For Quick Alerts
  ALLOW NOTIFICATIONS  
  For Daily Alerts

  ಯಾರೆ ಆದರು ನಾನು ಬಿಡಲ್ಲ; ವಂಚನೆ ಪ್ರಕರಣದ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ

  |

  ತನ್ನ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ. ಎಸಿಪಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, ಈ ಪ್ರಕರಣದಲ್ಲಿ ಯಾರೆ ಆದರೂ ಅವರನ್ನು ನಾನು ಬಿಡಲ್ಲ, ರಕ್ಕೆ-ಪುಕ್ಕ ಅಲ್ಲ ತಲೆಯನ್ನೇ ತೆಗಿಯೋನು ನಾನು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

  ಪೊಲೀಸರ ಕರೆಗೆ ಬೆಚ್ಚಿ ಬಿದ್ದ ದರ್ಶನ್! | Darshan | Filmibeat Kannada

  ಈ ಪ್ರಕರಣದ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡದ ದರ್ಶನ್, ಈ ಬಗ್ಗೆ ಮಾತನಾಡಲು ಸ್ವಲ್ಪ ಸಮಯ ಕೊಡಿ ಎಂದಿದ್ದಾರೆ. " ನನಗೂ ಕೂಡ ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಪೊಲೀಸರ ಬಳಿ ಮಾತನಾಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಲು ಸ್ವಲ್ಪ ಟೈಂ ಕೊಡಿ" ಎಂದರು.

  "ಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ಆಗುತ್ತಿದೆ. ವಿಚಾರಣೆ ಬಳಿಕ ಸಂಪೂರ್ಣ ಮಾಹಿತಿ ನಾನೆ ನೀಡುತ್ತೇನೆ" ಎಂದಿದ್ದಾರೆ. ಮಾತನಾಡದಿದ್ರೆ ಈ ಪ್ರಕರಣಕ್ಕೆ ರೆಕ್ಕೆ-ಪುಕ್ಕ ಬರುತ್ತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ "ರೆಕ್ಕೆ-ಪುಕ್ಕ ಅಲ್ಲ ನಾನು ತಲೆನೇ ಕಟ್ ಮಾಡೋನು, ಯಾರೆ ಆದರು ನಾನು ಬಿಡಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.

  ಇನ್ನು ಇದೇ ಸಮಯದಲ್ಲಿ ವಂಚನೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಉಮಾಪತಿ, "ಈ ಪ್ರಕರಣ ಸುಮಾರು 2 ತಿಂಗಳಿಂದ ನಡೆಯುತ್ತಿದೆ. ಮಹಿಳೆ ಫೋನ್ ಮಾಡಿ ನೀವು ಮತ್ತು ದರ್ಶನ್ ಸರ್ ಲೋನ್ ತೆಗೆದುಕೊಳ್ಳುತ್ತಿದ್ದೀರಾ ಅಥವಾ ಶೂರಿಟಿ ಹಾಕಿದ್ದೀರಾ ಎಂದು ಕೇಳಿದರು. ಬಳಿಕ ವಿಚಾರಿಸಿದಾಗ ಯಾರು ಲೋನ್ ಪಡೆದಿಲ್ಲ ಎನ್ನುವುದು ಗೊತ್ತಾಯಿತು. ಎಲ್ಲರೂ ಮಾತನಾಡಿ ಬಳಿಕ ಜೂನ್ 16ರಂದು ಬೆಂಗಳೂರಿನ ಜಯನಗರದಲ್ಲಿ ದೂರು ನೀಡಿದೆವು" ಎಂದಿದ್ದಾರೆ.

  "ಬಳಿಕ ಮೈಸೂರಿನಲ್ಲಿ ದೂರು ದಾಖಲಿಸಿದೆವು. ಆ ಮಹಿಳೆಯ ಹಿಂದೆ ಯಾರು ಇದ್ದಾರೆ, ಇದರ ಉದ್ದೇಶ ಏನು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ಬೆಂಗಳೂರು ಮತ್ತು ಮೈಸೂರು ಎರಡು ಕಡೆ ವಿಚಾರಣೆ ನಡೆಯುತ್ತಿದೆ" ಎಂದು ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದರು.

  English summary
  Actor Darshan reaction about 25 crore fraud case after visits ACP office in mysuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X