ಹೊಸ ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದರ್ಶನ್: 'ಕಾಟೇರ'ನ ತಯಾರಿ ಹೇಗಿದೆ?

'D56' ಚಿತ್ರಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹೊಸ ಲುಕ್‌ ಟ್ರೈ ಮಾಡಿದ್ದಾರೆ. ದಚ್ಚು ಹೊಸ ಹೇರ್‌ ಸ್ಟೈಲ್‌ ಗಮನ ಸೆಳೆದಿದ್ದು ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಅದರ ಬಗ್ಗೆ ಅವರು ಮಾತನಾಡಿದ್ದಾರೆ. ತರುಣ್ ಸುಧೀರ್ ನಿರ್ದೇಶನದಲ್ಲಿ 'D56' ಸಿನಿಮಾ ಮೂಡಿ ಬರಲಿದೆ.

Recommended Video

ಹೇರ್ ಸ್ಟೈಲ್ ಬಗ್ಗೆ ದರ್ಶನ್ ಏನಂದ್ರು | Filmibeat Kannada

ಪೋಲೆಂಡ್‌ನಿಂದ 'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿಬಂದ ಮರು ದಿನವೇ ದರ್ಶನ್ ಹೊಸ ಹೇರ್‌ಸ್ಟೈಲ್‌ನಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದರು. ನೋಡ ನೋಡುತ್ತಿದ್ದಂತೆ ಆ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 'D56' ಸಿನಿಮಾ ಫೋಟೊಶೂಟ್‌ಗಾಗಿ ದರ್ಶನ್‌ ಈ ಸ್ಟೈಲ್ ಟ್ರೈ ಮಾಡಿದ್ದಾರೆ ಅನ್ನುವುದು ಗೊತ್ತಾಯಿತು. 'ಕ್ರಾಂತಿ' ಲುಕ್‌ಗೆ ಹೋಲಿಸಿದರೆ ಹೊಸ ಸಿನಿಮಾ ಲುಕ್ ಸಖತ್ ಟ್ರೆಂಡಿಯಾಗಿದೆ. ನಿರ್ದೇಶಕ ತರುಣ್ ಸುಧೀರ್ ತಮ್ಮ ಸಿನಿಮಾ ಹೀರೊನ ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಇಂದು (ಆಗಸ್ಟ್‌ 05) ಬಹಳ ಅದ್ಧೂರಿಯಾಗಿ 'D56' ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮುಹೂರ್ತ ಸಮಾರಂಭಕ್ಕೆ ದರ್ಶನ್ ಕಿತ್ತಳೆ ಬಣ್ಣದ ಟೀಶರ್ಟ್ ತೊಟ್ಟು ರಾಯಲ್ ಎಂಟ್ರಿ ಕೊಟ್ಟರು. ಚಿತ್ರಕ್ಕೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟಿ ಮಾಲಾಶ್ರೀ, ಪುತ್ರಿ ರಾಧನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.

 ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದಾಸ

ಹೇರ್‌ಸ್ಟೈಲ್ ಸೀಕ್ರೆಟ್ ಬಿಚ್ಚಿಟ್ಟ ದಾಸ

ನಿಮ್ಮ ಹೊಸ ಹೇರ್‌ಸ್ಟೈಲ್ ತುಂಬಾ ಚೆನ್ನಾಗಿದೆ. ಏನಿದರ ಸೀಕ್ರೆಟ್ ಎಂದು ಕೇಳಿದ್ದಕ್ಕೆ "ನನ್ನದೇನು ಇಲ್ಲ, ಎಲ್ಲಾ ತರುಣ್‌ ಹೇಳಿದಂತೆ. ಹೇರ್ ಸ್ವಲ್ಪ ಎಕ್ಸ್‌ಟೆಂಡ್ ಮಾಡ್ದೆ ಅಷ್ಟೆ" ಎಂದು ದರ್ಶನ್ ಹೇಳಿದ್ದಾರೆ. ಈ ಹಿಂದೆ 'ರಾಬರ್ಟ್' ಚಿತ್ರದಲ್ಲೂ ದರ್ಶನ್‌ನ ಹೊಸ ಲುಕ್‌ನಲ್ಲಿ ತೋರಿಸಿ ನಿರ್ದೇಶಕ ತರುಣ್ ಸುಧೀರ್ ಗೆದ್ದಿದ್ದರು.

 'D56' ಸಿನಿಮಾ ಟೈಟಲ್‌ ಏನು?

'D56' ಸಿನಿಮಾ ಟೈಟಲ್‌ ಏನು?

