»   » ಶಬರಿಮಲೆ ಯಾತ್ರೆಗೆ ಹೊರಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಶಬರಿಮಲೆ ಯಾತ್ರೆಗೆ ಹೊರಟ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಕಳೆದ ತಿಂಗಳಲ್ಲಿ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿದ್ದ ದಾಸ, ಈಗ ತಮ್ಮ ಸ್ನೇಹಿತರ ಜೊತೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೊರಟಿದ್ದಾರೆ.

ಹಾಗಾದ್ರೆ, ದರ್ಶನ್ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಹೇಗಿತ್ತು? ದರ್ಶನ್ ಅವರ ಇರುಮುಡಿ ಕಾರ್ಯಕ್ರಮ ಹೇಗಿತ್ತು? ದರ್ಶನ್ ಜೊತೆಯಲ್ಲಿ ಯಾರೆಲ್ಲ ಶಬರಿಮಲೆಗೆ ಹೊರಟಿದ್ದಾರೆ ಎಂಬುದನ್ನ ಮುಂದೆ ನೀಡಿರುವ ಚಿತ್ರಗಳಲ್ಲಿ ನೋಡಿ......

ಶಬರಿಮಲೆಗೆ ಹೊರಟ ದರ್ಶನ್

ಅಯ್ಯಪ್ದ ಸ್ವಾಮಿಯ ಮಾಲೆ ಧರಿಸಿದ್ದ ನಟ ದರ್ಶನ್, ತಮ್ಮ ಸ್ನೇಹಿತರ ಜೊತೆ ಸೇರಿ ಇಂದು (ಏಪ್ರಿಲ್ 6) ಶಬರಿಮಲೆ ಯಾತ್ರೆಗೆ ತೆರೆಳಿದ್ದಾರೆ.

ಶ್ರೀರಾಮಪುರದಲ್ಲಿ ಇರುಮುಡಿ

ಶಬರಿಮಲೆಗೆ ಹೊರಡುವ ಮುನ್ನ, ಶ್ರೀರಾಮಪುರದಲ್ಲಿವರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ದರ್ಶನ್ ಮನೆಯಲ್ಲಿ ಪೂಜೆ

ಇರುಮುಡಿ ಕಾರ್ಯಕ್ರಮಕ್ಕೂ ಮುಂಚೆ ನಟ ದರ್ಶನ್ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ನೆರವೇರಿಸಲಾಯಿತು. ದರ್ಶನ್, ದಿನಕರ್ ತೂಗುದೀಪ ಸೇರಿದಂತೆ ಎಲ್ಲ ಮಾಲೆಧಾರಿಗಳು ಭಕ್ತರು ಭಾಗಿಯಾಗಿದ್ದರು.

ದರ್ಶನ್ ಜೊತೆ ಯಾರೆಲ್ಲ ಹೋಗುತ್ತಿದ್ದಾರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ನಿರ್ದೇಶಕರಾದ ಶಿವಮಣಿ, ಎಚ್.ವಾಸು, ಎಂ.ಡಿ.ಶ್ರೀಧರ್, ಸಹೋದರ ದಿನಕರ್ ತೂಗುದೀಪ ಮತ್ತು ಸ್ನೇಹಿತರು ಸೇರಿದಂತೆ ಒಟ್ಟು 36 ಮಂದಿ ಅಯ್ಯಪ್ಪನ ಯಾತ್ರೆಗೆ ತೆರಳಿದ್ದಾರೆ.

ಏಪ್ರಿಲ್ 8 ರಂದು ವಾಪಸ್

ಇಂದು ಬೆಳಿಗ್ಗೆ ಶಬರಿಮಲೆ ಯಾತ್ರೆಗೆ ಹೊರಟಿರುವ ದರ್ಶನ್ ಮತ್ತು ತಂಡ, ಏಪ್ರಿಲ್ 8 ರಂದು ಸ್ವಾಮಿಯ ದರ್ಶನ ಪಡೆದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಮಾರ್ಚ್ 31 ರಂದು ಮಾಲೆ ಧರಿಸಿದ ದರ್ಶನ್

ಕಳೆದ ತಿಂಗಳು ಮಾರ್ಚ್ 31 ರಂದು 'ಚಕ್ರವರ್ತಿ' ದರ್ಶನ್ ಮತ್ತು ಸ್ನೇಹಿತರು ಅಯ್ಯಪ್ಪ ಮಾಲೆ ಧರಿಸಿದ್ದರು.

ಚಿತ್ರಕೃಪೆ: ಡಿ-ಕಂಪನಿ

English summary
Actor Darshan along with Dinakar thogudeep, Director MD Sridhar, H.Vasu, Shivamani and others have started Sabarimala Yatra Today (April 6th) Morning. After offering Prayers to Lord Ayyappa, the team will be back To Banglore on April 8.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada