»   » ತಂದೆ ನಿಧನರಾದ ದಿನ ದರ್ಶನ್ ಸಹಾಯಕ್ಕೆ ಬಂದದ್ದು ಒಬ್ಬ ಡ್ರೈವರ್ !

ತಂದೆ ನಿಧನರಾದ ದಿನ ದರ್ಶನ್ ಸಹಾಯಕ್ಕೆ ಬಂದದ್ದು ಒಬ್ಬ ಡ್ರೈವರ್ !

Posted By:
Subscribe to Filmibeat Kannada
ದರ್ಶನ್ ತನ್ನ ತಂದೆಯ ವಿಷಯವಾಗಿ ಹಂಚಿಕೊಂಡ ಮನದಾಳದ ಮಾತುಗಳು | filmibeat Kannada

ನಟ ದರ್ಶನ್ ತುಂಬ ಕಷ್ಟ ದಿಂದ ಮೇಲೆ ಬಂದ ನಟ. ಚಿತ್ರರಂಗದಲ್ಲಿ ಅವರ ತಂದೆ ತೂಗುದೀಪ ಶ್ರೀನಿವಾಸ್ ದೊಡ್ಡ ಹೆಸರು ಮಾಡಿದ್ದರು ಕೂಡ ದರ್ಶನ್ ಪ್ರಾರಂಭದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಿ ತಮ್ಮ ಸ್ವಂತ ಪ್ರಯತ್ನದಿಂದ ಇವತ್ತು ಈ ಮಟ್ಟಿಗೆ ಬೆಳೆದಿದ್ದಾರೆ.

ದರ್ಶನ್ ಸುಮಾರು ವರ್ಷಗಳ ಹಿಂದೆ ಚಂದನ ವಾಹಿನಿಗೆ ಒಂದು ಸಂದರ್ಶನ ನೀಡಿದ್ದರು. ಈ ಅಪರೂಪದ ಸಂದರ್ಶನದಲ್ಲಿ ದರ್ಶನ್ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಅಂದರೆ ಆ ಸಂದರ್ಶನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್ ಅವರ ಅನೇಕ ಕಷ್ಟದ ಸಂಗತಿಗಳು ಇದನ್ನು ನೋಡಿದಾಗ ತಿಳಿಯುತ್ತಿದೆ. ಅದರಲ್ಲಿ ಒಂದು ತಂದೆ ತೂಗುದೀಪ್ ನಿಧನರಾದ ದಿನ ದರ್ಶನ್ ಪಟ್ಟ ಪಾಡು. ಆ ವೇಳೆ ಇನ್ನು ನೀನಾಸಂ ನಲ್ಲಿ ನಾಟಕ ಕಲಿಯುತ್ತಿದ್ದ ದರ್ಶನ್ ತಂದೆ ಸಾವಿನ ದಿನ ನಡೆದ ಘಟನೆಯನ್ನು ವಿವರಿಸಿದ್ದಾರೆ. ಮುಂದೆ ಓದಿ...

ಅಂದು ಬಸ್ ಸ್ಟ್ರೈಕ್ ಇತ್ತ

''ನಮ್ಮ ತಂದೆ ನಿಧನರಾದಗ ಅಂದು ಬಸ್ ಸ್ಟ್ರೈಕ್ ಇತ್ತು. ಆಗ ನಾನು ನೀನಾಸಂ ನಲ್ಲಿ ಇದೆ. ಅಪ್ಪನ ವಿಷಯ ಕೇಳಿ ಹೆಗ್ಗೋಡು ನಿಂದ ಸಾಗರಕ್ಕೆ ಹೇಗೋ ಬಂದೆ.. ಸಾಗರದಿಂದ ಶಿವಮೊಗ್ಗಕ್ಕೂ ಬಂದೆ. ಆದರೆ ಅಲ್ಲಿಂದ ಮೈಸೂರಿಗೆ ಹೋಗಬೇಕು ಎಂದಾಗ ತುಂಬನೇ ತೊಂದರೆ ಆಯ್ತು.'' ಎಂದು ದರ್ಶನ್ ಆ ದಿನ ನಡೆದ ಘಟನೆಯನ್ನು ಹೇಳಿಕೊಂಡರು.

ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'

ಶಿವಮೊಗ್ಗದಿಂದ ಮೈಸೂರಿಗೆ

''ಶಿವಮೊಗ್ಗದಲ್ಲಿ ಮೈಸೂರಿನಿಂದ ಬಂದಿದ್ದ ಒಂದು ಟ್ಯಾಕ್ಸಿ ಇತ್ತು. ಅದರ ಡ್ರೈವರ್ ಮೈಸೂರು ಅಂತ ಕೂಗುವುದು ಕೇಳಿಸಿಕೊಂಡು ನಾನು ಹೋಗಿ ಕುತ್ತಿದೆ. ಆದರೆ ಆ ಡೈವರ್ ಇನ್ನು ಉಳಿದ ಜನರನ್ನು ಬಂದು ತನ್ನ ಟ್ಯಾಕ್ಸಿ ತುಂಬಲಿ ಅಂತ ಕಾಯುತ್ತಿದ್ದ.'' - ದರ್ಶನ್, ನಟ

ಟ್ಯಾಕ್ಸಿ ಸ್ಟಾರ್ಟ್ ಮಾಡಿದ

''ಸುಮ್ಮನೆ ನನ್ನನ್ನು ಮಾತನಾಡಿಸಿದ ಆತ ಸರ್.. ಯಾಕೆ ಇವತ್ತೇ ಮೈಸೂರಿಗೆ ಹೋಗುತ್ತಿದ್ದೀರಿ ಅಂತ ಕೇಳಿದ. ನಾನು ನಮ್ಮ ತಂದೆ ನಿಧನರಾದ ವಿಷಯ ಹೇಳಿ ಬೇಗ ಹೋಗ ಬೇಕಾಗಿತ್ತು ಆದರೆ ಇವತ್ತು ಬಸ್ ಇಲ್ಲ ಎಂದೆ. ತಂದೆಗೆ ಆ ರೀತಿ ಆಗಿದೆ ಅಂತ ಹೇಳಿದ ತಕ್ಷಣ ಆತ ಟ್ಯಾಕ್ಸಿ ಸ್ಟಾರ್ಟ್ ಮಾಡಿದ'' - ದರ್ಶನ್, ನಟ

ನಿರ್ದೇಶಕ ಪ್ರೇಮ್ ಗಾಗಿ ತನ್ನ ಹಳೆ ನಿಯಮ ಮುರಿದ ದಾಸ ದರ್ಶನ್!

ಮನೆ ವರೆಗೆ ಬಂತು ಬಿಟ್ಟ

''ನಾನು ಇನ್ನು ಜನ ಬರಲಿ ಪರವಾಗಿಲ್ಲ ಅಂದೆ. ಆದರೆ ಆತ ಸರ್.. ಮುಂದೆ ಯಾರಾನಾದರೂ ಹತ್ತಿಸಿಕೊಳ್ಳುತ್ತೇನೆ ಎಂದು ಹೇಳಿ, ಮೈಸೂರು ಬರುವ ವರೆಗೆ ಯಾರನ್ನು ಹತ್ತಿಸಿಕೊಳ್ಳದೆ ಅದಷ್ಟು ಬೇಗ ನಮ್ಮ ಮನೆಗೆ ತಲುಪಿಸಿದ. ನಾನು ನಮ್ಮ ಮನೆ ಹೋದಾಗ ನನ್ನ ಲಗೇಜ್ ಬಾಗಿಲಲ್ಲಿ ಇಟ್ಟು ಹೋಗಿದ್ದ. ನಾನು ಒಳಗೆ ಹೋಗಿ ಆಮೇಲೆ ಬಂದು ನೋಡಿದರೆ ಆತ ಇರಲಿಲ್ಲ.'' - ದರ್ಶನ್, ನಟ

ಮತ್ತೆ ಶಾಲೆಯ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಆತ ಚೆನ್ನಾಗಿರಲಿ

''ನನ್ನ ಬಳಿ ದುಡ್ಡು ಪಡೆಯದೆ... ಯಾರನ್ನು ಟ್ಯಾಕ್ಸಿ ಯಲ್ಲಿ ಹತ್ತಿಸಿಕೊಳ್ಳದೆ.. ತಂದೆ ಸುದ್ದಿ ಕೇಳಿದ ತಕ್ಷಣ ನನಗಾಗಿ ಮನೆಯವರೆಗೆ ಬಂದು ಬಿಟ್ಟು ಹೋದ. ಇಂದಿಗೂ ನಾನು ಆತ ಎಲ್ಲಿಯೇ ಇದ್ದರು ಚೆನ್ನಾಗಿ ಇರಲ್ಲಿ ಎಂದು ಕೇಳಿಕೊಳ್ಳುತ್ತೇನೆ.'' ಎಂದು ದರ್ಶನ್ ಹೇಳಿದರು

English summary
Kannada actor Challenging Star Darshan spoke about his father Thoogudeepa Srinivas in Chandana tv interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X