For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಶೂಟಿಂಗ್ ಡೇ ದಿನಚರಿ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ

  |

  ನಟ ನಟಿಯರ ದಿನಚರಿ ಹೇಗಿರುತ್ತೆ, ಅವರ ಜೀವನಶೈಲಿ ಏನು, ಶೂಟಿಂಗ್ ದಿನಗಳಲ್ಲಿ ಹೇಗೆ ತಯಾರಾಗ್ತಾರೆ, ಮೇಕಪ್ ಹೇಗೆ ಮಾಡಿಕೊಳ್ತಾರೆ, ಫಿಟ್‌ನೆಸ್ ಹೇಗೆ ಕಾಯ್ದುಕೊಳ್ಳುತ್ತಾರೆ ಎಂದೆಲ್ಲ ತಿಳಿದುಕೊಳ್ಳುವ ಕುತೂಹಲ ಹಲವು ಅಭಿಮಾನಿಗಳಿಗೆ ಇದ್ದೇ ಇರುತ್ತೆ. ಇದನ್ನು ತಿಳಿದುಕೊಳ್ಳಲು ಸ್ಟಾರ್ ನಟ ನಟಿಯರನ್ನು ಫಾಲೋ ಮಾಡ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಪ್‌ಡೇಟ್ಸ್‌ಗಳನ್ನು ತಿಳಿದುಕೊಳ್ಳುತ್ತಾರೆ. ಸದ್ಯ ಈಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ಇದ್ದಾಗ ತಮ್ಮ ದಿನಚರಿ ಹೇಗಿರುತ್ತೆ, ಜಿಮ್ ವರ್ಕ್‌ಔಟ್ ಹೇಗೆ ಮಾಡುತ್ತೇನೆ ಎಂಬುದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ದಿನಚರಿ ಹೇಗಿರತ್ತೆ ನೀವೇ ನೋಡಿ. | darshan | challenging star life style

  ನಿರ್ಮಾಪಕಿ ಶೈಲಜಾ ನಾಗ್ ಮತ್ತು ನಿರ್ದೇಶಕ ಬಿ ಸುರೇಶ್ ಅವರ ಡಿ ಬೀಟ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ದರ್ಶನ್ ಅವರ ದಿನಚರಿ ರಿವೀಲ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೊನ್ನೆ ತಾನೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಮುಹೂರ್ತ ನೆರವೇರಿದೆ. ಅವತ್ತು ತಾನು ಹೇಗೆ ಸಿದ್ಧತೆ ಮಾಡಿಕೊಂಡಿದ್ದೆ ಎಂಬುದನ್ನು ಈ ವೀಡಿಯೋದಲ್ಲಿ ದರ್ಶನ್ ತೋರಿಸಿಕೊಟ್ಟಿದ್ದಾರೆ. ಅಲ್ಲದೇ ತಾನೇ ಕ್ರಾಂತಿ ಸಿನಿಮಾ ತಂಡವನ್ನು ಪ್ರಶ್ನೆ ಕೇಳುತ್ತಾ ಮಾತನಾಡಿಸಿರೋ ಶೈಲಿ ಎಲ್ಲರಿಗೂ ಹಿಡಿಸಿದೆ.

  ಶೂಟಿಂಗ್ ದಿನಗಳಲ್ಲಿ ಬೆಳಗ್ಗೆ 4:30ಕ್ಕೆ ದರ್ಶನ್ ಎದ್ದು ತಮ್ಮ ಪುಟ್ಟ ಜಿಮ್ ಸೇರಿಕೊಳ್ಳುತ್ತಾರೆ. ಮೊದಲಿಗೆ ಬಾಡಿ ಸ್ಟ್ರೆಚ್ ಮಾಡೋ ದರ್ಶನ್ ನಂತರದಲ್ಲಿ ವರ್ಕ್ಔಟ್ ಆರಂಭಿಸುತ್ತಾರೆ. ದರ್ಶನ್ ಅವರ ಜಿಮ್ ಕೋಚ್ ಮತ್ತು ಪರ್ಸನಲ್ ಟ್ರೈನರ್ ಹೇಮಂತ್ ಮಾರ್ಗದರ್ಶನದಲ್ಲಿ ದೇಹ ಹುರಿ ಗೊಳಿಸೋ ದಾಸ ದರ್ಶನ್, ಕ್ರಾಂತಿ ಸಿನಿಮಾಗಾಗಿ ಮತ್ತೆ ತನ್ನ ದೇಹದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಸುಮಾರು ಒಂದು ವರ್ಷದಿಂದ ವರ್ಕ್‌ಔಟ್ ನಿಲ್ಲಿಸಿದ್ದ ದರ್ಶನ್ ಈಗ ಮತ್ತೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಈಗಿನ ಯುವಕರಿಗೂ ಒಂದು ಕಿವಿ ಮಾತು ಹೇಳಿದ್ದಾರೆ. "ನೀವು ಯಾವ ಜಿಮ್‌ಗೆ ಹೋಗ್ತೀರ ಅನ್ನೋದು ಮುಖ್ಯವಲ್ಲ, ಹೇಗೆ ವರ್ಕ್‌ಒಔಟ್ ಮಾಡ್ತೀರ ಅನ್ನೋದು ಮುಖ್ಯ, ಯಾವ ಜಿಮ್‌ಗೆ ಹೋದರು ಕಬ್ಬಿಣವನ್ನೆ ಹೊರಬೇಕೆ ಹೊರತು ಬೇರೆ ಅಲ್ಲ" ಎಂದಿದ್ದಾರೆ.

