕಟೌಟ್
ಅಂದಹಾಗೆ ಈ ಹಾಡಿನ ವಿಶೇಷತೆ, ವಿಷ್ಣುವರ್ಧನ್ ಅವರ ಬೃಹತ್ ಕಟೌಟ್ ಗಳು, ಇಡೀ ಹಾಡಿನಲ್ಲಿ ವಿಷ್ಣು ಅವರ ಕಟೌಟ್ ಗಳು ರಾರಾಜಿಸುತ್ತಿವೆ. ಈ ಹಾಡಿನ ಸೆಟ್ ನಲ್ಲಿ ಪೂರ್ತಿ ಡಾ.ವಿಷ್ಣು ಅವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಲಾಗಿದ್ದು, ವಿಷ್ಣು ಅವರಿಗೆ ನಮನ ಸಲ್ಲಿಸುತ್ತಾ ದರ್ಶನ್ ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಚಿತ್ರದ ಪ್ರಮುಖ ಆಕರ್ಷಣೆಯಾಗಿ ದರ್ಶನ್ ಅವರನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

ದರ್ಶನ್ ಗೆ ತಲೆಯಲ್ಲಿ ಕೋಡು ಇಲ್ವಂತೆ.!
'ಕಾನೂನು ಎಲ್ಲರಿಗೂ ಒಂದೇ, ದರ್ಶನ್ ಅಂದ ತಕ್ಷಣ ಎರಡು ಕೋಡು ಇರೋದಿಲ್ಲ, ದರ್ಶನ್ ಕೂಡ ಒಬ್ಬ ಸಾಮಾನ್ಯ ಮನುಷ್ಯ. ನಾವು ಬೇರೆಯವರು ಕಟ್ಟಿದ ಮನೆಯನ್ನು ತೆಗೆದುಕೊಂಡಿದ್ದು, ನಿಜವಾಗಿಯೂ ರಾಜಕಾಲುವೆ ಮೇಲೆ ನನ್ನ ಮನೆ ಇದ್ದರೆ ಧಾರಾಳವಾಗಿ ಅದನ್ನು ಕೆಡವಿ ಹಾಕ್ಲಿ ನನ್ನ ಅಭ್ಯಂತರ ಏನೂ ಇಲ್ಲ' ಅಂತ ದರ್ಶನ್ ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ನುಡಿದಿದ್ದಾರೆ.[ರಾಜ ಕಾಲುವೆ ಒತ್ತುವರಿಯಾಗಿದ್ದರೆ ನಾನೇ ಅಗೆದುಕೊಡ್ತೀನಿ: ನಟ ದರ್ಶನ್]

ಬೇಸರಪಟ್ಟುಕೊಂಡ ದರ್ಶನ್
'ಅಲ್ಲಿ ಬಹಳಷ್ಟು ಮಂದಿ ದೊಡ್ಡ ವ್ಯಕ್ತಿಗಳ ಮನೆ ಇದ್ದರೂ ಕೂಡ, ಬರೀ ನನ್ನ ಮನೆ ಬಗ್ಗೆ ಮಾತ್ರ ಭಾರಿ ಚರ್ಚೆ ಆಗುತ್ತಿರೋದಕ್ಕೆ ನನಗೆ ಭಾರಿ ಬೇಸರ ಇದೆ' ಅಂತ ಕೂಡ ದರ್ಶನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಟೈಟಲ್ ಹಾಡು ಕೇಳಿ...
ದರ್ಶನ್ ಅವರು ಹೆಜ್ಜೆ ಹಾಕಿರುವ 'ನಾಗರಹಾವು' ಚಿತ್ರದ ಸಂಪೂರ್ಣ ಟೈಟಲ್ ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ....

ಮೇಕಿಂಗ್ ಝಲಕ್
ದರ್ಶನ್ ಅವರು 'ನಾಗರಹಾವು' ಚಿತ್ರದ ಟೈಟಲ್ ಸಾಂಗ್ ಗೆ ಸಖತ್ ಆಗಿ ಮಾಡಿದ್ದನ್ನು ನೋಡಿ ಈ ಮೇಕಿಂಗ್ ವಿಡಿಯೋದಲ್ಲಿ.....


Click it and Unblock the Notifications











