For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದಿಂದ ಅನಾಥಾಶ್ರಮ-ವೃದ್ಧಾಶ್ರಮ ತುಂಬುತ್ತೆ: ದರ್ಶನ್

  |
  ನಾನು ದರ್ಶನ್ ಅಭಿಮಾನಿ.. ಎಷ್ಟು ಸಾವಿರ ಜನ ಬಂದ್ರು ಊಟ ಹಾಕ್ತೀನಿ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾತ್ರಿಯಿಂದಲೆ ಅಭಿಮಾನಿಗಳು ರಾಜರಾಜೇಶ್ವರಿ ನಗದ ದರ್ಶನ್ ನಿವಾಸದ ಮುಂದೆ ಕ್ಯೂ ನಿಂತಿದ್ದಾರೆ.

  ಮಧ್ಯರಾತ್ರಿಯೆ ಅಭಿಮಾನಿಗಳಿಗೆ ದರ್ಶನ ನೀಡಿದ ಡಿ ಬಾಸ್ ಕೇಕ್ ಕತ್ತರಿಸದೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇನ್ನು ರಾತ್ರಿಮಾತ್ರವಲ್ಲದೆ ಬೆಳ್ಳಂಬೆಳಗ್ಗೆಯೆ ಅಭಿಮಾನಿಗಳು ನೆಚ್ಚಿನ ನಟನ ದರ್ಶನಕ್ಕಾಗಿ, ಶುಭಾಶಯ ತಿಳಿಸುವುದ್ದಕ್ಕಾಗಿ ನಿವಾಸದ ಮುಂದೆ ಕ್ಯೂನಿಂತಿದ್ದಾರೆ. ಸಾಗರೋಪಾದಿಯಲ್ಲಿ ಹರಿದುಬಂದಿದ್ದ ಅಭಿಮಾನಿಗಳನ್ನು ಭೇಟಿಯಾಗಿ ಶೇಕ್ ಹ್ಯಾಂಡ್ ಮಾಡಿ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

  ಡಿ ಬಾಸ್ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?ಡಿ ಬಾಸ್ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

   ಆನಾಥಾಶ್ರಮ ಮತ್ತು ವೃದ್ಧಾಶ್ರಮ ತುಂಬುತ್ತೆ

  ಆನಾಥಾಶ್ರಮ ಮತ್ತು ವೃದ್ಧಾಶ್ರಮ ತುಂಬುತ್ತೆ

  "ಮಾಧ್ಯಮದವರ ಜೊತೆ ಮಾತನಾಡಿದ ಡಿ ಬಾಸ್ "ಈ ಬಾರಿಯ ಹುಟ್ಟುಹಬ್ಬ ಒಂದಿಷ್ಟು ಆನಾಥಾಶ್ರಮ ಮತ್ತು ವೃದ್ಧಾಶ್ರಮ ತುಂಬುತ್ತೆ. ಈ ಬಾರಿ ಊರೆಲ್ಲ ಕ್ಲೀನ್ ಆಗಿದೆ. ಇಷ್ಟುವರ್ಷ ಇಲ್ಲೆಲ್ಲ ಗಬ್ಬೆದ್ದು ಹೋಗಿರುತ್ತಿತ್ತು. ಹುಟ್ಟುಹಬ್ಬದ ದಿನ ಕೆಲಸ ಮಾಡುತ್ತೇನೆ ಹಾಗಾಗಿ ಇವತ್ತು ಕೂಡ ರಾಬರ್ಟ್ ಡಬ್ಬಿಂಗ್ ನಲ್ಲಿ ಭಾಗಿಯಾಗುತ್ತೇನೆ. ಸಂಪೂರ್ಣ ದಿನ ಅಭಿಮಾನಿಗಳಿಗಾಗಿ ಮೀಸಲಿಡುತ್ತೇನೆ. ಮೊಲಗಳು ಮತ್ತು ಬಾತುಕೋಳಿಗಳು ಬಂದಿವೆ ಅದನ್ನು ತೋಟಕ್ಕೆ ಕಳುಹಿಸುತ್ತೇನೆ" ಎಂದು ಹೇಳಿದ್ದಾರೆ.

  ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!

   ಏಪ್ರಿಲ್ ನಲ್ಲಿ ರಾಬರ್ಟ್ ರಿಲೀಸ್

  ಏಪ್ರಿಲ್ ನಲ್ಲಿ ರಾಬರ್ಟ್ ರಿಲೀಸ್

  ಇನ್ನು ರಾಬರ್ಟ್ ಚಿತ್ರದ ಬಗ್ಗೆ ಮಾತನಾಡಿದ ದರ್ಶನ್ ಸಧ್ಯದಲ್ಲೇ ಅಂದರೆ ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ ಬರುತ್ತೆ ಎಂದು ಹೇಳಿದ್ದಾರೆ. ಇನ್ನು ರಾಜವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭಿಸಿದ್ದೀವಿ. ಕೇರಳದಲ್ಲಿ ಚಿತ್ರೀಕರಣ ಮಾಡಿದ್ದೀವಿ. ಈ ಸಿನಿಮಾಗೆ ಇನ್ನು ಸಮಯವಿದೆ" ಎಂದು ಹೇಳಿದ್ದಾರೆ.

   ಹುಟ್ಟುಹಬ್ಬದ ದಿನ ರಾಬರ್ಟ್ ಡಬ್ಬಿಂಗ್

  ಹುಟ್ಟುಹಬ್ಬದ ದಿನ ರಾಬರ್ಟ್ ಡಬ್ಬಿಂಗ್

  ಇಂದು ದಿನ ಪೂರ್ತಿ ಅಭಿಮಾನಿಗಳ ಜೊತೆ ಸಮಯಕಳೆಯುವ ದರ್ಶನ್ ಮಧ್ಯದಲ್ಲಿ ಡಬ್ಬಿಂಗ್ ಕೂಡ ಮಾಡಿ ವಾಪಾಸ್ ಆಗಲಿದ್ದಾರೆ. ಈ ಬಾರಿ ರಾಬರ್ಟ್ ಡಬ್ಬಿಂಗ್ ಮಾಡಲಿದ್ದಾರೆ ದರ್ಶನ್. ಆ ನಂತರ ಮತ್ತೆ ಅಭಿಮಾನಿಗಳಿಗೆ ಸಮಯಕೊಡಲಿದ್ದಾರೆ.

  ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..

   ದಾಸನ ಮನವಿಗೆ ಸ್ಪಂದಿಸಿದ ಅಭಿಮಾನಿಗಳು

  ದಾಸನ ಮನವಿಗೆ ಸ್ಪಂದಿಸಿದ ಅಭಿಮಾನಿಗಳು

  ಈ ಬಾರಿ ದರ್ಶನ್ ಅಭಿಮಾನಿಗಳಲ್ಲಿ ಕೇಕ್, ಗಿಫ್ಟ್ ತರಬೇಡಿ, ಬದಲಾಗಿ ದವಸ-ಧಾನ್ಯಗಳನ್ನು ತಂದು ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ದಾಸ ಮನವಿಯಂತೆ ಅಭಿಮಾನಿಗಳು ಈ ಬಾರಿ ದವಸ ಧಾನ್ಯಗಳ ಮೂಟೆಯ ರಾಶಿಯೆ ತಂದು ನೀಡಿದ್ದಾರೆ. ಈ ಎಲ್ಲಾ ದವಸ ಧಾನ್ಯಗಳು ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮ ಸೇರುತ್ತಿದೆ.

  English summary
  Kannada Actor Darshan speaks about Orphan and Old age home on his 43rd birthday celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X