For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್‌ರ 35 ವರ್ಷದ ಹಳೆ ಫೋಟೊ ವೈರಲ್: ಫೋಟೊದಲ್ಲಿ ಇರುವ ವಿಶೇಷತೆ ಏನು?

  |

  ನಟ ದರ್ಶನ್ ಸದ್ಯ ಕನ್ನಡದ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರು. ದರ್ಶನ್ ಸಿನಿಮಾ ಜರ್ನಿಯೇ ಒಂದು ರೀತಿ ರೋಚಕ. ಗಾಡ್‌ ಫಾದರ್‌ ಇಲ್ಲದೆ ಬೆಳೆದು ನಿಂತ ಭೂಪತಿ ಈ ಚಾಲೆಂಜಿಂಗ್‌ ಸ್ಟಾರ್. ಆರಂಭದಲ್ಲಿ ಲೈಟ್ ಬಾಯ್‌ ಆಗಿ ಕೆಲಸ ಶುರು ಮಾಡಿದ ದರ್ಶನ್ ಬಳಿಕ ನಟರಾಗಿ ಕೊಟ್ಯಂತರ ಅಭಿಮಾನಿಗಳನ್ನು ಪಡೆದ ಒಡೆಯ.

  ದರ್ಶನ್ ಅವರು ಚಿಕ್ಕ ವಯಸ್ಸಿಂದಲೇ ಅಭಿನಯದ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಸಿನಿಮಾರಂಗಕ್ಕೆ ಬರುವ ಮುನ್ನ ಹಲವಾರು ನಾಟಕಗಳಲ್ಲಿ ಅಭಿನಿಸಿದ್ದಾರೆ. ಹೌದು ನಟ ದರ್ಶನ್ ಸಿನಿಮಾರಂಗಕ್ಕೆ ಯಾವುದೇ ತಯಾರಿ ಇಲ್ಲದೆ ಬಂದವರಲ್ಲ. ಬದಲಿಗೆ ಅವರು ನೀನಾಸಂನಲ್ಲಿ ಹಲವು ವರ್ಷ ಅಭಿನಯ ತರಬೇತಿ ಪಡೆದು ಬಂದವರು.

  ನಟ ದರ್ಶನ್ ಅವರು ಚಿತ್ರರಂಗಕ್ಕೆ ಬರುವ ಮುನ್ನ ಸಾಕಷ್ಟು ನಾಟಕಗಳಲ್ಲಿ ಹತ್ತು, ಹಲವು ಪಾತ್ರಗಳಲ್ಲಿ ಅಭಿನಯಿದ್ದಾರೆ. ಹಾಗೆ ನಟ ದರ್ಶನ್ ಅಭಿನಯಿಸಿರುವ ನಾಟಕದ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ ಹಿರಿಯ ನಟ ಮಂಡ್ಯ ರಮೇಶ್. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  'ರಾಬಿನ್ ಗುಡ್ಫೆಲೊ' ನಾಟಕದಲ್ಲಿ ರಾಜನಾಗಿದ್ದ ನಟ ದರ್ಶನ್!

  'ರಾಬಿನ್ ಗುಡ್ಫೆಲೊ' ನಾಟಕದಲ್ಲಿ ರಾಜನಾಗಿದ್ದ ನಟ ದರ್ಶನ್!

  ಹಿರಿಯ ನಟ ಮಂಡ್ಯ ರಮೇಶ್ ಇತ್ತೀಚೆಗೆ ಮಾಡಿದ್ದ ಟ್ವೀಟ್ ಒಂದು ಸಾಕಷ್ಟು ಗಮನ ಸೆಳೆದಿದೆ. ಜೊತೆಗೆ ವೈರಲ್ ಆಗಿದೆ. ಇದಕ್ಕೆ ಕಾರಣ ಅವರು ಹಂಚಿಕೊಂಡಿರುವ ಹಳೆಯ ಫೋಟೊ. ಈ ಫೋಟೊದಲ್ಲಿ ನಟ ದರ್ಶನ್ ಅವರು ಇದ್ದಾರೆ. 'ರಾಬಿನ್ ಗುಡ್ಫೆಲೊ' ಎನ್ನುವ ನಾಟಕದ ಫೋಟೊ ಇದು. ಇಲ್ಲಿ ರಾಜನಂತೆ ಕಿರೀಟ ತೊಟ್ಟು ನಿಂತಿರುವುದು ಮತ್ಯಾರು ಅಲ್ಲ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು 35 ವರ್ಷದ ಹಿಂದೆ ಈ ನಾಟಕದಲ್ಲಿ ನಟ ದರ್ಶನ್ ಅಭಿನಯಿಸಿದ್ದಾರೆ. ಅದರಲ್ಲೂ ಅವರು ರಾಜನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ವಿಚಾರವನ್ನು ಮಂಡ್ಯ ರಮೇಶ್ ಅವರು ಹಂಚಿಕೊಂಡಿದ್ದಾರೆ.

