ನಟ ದರ್ಶನ್ ಮನೆಯ ಮಣ್ಣಿನ ಗಣೇಶ ನೋಡಿ
ಇಂದು ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಹಬ್ಬ ಆಚರಿಸಿದ ಸಂಭ್ರಮದ ಕ್ಷಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ನಟ ದರ್ಶನ್ ಕುಟುಂಬ ಸಹ ಈ ಹಬ್ಬವನ್ನು ಜೋರಾಗಿ ಆಚರಿಸುತ್ತಿದೆ. ದರ್ಶನ್ ಮಗ ವಿನೀಶ್ ಮಣ್ಣಿನ ಗಣೇಶನನ್ನು ಮಾಡಿದ್ದಾರೆ. ದರ್ಶನ್ ಪತ್ನಿ ಮಗ ಮಾಡಿದ ಗಣೇಶನ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಪುಟ್ಟ ವಿನೀಶ್ ಮಾಡಿದ ಪುಟ್ಟ ಗಣೇಶ ಸುಂದರವಾಗಿದೆ. ಪರಿಸರ ಸ್ನೇಹಿ ಗಣೇಶ ಇದಾಗಿದೆ.

ಇತ್ತೀಚಿಗಷ್ಟೆ ದರ್ಶನ್ ಪುತ್ರ ವಿನೀಶ್ 'ಯಜಮಾನ' ಸಿನಿಮಾದ ಒಂದು ಹಾಡಿನಲ್ಲಿ ಸಹ ನಟಿಸಿದ್ದಾರೆ. ಈ ಹಿಂದೆ 'ಐರಾವತ' ಸಿನಿಮಾದಲ್ಲಿ ಸಹ ವಿನೀಶ್ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.
ಅಂದಹಾಗೆ, ನಟ ದರ್ಶನ್ ಸಹ ನಿನ್ನೆ ಗಣೇಶ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ದರ್ಶನ್ ಗಣಪನಿಗೆ ಕೈ ಮುಗಿಯುತ್ತಿರುವ ಒಂದು ಫೋಟೋ ಹಾಕಿ ''ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಷಯಗಳು ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ


Click it and Unblock the Notifications











