ದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜ

Recommended Video

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ದರ್ಶನ್ ಮಗ ವಿನೀಶ್ ದರ್ಶನ್ | FILMIBEAT KANNADA

ಯಾವುದೇ ಭಾಷೆಯ ಚಿತ್ರರಂಗ ತೆಗೆದುಕೊಳ್ಳಿ. ಅಲ್ಲಿ ಬಹುಪಾಲು ದೊಡ್ಡ ನಟರ ಮಕ್ಕಳು ತಾವು ಕೂಡ ಹೀರೋ ಆಗುತ್ತಾರೆ. ಅದರಲ್ಲಿ ಕೆಲವರು ಗೆಲ್ಲುತ್ತಾರೆ. ಎನ್ನೂ ಕೆಲವರು ಸೋಲುತ್ತಾರೆ.

ಕನ್ನಡ ಚಿತ್ರರಂಗದಲ್ಲಿಯೂ ಅನೇಕ ಸ್ಟಾರ್ ಗಳ ಮಕ್ಕಳು ಇಂಡಸ್ಟ್ರಿಗೆ ಬಂದಿದ್ದಾರೆ. ರಾಜ್ ಕುಮಾರ್, ಅಂಬರೀಶ್, ದೇವರಾಜ್ ಹೀಗೆ ಸ್ಟಾರ್ ಗಳ ಪುತ್ರರು ಸಿನಿಮಾ ಕೆಲಸವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಅದೇ ರೀತಿ ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್ ಹೀರೋ ಆದರು. ಇದೀಗ ದರ್ಶನ್ ಮಗ ವಿನೀಶ್ ಸಹ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಹೌದು, ವಿನೀಶ್ ಚಿತ್ರರಂಗಕ್ಕೆ ಬರುವುದು ನೂರಕ್ಕೆ ನೂರರಷ್ಟು ಪಕ್ಕಾ ಆಗಿದೆ. ಯಾಕಂದರೆ, ನಟ ದರ್ಶನ್ ಅವರೇ ಈ ಮಾತನ್ನು ಹೇಳಿದ್ದಾರೆ. ಮುಂದೆ ಓದಿ...

ಜೂನಿಯರ್ ಚಾಲೆಂಜಿಂಗ್ ಸ್ಟಾರ್

ಜೂನಿಯರ್ ಚಾಲೆಂಜಿಂಗ್ ಸ್ಟಾರ್

ಸಾಮಾನ್ಯವಾಗಿಯೇ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುತ್ತಾರಾ ಎನ್ನುವ ನಿರೀಕ್ಷೆ ಅನೇಕರಿಗೆ ಇರುತ್ತದೆ. ಸ್ಟಾರ್ ಗಳ ಮಕ್ಕಳ ಸಿನಿಮಾವನ್ನು ನೋಡುವ ಆಸೆ ಅನೇಕರು ಹೊಂದಿರುತ್ತಾರೆ. ಅಂತಹ ಆಸೆ ದರ್ಶನ್ ಅಭಿಮಾನಿಗಳಿಗೆ ಇದ್ದರೆ, ಅವರ ಆಸೆ ಖಂಡಿತ ಈಡೇರುತ್ತದೆ. ನಟ ದರ್ಶನ್ ತಮ್ಮ ಪುತ್ರ ವಿನೀಶ್ ರನ್ನು ಚಿತ್ರರಂಗಕ್ಕೆ ತರುತ್ತಿದ್ದಾರೆ.

ನಮ್ಮದೊಂದು ಬ್ಯಾಂಡ್ ಬೇಕಲ್ವಾ

ನಮ್ಮದೊಂದು ಬ್ಯಾಂಡ್ ಬೇಕಲ್ವಾ

ನಿನ್ನೆ 'ಯಜಮಾನ' ಸಿನಿಮಾ ಸಕ್ಸಸ್ ಮೀಟ್ ನಲ್ಲಿ ಸುದ್ದಿಗಾರರ ಪ್ರಶ್ನೆಗೆ ದರ್ಶನ್ ಉತ್ತರ ನೀಡಿದರು. ನಿಮ್ಮ ಮಗ ವಿನೀಶ್ ಸಹ ಇಂಡಸ್ಟ್ರಿಗೆ ಬರುತ್ತಾರಾ ಎಂಬ ಪ್ರಶ್ನೆಗೆ ''ನನ್ನ ಮಗನನ್ನು ಸಹ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೊದ ಮೇಲೆ ನಮ್ಮದೊಂದು ಬ್ಯಾಂಡ್ ಬೇಕಲ್ವಾ'' ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.

ಯಾವಾಗ ನೆಕ್ಸ್ ಅಂತ ದಿನ ಕೇಳುತ್ತಾನೆ

ಯಾವಾಗ ನೆಕ್ಸ್ ಅಂತ ದಿನ ಕೇಳುತ್ತಾನೆ

ಮಗನ ಬಗ್ಗೆ ಮಾತನಾಡಿದ ದರ್ಶನ್ ''ಯಜಮಾನ' ಸಿನಿಮಾ ನೋಡಿ ಅವನ ಬಗ್ಗೆ ಬಿಟ್ಟು ಬೇರೆಯವರ ಬಗ್ಗೆ ಮಾತನಾಡಿದ. ಪ್ರತಿ ಬಾರಿ ಅವನು ಯಾವಾಗ ನೆಕ್ಟ್ ಸಿನಿಮಾ ಅಂತ ನನಗೆ ಕೇಳುತ್ತಾನೆ'' ಎಂದರು. ದರ್ಶನ್ ಮಾತುಗಳನ್ನು ಕೇಳುತ್ತಿದ್ದರೆ ವಿನೀಶ್ ಸಹ ನಟನೆಯ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನುವುದು ತಿಳಿಯುತ್ತದೆ.

ಎರಡು ಚಿತ್ರಗಳಲ್ಲಿ ನಟನೆ

ಎರಡು ಚಿತ್ರಗಳಲ್ಲಿ ನಟನೆ

ದರ್ಶನ್ ಪುತ್ರ ವಿನೀಶ್ ಈಗಾಗಲೇ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. 'ಐರಾವತ' ಚಿತ್ರದಲ್ಲಿ ಅಪ್ಪನ ಜೊತೆಗೆ ಪೊಲೀಸ್ ಡ್ರೆಸ್ ಹಾಕಿ ಮಿಂಚಿದ್ದ ವಿನೀಶ್, 'ಯಜಮಾನ' ಸಿನಿಮಾದ ಶಿವನಂದಿ ಹಾಡಿನಲ್ಲಿಯೂ ಬಂದು ಹೋಗುತ್ತಾರೆ. ದರ್ಶನ್ ರೀತಿ ವಿನೀಶ್ ಸಹ ಚಿತ್ರರಂಗದಲ್ಲಿ ಬೆಳೆಯಲಿ.

More from Filmibeat

English summary
Kannada actor Darshan son Vineesh also will enter in to movie industry. Darshan spoke about his son Vineesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X