ದರ್ಶನ್ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ಬಂಪರ್‌ ಗಿಫ್ಟ್!

'ರಾಬರ್ಟ್' ಸಿನಿಮಾದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. 'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ 'ಕ್ರಾಂತಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಅವರು ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ರಾಂತಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ದರ್ಶನ್ ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ. ಈ ಚಿತ್ರದ ಹೊಸ ಅಪ್ಡೇಟ್‌ಗಾಗಿ ದರ್ಶನ್‌ ಅಭಿಮಾನಿಗಳು ಸದಾ ಕಾಯುತ್ತಾ ಇರುತ್ತಾರೆ. ಕ್ರಾಂತಿ ಮಾಡಲು ದರ್ಶನ್‌ ಯಾವ ರೂಪದಲ್ಲಿ ಬರಲಿದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೆ ಉತ್ತರ ಸಿಗಲಿದೆ.

ದರ್ಶನ್‌ ಹುಟ್ಟು ಹಬ್ಬಕ್ಕೆ ಕ್ರಾಂತಿ ಲುಕ್‌ ರಿಲೀಸ್!

ದರ್ಶನ್‌ ಹುಟ್ಟು ಹಬ್ಬಕ್ಕೆ ಕ್ರಾಂತಿ ಲುಕ್‌ ರಿಲೀಸ್!

ದರ್ಶನ್‌ ಹುಟ್ಟು ಹಬ್ಬ ಬಂತು ಅಂದ್ರೆ ಸಾಕಷ್ಟು ವಿಶೇಷತೆಗಳು ಇರುತ್ತವೆ. ಅವರ ಸಿನಿಮಾಗಳ ಬಗ್ಗೆ ಒಂದಲ್ಲಾ ಒಂದು ಸರ್ಪ್ರೈಸ್ ಸುದ್ದಿಯನ್ನು ದರ್ಶನ್‌ ಅಭಿಮಾನಿಗಳಿಗೆ ಕೊಡುತ್ತಾರೆ. ಈ ಬಾರಿಯೂ ಒಂದು ವಿಶೇಷತೆ ಇದೆ. ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಚಿತ್ರದ ಫಸ್ಟ್‌ ಲುಕ್‌ ದರ್ಶನ್‌ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರ ತಂಡದಿಂದ ಮಾಹಿತಿ ಹೊರ ಬಂದಿದೆ. ಕ್ರಾಂತಿ ಚಿತ್ರದಲ್ಲಿ ದರ್ಶನ್‌ ಅವರ ಲುಕ್‌ ಹೇಗಿರಲಿದೆ ಎಂದು ನೋಡಲು ಕಾಯುತ್ತಾ ಇರುವವರಿಗೆ ಸಿಹಿ ಸುದ್ದಿ ಕೊಟ್ಟಿದೆ ಚಿತ್ರತಂಡ. 2022ರ ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟು ಹಬ್ಬಕ್ಕೆ ಕ್ರಾಂತಿ ಫಸ್ಟ್ ಲುಕ್‌ ರಿಲೀಸ್‌ ಆಗಲಿದೆ.

ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟು ಹಬ್ಬ!

ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟು ಹಬ್ಬ!

ನಟ ದರ್ಶನ್ ಹುಟ್ಟು ಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ಹಬ್ಬ. ಪ್ರತೀ ವರ್ಷ ಫೆಬ್ರವರಿ 16 ಬಂತು ಅಂದರೆ ಸಾಕು ದರ್ಶನ್‌ ಅವರನ್ನು ನೋಡಲು ಸಹಸ್ರಾರು ಅಭಿಮಾನಿಗಳು ಹಾಜರಾಗಿ ಬಿಡುತ್ತಾರೆ. ಅಂದು ದರ್ಶನ್ ಮತ್ತು ಅವರ ಅಭಿಮಾನಿಗಳು ಇಬ್ಬರಿಗೂ ದೊಡ್ಡ ಹಬ್ಬ. ಹುಟ್ಟು ಹಬ್ಬದಂದು ದರ್ಶನ್ ಅವರಿಗೆ ಅಭಿಮಾನಿಗಳನ್ನು ಭೇಟಿ ಮಾಡುವುದು, ಅವರ ಶುಭಾಶಯ ