For Quick Alerts
  ALLOW NOTIFICATIONS  
  For Daily Alerts

  ದರ್ಶನ್‌ ಫಾರಂ ಹೌಸ್‌ನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿ ಬಂಧನ

  |

  ನಟ ದರ್ಶನ್‌ ಒಡೆತನದ ವಿನೇಶ್ ಫಾರಂ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದಾಗಿ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

  ದರ್ಶನ್ ಫಾರ್ಮ್ ಹೌಸ್ ನಲ್ಲಿ ನಡೆಯಿತು ಅತಿ ದೊಡ್ಡ ದುರಂತ

  ವಿನೇಶ್ ಫಾರಂ ಹೌಸ್‌ನ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರಿ ವ್ಯಕ್ತಿಯೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಸಂತ್ರಸ್ತೆಯ ತಾಯಿ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  ಶಿವಮೊಗ್ಗದಿಂದ ಬಂದ ಕುಟುಂಬವೊಂದು ವಿನೇಶ್ ಫಾರಂ ಹೌಸ್‌ನಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಕುಟುಂಬದಲ್ಲಿ ತಾಯಿ, ತಂದೆ ಜೊತೆಗೆ 10 ವರ್ಷದ ಮಗಳು ಹಾಗೂ ಮಗನೊಬ್ಬನಿದ್ದ. ವರ್ಗಾವಣೆ ಪತ್ರದ ಸಮಸ್ಯೆಯಿಂದ ಮಗಳು ಶಾಲೆಗೆ ಹೋಗದೆ ಕುಟುಂಬದ ಜೊತೆಯೇ ವಾಸವಿದ್ದಳು. ಅದೇ ಫಾರಂ ಹೌಸ್‌ನಲ್ಲಿ ಕುದುರೆಗೆ ಲಾಯ ಹೊಡೆಯುವ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ನಜೀಮ್ ಎಂಬಾತ ಇದ್ದ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ಸೆಪ್ಟೆಂಬರ್ 13 ರಂದು ನಡೆದಿದ್ದು, ಸಂತ್ರಸ್ತೆಯ ತಾಯಿ ಸೆಪ್ಟೆಂಬರ್ 15 ರಂದು ದೂರು ನೀಡಿದ್ದಾರೆ.

  ಮಗಳ ಮೇಲೆ ನಜೀಮನಿಂದ ಅತ್ಯಾಚಾರ ಆಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಫಾರಂನ ಮ್ಯಾನೇಜರ್‌ ನಾಗರಾಜುಗೆ ಕರೆ ಮಾಡಿದಾಗ ಕೂಡಲೇ ಬಂದ ಅವರು ಪೊಲೀಸರಿಗೆ ದೂರು ನೀಡಿರೆಂದು ಸಲಹೆ ನೀಡಿ ಅವರೇ ದೂರು ಸಹ ಕೊಡಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  English summary
  Actor Darshan's Farmhouse worker booked for raping a minor girl and FIR filed against the accused in Mysuru Women police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X