Darshan: ಲ್ಯಾಂಬೋರ್ಗಿನಿ ಬಿಟ್ಟು ಪುಟಾಣಿ ನ್ಯಾನೋ ಕಾರ್ ಏರಿದ ದಾಸ: ವಿಡಿಯೋ ಫುಲ್ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಅಬ್ಬರಿಸುವುದು ಮಾತ್ರವಲ್ಲ ಅವರ ಖಾಸಗಿ ಜೀವನದ ವಿಚಾರಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ. ನಟನಾಗಿ ಮಾತ್ರವಲ್ಲದೇ ಪ್ರಾಣಿಪಕ್ಷಿ ಪ್ರೇಮಿಯಾಗಿ ಅಷ್ಟೇ ಅಲ್ಲ ತಮ್ಮ ಕಾರ್, ಬೈಕ್ ಕ್ರೇಜ್‌ನಿಂದಲೂ ದರ್ಶನ್ ಸದಾ ಗಮನ ಸೆಳೆಯುತ್ತಾರೆ. ಆಗಾಗ್ಗೆ ಸ್ನೇಹಿತರ ಜೊತೆ ಕಾರ್‌ ಏರಿ ಪ್ರವಾಸಕ್ಕೆ ಹೋಗಿ ಬರುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರಿಗೆ ಬೈಕ್, ಕಾರ್ ಕ್ರೇಜ್ ಇದೆ. ಆದರೆ ನಟ ದರ್ಶನ್‌ಗೆ ಕೊಂಚ ಜಾಸ್ತಿನೇ ಇದೆ. ಇನ್ನು ತಮ್ಮ ಫಾರ್ಮ್‌ಹೌಸ್‌ನಲ್ಲಿ ದನದ ಕೊಟ್ಟಿಗೆ ಪಕ್ಕದಲ್ಲೇ ಐಷಾರಾಮಿ ಕಾರುಗಳನ್ನು ನಿಲ್ಲಿಸುತ್ತಾರೆ. ರೋಡಿಗೆ ಬರುವ ಹೊಸ ಹೊಸ ಕಾರುಗಳನ್ನು ಖರೀದಿಸುವ ದರ್ಶನ್ ಯಾವುದಾದರೂ ಊರಲ್ಲಿ ಒಳ್ಳೆ ತಳಿಯ ರಾಸುಗಳನ್ನು ಕಂಡರೆ ತಂದು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಟ್ಟಿಹಾಕುತ್ತಾರೆ. ಹೀಗೆ ತಮ್ಮ ವಿಭಿನ್ನ ಅಭಿರುಚಿಯಿಂದ ದರ್ಶನ್ ಸದಾ ಗಮನ ಸೆಳೆಯುತ್ತಾರೆ.

Darshan-Spotted-Driving-Nano-car

ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆದಿರುವ ದರ್ಶನ್, ಎದೆಯಲ್ಲಿ ಅವರಿಗೆ ಜಾಗ ಕೊಟ್ಟಿದ್ದಾರೆ. ಅಂದರೆ ತಮ್ಮ ಎದೆ ಮೇಲೆ 'ನನ್ನ ಪ್ರೀತಿಯ ಸೆಲೆಬ್ರಿಟೀಸ್' ಹಚ್ಚೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಕೆಲ ದಿನಗಳ ಹಿಂದೆ ದರ್ಶನ್ ಸ್ನೇಹಿತರ ಜೊತೆ ವಿರಾಜಪೇಟೆ ಪ್ರವಾಸಕ್ಕೆ ಹೋಗಿ ಬಂದಿದ್ದರು. ಏಳೆಂಟು ಕಾರು, ಜೀಪುಗಳಲ್ಲಿ ಬೆಂಗಳೂರಿನಿಂದ ಮಡಿಕೇರಿಯ ಸುತ್ತಾಮುತ್ತಾ ಸುತ್ತಾಡಿ ಬಂದಿದ್ದರು. ಬಳಿಕ ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು.