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 56ನೇ ಸಿನಿಮಾ. ಹಾಗಾಗಿ 'D56' ಅನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಶುರುವಾಗಿದೆ. 'ಕಾಟೇರಾ' ಸೇರಿದಂತೆ ಎರಡ್ಮೂರು ಹೆಸರುಗಳು ಚರ್ಚೆಯಲ್ಲಿದ್ದು ಯಾವುದಾದರೂ ಒಂದು ಟೈಟಲ್‌ ಫೈನಲ್ ಆಗುವ ನಿರೀಕ್ಷೆಯಿದೆ. ಈ ಬಗ್ಗೆ ದರ್ಶನ್ "ಇವತ್ತಿನಿಂದ 'D56' ಶುರುವಾಗ್ತಿದೆ. ಟೈಟಲ್‌ ರಿಜಿಸ್ಟರ್ ಮಾಡಿಸಿದ್ದೀವಿ. ಇನ್ನು ಸ್ವಲ್ಪ ದಿನದಲ್ಲಿ ಟೈಟಲ್ ಏನು ಅಂತ ಹೇಳ್ತಿವಿ. ರಾಕ್‌ಲೈನ್‌ ಪ್ರೊಡಕ್ಷನ್‌ನಲ್ಲಿ ಸೇಮ್‌ ತರುಣ್, ಸುಧಾ 'ರಾಬರ್ಟ್' ಟೀಂ ಏನಿತ್ತೋ ಅದೇ ಟೀಂ ಸೇರಿ ಬೇರೆ ತರಹದ ಒಂದು ಸಿನಿಮಾ ಮಾಡ್ತಿದ್ದೀವಿ. ಇನ್ನುಳಿದ ವಿಚಾರವನ್ನು ಶೀಘ್ರದಲ್ಲೇ ಹೇಳ್ತೀವಿ" ಎಂದರು.

 ಮಾಲಾಶ್ರೀ ಮಗಳ ಬಗ್ಗೆ ದರ್ಶನ್ ಮಾತು

ಮಾಲಾಶ್ರೀ ಮಗಳ ಬಗ್ಗೆ ದರ್ಶನ್ ಮಾತು

'D56' ಚಿತ್ರಕ್ಕೆ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಬಗ್ಗೆ ದರ್ಶನ್‌ "ಮಾಲಾಶ್ರೀ ಅವರ ಬಗ್ಗೆ ಮಾತನಾಡೋಕೆ ಆಗುತ್ತಾ, ನಮಗೆ ಆ ಯೋಗ್ಯತೆ ಇದ್ಯಾ, ಇನ್ನು ಅವರ ಮಗಳ ಬಗ್ಗೆ ಏನ್ ಹೇಳುವುದು. ಹೊಸಬರು ಬರಬೇಕು. ಅವರಿಗೆ ಆಲ್‌ ಬೆಸ್ಟ್ ಏನ್ ಹೇಳುವುದು. ಅವರು ಈಗಾಗಲೇ ಪ್ರಿಪೇರ್ ಆಗಿ ಬಂದಿದ್ದಾರೆ. ತುಂಬಾ ಚೆನ್ನಾಗಿ ಪ್ರಿಪೇರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಕುರಿತು ಮತ್ತಷ್ಟು ಮಾಹಿತಿ ನೀಡುತ್ತೇವೆ" ಎಂದು ತಿಳಿಸಿದರು.

 ಆಗಸ್ಟ್‌ 16ರಿಂದ 'D56' ಶೂಟಿಂಗ್

ಆಗಸ್ಟ್‌ 16ರಿಂದ 'D56' ಶೂಟಿಂಗ್

ಒಂದ್ಕಡೆ 'ಕ್ರಾಂತಿ' ಸಿನಿಮಾ ಪೋಸ್ಟ್‌ ಪ್ರೊಡಕ್ಷನ್ ವರ್ಕ್ ನಡೀತಿದ್ದು, ಆಗಸ್ಟ್ 16ರಿಂದ 'D56' ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್‌ ವರ್ಕ್‌ನಲ್ಲಿ ತರುಣ್ ಸುಧೀರ್ ಅಂಡ್ ಟೀಂ ಬ್ಯುಸಿಯಾಗಿದ್ದು, ವರ್ಷಾಂತ್ಯಕ್ಕೆ ಶೂಟಿಂಗ್ ಮುಗಿಸುವ ಪ್ರಯತ್ನ ನಡೀತಿದೆ. ಮುಂದಿನ ವರ್ಷ ಸಮ್ಮರ್ ವೇಳೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

 ನೈಜ ಘಟನೆಗಳನ್ನು ಆಧರಿಸಿದ ಚಿತ್ರ

ನೈಜ ಘಟನೆಗಳನ್ನು ಆಧರಿಸಿದ ಚಿತ್ರ

'D56' ಪಕ್ಕಾ ದರ್ಶನ್‌ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಹ ಕಮರ್ಷಿಯಲ್ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ತರುಣ್ ಸುಧೀರ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. 'D56' ಥೀಮ್ ಪೋಸ್ಟರ್‌ನಲ್ಲಿರೋ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ.." ಅನ್ನುವ ಸಾಲು ಬಹಳ ಕುತೂಹಲ ಕೆರಳಿಸಿದೆ.

More from Filmibeat

English summary
Actor Darshan Reveals The Secret Behind His Latest Hair Style. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X