  5 ಗಂಟೆಯಿಂದ 7:30 ವರೆಗು ದೇಹ ದಂಡಿಸೋ ದರ್ಶನ್, 7:30 ಯಿಂದ 8 ಗಂಟೆವರೆಗು ಫ್ರೆಶ್ ಅಪ್ ಆಗಿ ಶೂಟಿಂಗ್ ಜಾಗಕ್ಕೆ ತೆರಳುತ್ತಾರೆ. ದಾರಿ ಮಧ್ಯದಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸೋದು ದರ್ಶನ್‌ಗೆ ರೂಢಿಯಂತೆ. "ನಾನು ದೇವರನ್ನು ಪೂಜಿಸುತ್ತೇನೆ ಆದರೆ ಮೂಢನಂಬಿಕೆ ಮಾಡಲ್ಲ ಎಂದಿರೋ ದರ್ಶನ್, ನಾನು ದೇವರಲ್ಲಿ ನನಗಾಗಿ ಏನು ಕೇಳಿಕೊಳ್ಳೊದಿಲ್ಲ, ಬದಲಾಗಿ ಯಾರು ಹಸಿವಿನಿಂದ ಮಲಗಬಾರ್ದು, ಹಸಿವಿನ ಬವಣೆಯಲ್ಲಿರೋರಿಗೆ ಪ್ರತಿನಿತ್ಯ ಊಟ ದೊರಕುವಂತೆ ಮಾಡು" ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  ಅಲ್ಲಿಂದ ಸೀದಾ ಕ್ರಾಂತಿ ಮುಹೂರ್ತ ಜಾಗಕ್ಕೆ ತೆರಳಿದ ದರ್ಶನ್ ತಮ್ಮ ಕ್ಯಾರವಾನ್‌ನಲ್ಲಿ ಮೇಕಪ್ ಮಾಡಿಸಿಕೊಂಡು ಬೆಳಗಿನ ಉಪಹಾರ ಸೇವಿಸುತ್ತಾರೆ. ಡಯೆಟ್‌ನಲ್ಲಿ ಇದ್ದರು, ವರ್ಕ್‌ಔಟ್ ಮಾಡಿದ್ರು ಉಪಹಾರದ ಜೊತೆಗೆ ವಡೆ ಬೇಕೆ ಬೇಕಂತೆ. ಉಪಹಾರದ ನಂತರದಲ್ಲಿ ಅಲ್ಲಿಗೆ ಬಂದ ಕ್ರಾಂತಿ ಸಿನಿಮಾ ನಿರ್ದೇಶಕ ವಿ. ಹರಿಕೃಷ್ಣ ಜೊತೆಗೆ ಮಾತಿಗಿಳಿದು, ಕ್ರಾಂತಿ ಸಿನಿಮಾ ಬಗ್ಗೆ ಮಾತು ಕಥೆ ನಡೆಸಿದ್ದಾರೆ. ಕ್ರಾಂತಿ ಸಿನಿಮಾದಲ್ಲಿ ಅಕ್ಷರ ಕ್ರಾಂತಿ ಮಾಡುತ್ತೇನೆ ಎಂದು ಹರಿಕೃಷ್ಣ ತಿಳಿಸಿದ್ರೆ, ಪಕ್ಕದಲ್ಲೆ ಇದ್ದ ಚಿತ್ರ ನಿರ್ಮಾಪಕಿ ಶೈಲಜಾ ನಾಗ್ ಕೂಡ ಕ್ರಾಂತಿ ಸಿನಿಮಾ ಎಲ್ಲರ ನಿರೀಕ್ಷೆಯಂತೆ ಬರಲಿದೆ ಎಂದಿದ್ದಾರೆ. ಹಾಗೆಯೇ ಚಿತ್ರದ ನಾಯಕಿ ರಚಿತ ರಾಮ್ ಅವ್ರನ್ನು ಮಾತಿಗೆ ಎಳೆದ ದರ್ಶನ್ ಸಿನಿಮಾ ಬಗ್ಗೆ ಹೇಗೆ ಅನ್ನಿಸುತ್ತಿದೆ ಎಂದು ಮಾತನಾಡಿಸಿದ್ದಾರೆ. ಕ್ರಾಂತಿ ಚಿತ್ರದ ಬಗ್ಗೆ ದರ್ಶನ್ ಕೂಡ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ಹೀಗೆ ಮಾತು ಮುಂದುವರೆಸಿದ ದರ್ಶನ್, ನನ್ನ ಬೆಳಗಿನ ದಿನಚರಿ ನೋಡಿದ್ರಿ, ಮುಂದಿನ ವೀಡಿಯೋದಲ್ಲಿ ನಾನು ಬೆಳಗ್ಗಿನಿಂದ ಸಂಜೆಯ ವರೆಗೂ ಏನೇನು ಮಾಡುತ್ತೇನೆ ಅದೆಲ್ಲವನ್ನು ನಿಮಗೆ ಪರಿಚಯ ಮಾಡಿಸುತ್ತೇನೆ ಎಂದು ಹೇಳಿ ಈ ವೀಡಿಯೊವನ್ನು ಮುಗಿಸಿದ್ದಾರೆ. ಎ ಡೇ ವಿತ್ ದರ್ಶನ್ ಹೆಸರಿನ ಈ ವೀಡಿಯೋ ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೀವ್ಸ್ ಪಡೆದುಕೊಳ್ಳುತ್ತಿದ್ದು, ಫ್ಯಾನ್ಸ್ ಇದನ್ನು ಶೇರ್ ಮಾಡಿ ಖುಷಿ ಪಡುತ್ತಿದ್ದಾರೆ.

  English summary
  Challenging star Darshan for the first time shared his daily routine of shooting and some interesting topics about shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X