ಮರಿ 'ಐರಾವತ'ನ ಬರ್ತ್ ಡೇ ಪಾರ್ಟಿಗೆ ಯಾರೆಲ್ಲ ಬಂದಿದ್ರು
Recommended Video

ದರ್ಶನ್ ಮಗ ವಿನೀಶ್ ರ 10ನೇ ವರ್ಷದ ಹುಟ್ಟು ಹಬ್ಬದಾಚರಣೆ | Filmibeat Kannada
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಏಕೈಕ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಜೂನಿಯರ್ ದರ್ಶನ್ ಅವರ ಈ ವರ್ಷದ ಬರ್ತ್ ಡೇ ಸಖತ್ ವಿಶೇಷತೆಯಿಂದ ಕೂಡಿದೆ.
ಅಪ್ಪ ಅಮ್ಮ ಸೇರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ವಿನೀಶ್ ಅವರ 10ನೇ ವರ್ಷದ ಹುಟ್ಟುಹಬ್ಬ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ದರ್ಶನ್ ಅವರ ಚಿತ್ರರಂಗ ಅನೇಕ ಸ್ನೇಹಿತರು ಆಗಮಿಸಿದ್ದರು.

ನಿರ್ಮಾಪಕಿ ಶೈಲಜಾ ನಾಗ್, ವಿನೋದ್ ಪ್ರಭಾಕರ್ ದಂಪತಿ, ನಿರ್ಮಾಪಕ ಉಮಾಪತಿ ಫ್ಯಾಮಿಲಿ ಹಾಗೂ ನಟಿ ಸ್ಫೂತಿ ಸೇರಿದಂತೆ ಅನೇಕರು ಭಾಗಿಯಾಗಿ ವಿನೀಶ್ ಗೆ ಶುಭ ಹಾರೈಸಿದದು. ಉಳಿದಂತೆ, ದರ್ಶನ್ ಅವರ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ.

ಅಂದಹಾಗೆ, ವಿನೀಶ್ ಈ ಹಿಂದೆ 'ಐರಾವತ' ಸಿನಿಮಾದಲ್ಲಿ ಅಪ್ಪನ ಜೊತೆಗೆ ನಟಿಸಿದ್ದರು. ಈಗ ಅವರ 'ಯಜಮಾನ' ಸಿನಿಮಾದ ಒಂದು ಹಾಡಿನಲ್ಲಿ ಕೂಡ ವಿನೀಶ್ ಹೆಜ್ಜೆ ಹಾಕಿದ್ದಾರೆ.
More from Filmibeat
English summary
Kannada actor Darshan son Vineesh birthday party photos.


Click it and Unblock the Notifications











