»   » ಏನೇ ಆದರೂ 'ದರ್ಶನ್' ಎನ್ನುವ ಹೆಸರು ಬದಲಾಯಿಸಲ್ಲ ಎಂದಿದ್ದ ಡಿ ಬಾಸ್

ಏನೇ ಆದರೂ 'ದರ್ಶನ್' ಎನ್ನುವ ಹೆಸರು ಬದಲಾಯಿಸಲ್ಲ ಎಂದಿದ್ದ ಡಿ ಬಾಸ್

Posted By:
Subscribe to Filmibeat Kannada

ಅನೇಕ ನಟರ ಹೆಸರುಗಳು ಚಿತ್ರರಂಗಕ್ಕೆ ಬಂದ ಮೇಲೆ ಬದಲಾಗುತ್ತದೆ. ಮುತ್ತುರಾಜ್ ರಿಂದ ರಾಜ್ ಕುಮಾರ್, ಸಂಪತ್ ಕುಮಾರ್ ರಿಂದ ವಿಷ್ಣುವರ್ಧನ್, ಅಮರ್ ನಾಥ್ ರಿಂದ ಅಂಬರೀಶ್ ಹೀಗೆ ಸಿನಿಮಾ ನಟರಾದ ಮೇಲೆ ಕೆಲವು ನಟರ ಹೆಸರು ಬದಲಾಗುವುದು ಸಾಮಾನ್ಯ.

ಈ ರೀತಿಯ ಹೆಸರು ಬದಲಾವಣೆ ಕೆಲವರಿಗೆ ಅದೃಷ್ಟ ತಂದುಕೊಟ್ಟಿದೆ. ಇಂದಿಗೂ ಅನೇಕ ನಟ ನಟಿಯರು ಲಕ್ ಬೇಕು ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಹೆಸರು ಬದಲಾಯಿಸಿದ ತಕ್ಷಣ ಅದೃಷ್ಟ ಒಲಿದು ಬರುವುದು ನಿಜವೋ... ಸುಳ್ಳೋ ಆದರೆ ನಟ ದರ್ಶನ್ ಮಾತ್ರ ತಮ್ಮ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲವಂತೆ.

ಈಗ ಚಾಲೆಂಜಿಂಗ್ ಸ್ಟಾರ್ ಪಟ್ಟದಲ್ಲಿ ಇರುವ ದರ್ಶನ್ ಒಂದು ಕಾಲದಲ್ಲಿ ಬಹಳ ಕಷ್ಟದ ದಿನ ಎದುರಿಸಿದ್ದರು. ಚಿತ್ರರಂಗದಲ್ಲಿ ಒಂದೊಂದು ಅವಕಾಶಕ್ಕೆ ಕಾಯುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ದರ್ಶನ್ ಹೆಸರನ್ನೇ ಬದಲಾಯಿಸಲು ಒಬ್ಬ ನಿರ್ದೇಶಕ ಮುಂದಾಗಿದ್ದರು. ಮುಂದೆ ಓದಿ....

ಹೆಸರು ಬದಲಾಯಿಸೋಣ

ದರ್ಶನ್ ಸಿನಿಮಾಗಳ ಅವಕಾಶಕ್ಕಾಗಿ ಒಮ್ಮೆ ದೊಡ್ಡ ನಿರ್ದೇಶಕರ ಮುಂದೆ ನಿಂತಿದ್ದರು. ಆ ವೇಳೆ ಆ ನಿರ್ದೇಶಕ ''ದರ್ಶನ್ ಎನ್ನುವ ಹೆಸರು ಚೆನ್ನಾಗಿಲ್ಲ. ನಿನಗೆ ಒಂದು ಒಳ್ಳೆಯ ಹೆಸರು ಇಡೋಣ. ಆ ನಂತರ ಸಿನಿಮಾ ಮಾಡೋಣ'' ಅಂತ ಹೇಳಿದ್ದರಂತೆ.

ನಿರಾಕರಿಸಿದ ದರ್ಶನ್

ಈ ವೇಳೆ ದರ್ಶನ್ ''ನನಗೆ ನೀವು ಈ ಚಿತ್ರದಲ್ಲಿ ಅವಕಾಶ ನೀಡದಿದ್ದರು ಪರವಾಗಿಲ್ಲ ಆದರೆ ನಾನು ನನ್ನ ಹೆಸರನ್ನು ಮಾತ್ರ ಬದಲಾಯಿಸಿಕೊಳ್ಳುವುದಿಲ್ಲ'' ಎಂದು ಹೇಳಿದ್ದರಂತೆ.

ತಂದೆ ನಿಧನರಾದ ದಿನ ದರ್ಶನ್ ಸಹಾಯಕ್ಕೆ ಬಂದದ್ದು ಒಬ್ಬ ಡ್ರೈವರ್ !

ತಂದೆ ತಾಯಿ ಇಟ್ಟ ಹೆಸರು

''ದರ್ಶನ್ ಎನ್ನುವುದು ನನ್ನ ತಂದೆ ಮತ್ತು ತಾಯಿ ಇಟ್ಟ ಹೆಸರು ಆ ಹೆಸರನ್ನು ಯಾವುದೇ ಕಾರಣಕ್ಕೆ ಬದಲಾಯಿಸುವುದಿಲ್ಲ. ನಾನು ಚಿತ್ರರಂಗದಲ್ಲಿ ಅದೇ ಹೆಸರಿನಿಂದ ಮುಂದುವರೆಯಲು ಇಷ್ಟ ಪಡುತ್ತೇನೆ'' ಎಂದು ಆ ಸಿನಿಮಾವನ್ನೇ ಬಿಟ್ಟು ದರ್ಶನ್ ಬಂದರಂತೆ.

'ದರ್ಶನ್' ಹೆಸರಿನಲ್ಲಿ ಸಿನಿಮಾ

ವಿಶೇಷ ಅಂದರೆ ಚಾಲೆಂಜಿಂಗ್ ಸ್ಟಾರ್ ತಮ್ಮ ಹೆಸರಿನಲ್ಲಿಯೇ 'ದರ್ಶನ್' ಎಂಬ ಟೈಟಲ್ ನಲ್ಲಿ ಒಂದು ಸಿನಿಮಾ ಮಾಡಿದ್ದರು. 2004ರಲ್ಲಿ ರಿಲೀಸ್ ಆದ ಈ ಚಿತ್ರ ಭಯೋತ್ಪಾದನೆ ಬಗ್ಗೆ ಇತ್ತು.

ಚಿತ್ರಗಳು: 'ಕುರುಕ್ಷೇತ್ರ'ದಲ್ಲಿ 'ಗಜ' ದರ್ಶನ್ ದರ್ಬಾರ್

'ಕುರುಕ್ಷೇತ್ರ' ಸಿನಿಮಾ

ಸದ್ಯ ನಟ ದರ್ಶನ್ 'ಕುರುಕ್ಷೇತ್ರ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಈ ಸಿನಿಮಾದ ಹಾಡಿನ ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

English summary
Kannada actor Challenging Star Darshan spoke about his struggling days in Chandana tv interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X