ಅಪ್ಪಾಜಿ ಬೈಯುತ್ತಿದ್ದ ನೆನಪು ತುಂಬಾ ಕಾಡುತ್ತೆ; ನಟ ದರ್ಶನ್

ರೆಬಲ್ ಸ್ಟಾರ್ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ನಟ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಸಮಾಧಿಗೆ ಪೂಜೆ ಮಾಡಿ, ಅಂಬರೀಶ್ ಗೆ ಗೌರವ ಸಲ್ಲಿಸಿದರು.

Recommended Video

ಅಂಬಿ ಅಪ್ಪಾಜಿಯನ್ನು ನೆನೆದು ಭಾವುಕರಾದ ದರ್ಶನ್ | Ambareesh | Darshan | Filmibeat Kannada

ಅಂಬರೀಶ್ ಗೆ ಇಷ್ಟದ ತಿನಿಸುಗಳನ್ನು ಇಟ್ಟು ಭಕ್ತಿಯಿಂದ ನೆನಪಿಸಿಕೊಂಡರು. ಪೂಜೆಯ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ, ನಟ ದರ್ಶನ್ ಅಪ್ಪಾಜಿ ಯಾವಗಲೂ ಬೈಯುತ್ತಿದ್ದರು, ಭೈಯುವುದನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.

'ಅಪ್ಪಾಜಿ 24 ಗಂಟೆಯೂ ನಮ್ಮ ಜೊತೆ ಇರುತ್ತಾರೆ. ಈ ಸಮಾಧಿ ದೇವಸ್ಥಾನ ಇದ್ದ ಹಾಗೆ. ನಾನು ಈ ಕಡೆ ಬಂದಾಗಲೆಲ್ಲಾ ಸಮಾಧಿಗೆ ಬಂದು ಹೋಗುತ್ತೇನೆ. ನಾನು ಅವರನ್ನು ದೇವರಂತೆ ಪೂಜೆ ಮಾಡುತ್ತೀನಿ' ಎಂದು ಹೇಳಿದ್ದಾರೆ. ಇದೆ ಸಮಯದಲ್ಲಿ ಅವರು 'ಬೈಯುವುದನ್ನು ನಾನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೀನಿ, ಯಾವಾಗಲು ಬೈತಾ ಇದ್ರು, ಆದರೀಗ ಅದು ಇಲ್ಲಾ ಅನ್ನೋ ಬೇಜಾರಿದೆ. ಇಂದು ಆ ವಾಯ್ಸ್ ನಮ್ಮ ಜೊತೆ ಇಲ್ಲ. ಎಂದು ಹೇಳಿದ್ದಾರೆ.

Actor Darshan Reaction on Ambareesh second year death anniversary

ಇನ್ನು ಮಂಡ್ಯದಲ್ಲಿ ಅಂಬರೀಶ್ ಅವರ ಗುಡಿ ಕಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ದರ್ಶನ್, ಅವರ ಹೆಸರಿನಲ್ಲಿ ಗುಡಿ ಕಟ್ಟೋದರಲ್ಲಿ ತಪ್ಪಿಲ್ಲ. ನಾನು ಅವರನ್ನು ದೇವರಂತೆ ಪೂಜಿಸುತ್ತೇನೆ ಎಂದರು.

ಇನ್ನೂ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ದರ್ಶನ್, 'ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ.' ಎಂದು ಬರೆದುಕೊಂಡು ಅಂಬಿ ನೆನಪು ಮಾಡಿಕೊಂಡಿದ್ದಾರೆ.

More from Filmibeat

English summary
Actor Darshan Reaction on Ambareesh second year death anniversary. Sumalatha, Abhishek and Darshan Pay Tribute to Amabreesh on His Second Death Anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X