ದರ್ಶನ್ - ವಿಜಯಲಕ್ಷ್ಮಿ ಭೇಟಿ ಹಿಂದಿನ ಕಾರಣ ಬಹಿರಂಗ

By Naveen

Recommended Video

ದರ್ಶನ್ ವಿಜಯಲಕ್ಷ್ಮಿ ಶೂಟಿಂಗ್ ಸೆಟ್ ನಲ್ಲಿ ಭೇಟಿಯಾದ ಹಿಂದಿನ ಕಾರಣ ಬಹಿರಂಗ | Filmibeat kannada

ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಇತ್ತೀಚಿಗಷ್ಟೆ ಸಾರ್ವಜನಿಕವಾಗಿ ಭೇಟಿ ಮಾಡಿದ್ದರು. ತಮ್ಮ ಕುಟುಂಬದಲ್ಲಿ ಆಗಿದ್ದ ಮನಸ್ತಾಪಗಳ ಬಳಿಕ ಮೊದಲ ಬಾರಿಗೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಮುಖಾಮುಖಿ ಆಗಿದ್ದರು.

ಹಿಂದೆ ನಡೆದ ಎಲ್ಲ ಕಹಿ ಘಟನೆಗಳನ್ನು ಮರೆತಿರುವ ಡಿ ಬಾಸ್, ಪತ್ನಿಯ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರು ಕೆಲ ತಿಂಗಳುಗಳ ಹಿಂದೆಯೇ ಒಂದಾಗಿದ್ದು, ಈ ವಿಷಯ ಮೊನ್ನೆ ಎಲ್ಲರಿಗೆ ತಲುಪಿದೆ.

ಕಳೆದ ಶನಿವಾರ ದರ್ಶನ್ ನಟನೆಯ 'ಯಜಮಾನ' ಚಿತ್ರದ ಚಿತ್ರೀಕರಣದ ಸೆಟ್ ಗೆ ವಿಜಯಲಕ್ಷ್ಮಿ ಭೇಟಿ ನೀಡಿದ್ದರು. ಈ ಸುಂದರ ಕ್ಷಣಗಳ ಫೋಟೋಗಳನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಈ ದಂಪತಿಗಳ ಭೇಟಿ ಹಿಂದಿನ ಕಾರಣ ಹೊರ ಬಂದಿದೆ. ಮುಂದೆ ಓದಿ..

'ಯಜಮಾನ'ರ ಜೊತೆ ಚಿಕ್ಕೆಜಮಾನ್ರು

'ಯಜಮಾನ'ರ ಜೊತೆ ಚಿಕ್ಕೆಜಮಾನ್ರು

ನಟ ದರ್ಶನ್ ಅವರ ಮುಂದಿನ ಸಿನಿಮಾಗಳ ಪೈಕಿ 'ಯಜಮಾನ' ಕೂಡ ಒಂದು. ಈ ಸಿನಿಮಾದ ಬಹು ಮುಖ್ಯ ಸಂಗತಿ ಈಗ ರಿವೀಲ್ ಆಗಿದೆ. ಸಿನಿಮಾದಲ್ಲಿ ಯಜಮಾನರಾಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಜೊತೆ ಚಿಕ್ಕೆಜಮಾನ್ರು ವಿನೀಶ್ ಕೂಡ ನಟಿಸುತ್ತಿದ್ದಾರೆ.

ಒಂದು ಹಾಡಿನಲ್ಲಿ ನಟನೆ

ಒಂದು ಹಾಡಿನಲ್ಲಿ ನಟನೆ

'ಯಜಮಾನ' ಸಿನಿಮಾದಲ್ಲಿ ದರ್ಶನ್ ಪುತ್ರ ವಿನೀಶ್ ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೆ ಇರುತ್ತದೆ. ಅಂದಹಾಗೆ, ಚಿತ್ರದಲ್ಲಿ ಬರುವ ಒಂದು ವಿಶೇಷ ಹಾಡಿನಲ್ಲಿ ವಿನೀಶ್ ನಟಿಸುತ್ತಿದ್ದಾರೆ. ಅಪ್ಪ ಮಗ ಒಂದೇ ಹಾಡಿನಲ್ಲಿ ಕುಣಿಯಲಿದ್ದಾರೆ.

ಮಗನ ನಟನೆ ಕಂಡು ಸಂತಸಗೊಂಡ ತಾಯಿ

ಮಗನ ನಟನೆ ಕಂಡು ಸಂತಸಗೊಂಡ ತಾಯಿ

ದರ್ಶನ್ ಆಕ್ಟಿಂಗ್ ಮಾಡುವುದನ್ನು ಸೆಟ್ ಗೆ ಹೋಗಿ ಅನೇಕ ಬಾರಿ ವಿಜಯಲಕ್ಷ್ಮಿ ನೋಡಿದ್ದಾರೆ. ಆದರೆ, ಅವರ ಪುತ್ರ ವಿನೀಶ್ ಹೇಗೆ ನಟಿಸುತ್ತಾರೆ ಎನ್ನುವುದನ್ನು ವಿಜಯಲಕ್ಷ್ಮಿ ನೋಡಿ ಖುಷಿ ಪಟ್ಟರು. ಇನ್ನು ಬೆಂಗಳೂರಿನಲ್ಲಿಯೇ 'ಯಜಮಾನ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

'ಐರಾವತ' ಚಿತ್ರದಲ್ಲಿ ನಟಿಸಿದ್ದರು

'ಐರಾವತ' ಚಿತ್ರದಲ್ಲಿ ನಟಿಸಿದ್ದರು

ದರ್ಶನ್ ತಮ್ಮ ಮಗ ವಿನೀಶ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆ ಬಂದ 'ಐರಾವತ' ಸಿನಿಮಾದಲ್ಲಿ ಕೂಡ ತಂದೆ ಮಗ ನಟಿಸಿದ್ದರು. 'ಐರಾವತ' ಚಿತ್ರದ ಕೊನೆಯ ದೃಶ್ಯದಲ್ಲಿ ಪೋಲೀಸ್ ಡ್ರೆಸ್ ನಲ್ಲಿ ಅಪ್ಪನ ಜೊತೆಗೆ ವಿನೀಶ್ ಪೋಸ್ ಕೊಟ್ಟಿದ್ದರು.

'ಯಜಮಾನ' ಚಿತ್ರದ ಬಗ್ಗೆ

'ಯಜಮಾನ' ಚಿತ್ರದ ಬಗ್ಗೆ

'ಯಜಮಾನ' ಅವರ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಈ ಹಿಂದೆ 'ವಿಷ್ಣುವರ್ಧನ' ಸಿನಿಮಾ ಮಾಡಿದ್ದ ಪಿ.ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಿ ಸುರೇಶ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ರಶ್ಮಿಕಾ ಮಂದಣ್ಣ ಚಿತ್ರದ ನಾಯಕಿ ಆಗಿದ್ದಾರೆ.

More from Filmibeat

English summary
Kannada actor Darshan son Vineesh will be seen in 'Yajamana' movie song. The movie is directing by P Kumar and producing by B Suresh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X