For Quick Alerts
  ALLOW NOTIFICATIONS  
  For Daily Alerts

  ಐಪಿಎಲ್‌ ಶುರುವಾಗುತ್ತಿದ್ದಂತೆ ಮತ್ತೆ ವೈರಲ್ ಆಯ್ತು ದರ್ಶನ್ ಹಳೆ ವಿಡಿಯೋ

  |

  ಐಪಿಎಲ್ ಮತ್ತೆ ಬಂದಿದೆ. ಇಂದಿನಿಂದ ಐಪಿಎಲ್‌ 14 ನೇ ಸೀಸನ್‌ ಪ್ರಾರಂಭವಾಗಲಿದೆ. ಮೊದಲ ಪಂದ್ಯವೇ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ.

  ಬೆಟ್ಟಿಂಗ್ ಆಡೋರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿವಿಮಾತು | Filmibeat Kannada

  ಐಪಿಎಲ್‌ ಆರಂಭವಾದ ಕೂಡಲೆ ನಟ ದರ್ಶನ್‌ ಅವರ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗಿದೆ. ಪ್ರತಿ ಬಾರಿ ಐಪಿಎಲ್‌ ಆರಂಭದ ಸಮಯದಲ್ಲಿ ಈ ವಿಡಿಯೋ ವೈರಲ್ ಆಗುತ್ತದೆ. ಅದಕ್ಕೆ ಕಾರಣವೂ ಇದೆ.

  ಐಪಿಎಲ್‌ ಎಂಬುದು ಕ್ರಿಕೆಟ್‌ ಹಬ್ಬ ಹೌದು, ಆದರೆ ಜೊತೆಗೆ ಬೆಟ್ಟಿಂಗ್‌ ಭೂತವೂ ಐಪಿಎಲ್‌ ಜೊತೆಗೇ ಬರುತ್ತದೆ. ಹಲವಾರು ಯುವಕರು ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿ ಹಣ ಹಾಳುಮಾಡಿಕೊಂಡಿದ್ದಿದೆ. ಕೆಲವರು ಜೀವವನ್ನೂ ಕಳೆದುಕೊಂಡಿದ್ದಾರೆ.

  ಬೆಟ್ಟಿಂಗ್‌ ಹುಚ್ಚಿನ ಹಿಂದೆ ಬೀಳುವ ಯುವಕರನ್ನು ಎಚ್ಚರಿಸಿ ಕೆಲ ವರ್ಷಗಳ ಹಿಂದೆ ನಟ ದರ್ಶನ್‌ ವಿಡಿಯೋ ಒಂದನ್ನು ಮಾಡಿದ್ದರು. ಆ ವಿಡಿಯೋ ಐಪಿಎಲ್‌ ಆರಂಭದ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿಯೂ ಮತ್ತೆ ವೈರಲ್ ಆಗಿದೆ. ವಿಡಿಯೋದಲ್ಲಿ ದರ್ಶನ್ ಆಡಿರುವ ಮಾತುಗಳು ಸಾರ್ವಕಾಲಿಕ (ಕನಿಷ್ಟ ಬೆಟ್ಟಿಂಗ್ ಇರುವವರೆಗೂ) ಆದ್ದರಿಂದ ಮತ್ತೆ ವಿಡಿಯೋದ ಮೇಲೆ ಕಣ್ಣಾಡಿಸುವುದರಲ್ಲಿ ತಪ್ಪೇನೂ ಇಲ್ಲ.

  ವಿಡಿಯೋದಲ್ಲಿ ಮಾತನಾಡಿರುವ ದರ್ಶನ್, 'ಎಲ್ಲರೂ ಐಪಿಎಲ್‌ ಪ್ರಾರಂಭವಾದ ಕೂಡಲೆ ಬೆಟ್ಟಿಂಗ್‌ ಮೇಲೆ ಆಸಕ್ತಿ ಆರಂಭಿಸಿಕೊಂಡಿರುತ್ತಾರೆ. ಮ್ಯಾಚ್‌ ನೋಡುವುದಕ್ಕಿಂತಲೂ ಹೆಚ್ಚಾಗಿ ಬೆಟ್ಟಿಂಗ್‌ ಮೇಲೆ ಅವರಿಗೆ ಗಮನ ಇರುತ್ತದೆ. ಸೋತ್ರೆ ಇವನಿಂದ ಸಾಲ ಪಡೆದು ಅವನಿಗೆ ತೀರಿಸೋದು ಹೀಗೆ ನಡೆಯುತ್ತಿರುತ್ತದೆ. ಆದ್ದರಿಂದ ದಯವಿಟ್ಟು ಐಪಿಎಲ್‌ನ ಮ್ಯಾಚ್‌ ರೀತಿಯಲ್ಲಿ ನೋಡಿ ಎಂಜಾಯ್ ಮಾಡಿ. ಆಟಗಾರರು ಸಹ ಬಹಳ ಕಷ್ಟಪಟ್ಟು ಆಡುತ್ತಿರುತ್ತಾರೆ. ನೀವು ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ' ಎಂದಿದ್ದಾರೆ ದರ್ಶನ್.

  ದರ್ಶನ್ ಸಹ ಕ್ರಿಕೆಟ್ ಪ್ರೇಮಿಯೇ ಈ ಹಿಂದೆ ಸುದೀಪ್ ಅವರೊಟ್ಟಿಗೆ ಸಿನಿಮಾ ತಾರೆಯರ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಿದ್ದರು. ದರ್ಶನ್, ಅಭಿಷೇಕ್ ಅಂಬರೀಶ್ ಹಾಗೂ ಇನ್ನೂ ಕೆಲವು ಗೆಳೆಯರು ಆಗಾಗ್ಗೆ ಕ್ರಿಕೆಟ್ ಆಡುತ್ತಿರುತ್ತಾರೆ.

  English summary
  Actor Darshan's old video went viral again. In the video Darhan talking about not to do betting on IPL.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X