  ದರ್ಶನ್ ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಊಹಿಸಿರಲಿಲ್ಲ: ಮಂಡ್ಯ ರಮೇಶ್!

  ದರ್ಶನ್ ಅಭಿನಯದ ನಾಟಕದ ಫೋಟೊ ಹಂಚಿಕೊಂಡಿರುವ ಮಂಡ್ಯ ರಮೇಶ್ ಅವರು, ದರ್ಶನ್ ಬಗ್ಗೆ ಒಂದೆರಡು ಸಾಲುಗಳನ್ನು ಬರೆದು ಕೊಂಡಿದ್ದಾರೆ. ಜೊತೆಗೆ ಈಗ ಆ ಫೋಟೊ ಸಿಕ್ಕಿದ್ದು ಹೇಗೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. "'ನಟನ'ದ ಶಿಷ್ಯ ಮಿತ್ತ್ರೋತ್ತಮರು ಹತ್ತಾರು ಸಾವಿರ ಪುಸ್ತಕಗಳನ್ನು ಕ್ರಮವಾಗಿ ಜೋಡಿಸುವ ಕೈಂಕರ್ಯದಲ್ಲಿ ಕರಗಿಹೋಗಿದ್ದಾಗ ನಡುವಿನಲ್ಲಿ ಈ ಚಿತ್ರ ಸಿಕ್ಕಿತು! 35 ವರುಷದ ಹಿಂದೆ ಈ ನಾಟಕ ಮಾಡಿಸುವಾಗ, ಅವನು ಈ 'ಎತ್ತರ'ಕ್ಕೆ ಏರಬಹುದು ಅಂತಾ ನಮಗಾರಿಗೂ ಅನಿಸಿರಲಿಲ್ಲ! 'ರಾಬಿನ್ ಗುಡ್ಫೆಲೊ' ನಾಟಕದ ರಾಜ ಅವನು!...ಗುರುತಿಸಿ..." ಎಂದು ಬರೆದು ದರ್ಶನ್ ಅವರಿಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದಾರೆ.

  ಈ ಹಿಂದೆ ನಿನಾಸಂ ನಾಟಕದ ಫೋಟೋ ಕೂಡ ರಿವೀಲ್ ಆಗಿತ್ತು!

  ಈ ಹಿಂದೆ ನಿನಾಸಂ ನಾಟಕದ ಫೋಟೋ ಕೂಡ ರಿವೀಲ್ ಆಗಿತ್ತು!

  ಮಂಡ್ಯ ರಮೇಶ್‌ ಅವರು ಹೀಗೆ ಫೋಟೊ ಹಂಚಿಕೊಳ್ಳುತ್ತಲೇ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ದರ್ಶನ್ ಅಂದು ರಾಜನೆ, ಇಂದೂ ರಾಜನೆ ಎನ್ನುವ ಕಮೆಂಟ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಈ ಹಿಂದೆ ದರ್ಶನ್‌ ಅವರು ನೀನಾಸಂನಲ್ಲಿ ಅಭಿನಯಿಸಿದ್ದ ನಾಟಕದ ಒಂದು ಫೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದು ಕೂಡ ಸಿಕ್ಕಪಟ್ಟೆ ವೈರಲ್ ಆಗಿತ್ತು.

  ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಇರುವ ನಟ ದರ್ಶನ್!

  ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಇರುವ ನಟ ದರ್ಶನ್!

  ನಟ ದರ್ಶನ್ ಅವರು ಸದ್ಯ ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಚಿತ್ರದ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಆದಷ್ಟು ಬೇಗ ಈ ಚಿತ್ರವನ್ನು ಮಾಡಿ ಮುಗಿಸಲಿದ್ದಾರೆ ನಟ ದರ್ಶನ್. ಇನ್ನು ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಕ್ರಾಂತಿ ಚಿತ್ರದ ಟೀಸರ್ ನಿರೀಕ್ಷೆಯಲ್ಲಿ ಇದ್ದಾರೆ ದರ್ಶನ್ ಅಭಿಮಾನಿಗಳು. ಈ ಚಿತ್ರದಲ್ಲಿ ದರ್ಶನ್ ಅಕ್ಷರ ಕ್ರಾಂತಿ ಮಾಡಲಿದ್ದಾರಂತೆ. ಹಾಗಾಗಿ ಚಿತ್ರದಲ್ಲಿ ಅವರ ಲುಕ್ ಹೇಗೆ ಇರಲಿದೆ ಎನ್ನುವ ಕುತೂಹಲ ಮೂಡಿದೆ.

  English summary
  Actor Darshan 35 Year Old Photo Going Viral In Social Media,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X