ನಟ ದರ್ಶನ್ ಆಫ್‌ ರೋಡ್ ಟ್ರಿಪ್ ಹೋಗಿಬಂದಿದ್ದು ವಿಶೇಷ. ವಿರಾಜಪೇಟೆ ಮಾರ್ಗದಲ್ಲಿ ಸಾಕಷ್ಟು ಕಡೆಗಳಲ್ಲಿ ಬೆಟ್ಟ, ಗುಡ್ಡ, ಹಳ್ಳ, ತೊರೆ, ದಿಣ್ಣೆ, ಬಂಡೆಗಳ ಮೇಲೆ ಕಾರು, ಜೀಪ್‌ ಚಲಾಯಿಸಿದ್ದಾರೆ. ಈ ವೇಳೆ ರೆಸಾರ್ಟ್‌ಗಳಲ್ಲಿ ಉಳಿದುಕೊಂಡಿದ್ದು ಇದೆ. ಕಾಡಿನ ಮಧ್ಯೆ ಟೆಂಟ್ ಹಾಕಿ ಕಾಲ ಕಳೆದಿದ್ದು ಇದೆ. ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿಯೂ ಆಗಿರುವ ದರ್ಶನ್ ಅರಣ್ಯ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ದರ್ಶನ್ ವಿರಾಜಪೇಟೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮಗ ವಿನೀಶ್ ಕೂಡ ತಂದೆ ಜೊತೆ ಹೋಗಿ ಬಂದಿದ್ದ.

Darshan-Spotted-Driving-Nano-car

ದರ್ಶನ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಜಾಗ್ವಾರ್, ಲ್ಯಾಂಡ್ ರೋವರ್ ಡಿಫೆಂಡರ್, ಆಡಿ, ರೇಂಜ್‌ ರೋವರ್, ಮಿನಿ ಕೂಪರ್, ಹಮ್ಮರ್, ಫಾರ್ಚೂನರ್, ಬಿಎಂಡಬ್ಲ್ಯೂ ಜೊತೆ ಕೆಂಪು ಜೀಪ್ ರಾಂಗ್ಲರ್ ಕೂಡ ಇದೆ. ಕೆಲ ದಿನಗಳ ಹಿಂದೆಯಷ್ಟೆ ಟೊಯೋಟಾ ವೆಲ್ಫೈರ್ ಕಾರನ್ನು ಕೂಡ ಖರೀದಿಸಿದ್ದರು. ಜೀಪ್ ರಾಂಗ್ಲರ್ ಏರಿ ದರ್ಶನ್ ವಿರಾಜಪೇಟೆ ಪ್ರವಾಸ ಕೈಗೊಂಡಿದ್ದರು. ನಡುವೆ ಸ್ನೇಹಿತರ ಬೇರೆ ಬೇರೆ ಕಾರುಗಳನ್ನು ಚಲಾಯಿಸಿದ್ದರು.

ಅಚ್ಚರ ಅಂದರೆ ಪ್ರವಾಸದ ವೇಳೆ ದರ್ಶನ್ ಸ್ನೇಹಿತರೊಬ್ಬರ ಟಾಟಾ ನ್ಯಾನೋ ಕಾರ್ ಏರಿ ಓಡಾಡಿದ್ದಾರೆ. ಸದ್ಯ ಗಜಪಡೆಯ ವಿರಾಜಪೇಟೆ ಪ್ರವಾಸದ 2ನೇ ವಿಡಿಯೋ ರಿಲೀಸ್ ಆಗಿದೆ. ಅದರಲ್ಲಿ ದರ್ಶನ್ ಹಳದಿ ಬಣ್ಣದ ನ್ಯಾನೋ ಕಾರ್ ಏರಿ ಡ್ರೈವ್ ಮಾಡಿರೋದನ್ನು ನೋಡಬಹುದು. ಭಾರತೀಯ ಚಿತ್ರರಂಗದಲ್ಲಿ ಬಹಳ ಎತ್ತರದ ನಟರಲ್ಲಿ ದರ್ಶನ್ ಸಹ ಒಬ್ಬರು. ನ್ಯಾನೋ ಕಾರಿನಲ್ಲಿ ಅವರು ಕೂರುವುದು ಕೊಂಚ ಕಷ್ಟವೇ. ಆದರೂ ಕಾರ್ ಏರಿ ಜಾಲಿ ರೈಡ್ ಹೋಗಿ ಬಂದಿದ್ದಾರೆ.

ದರ್ಶನ್ ಸಿಂಪ್ಲಿಸಿಟಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. "ಎಲ್ಲಾ ತರಹದಲ್ಲಿ ಲೈಫ್ ಎಂಜಾಯ್ ಮಾಡೋ ನೀವೇ ಗ್ರೇಟ್ ಬಾಸ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ದರ್ಶನ್ ಇತ್ತೀಚೆಗೆ ಸ್ನೇಹಿತರ ಜೊತೆ ಬ್ರಿಟನ್‌ ಪ್ರವಾಸ ಹೋಗಿ ಬಂದಿದ್ದರು. ಸದ್ಯ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಗರಡಿ' ಚಿತ್ರದ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ಕಾಟೇರ' ಬಳಿಕ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Darshan's Nano car driving video goes viral, fans hail actor for his simplicity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X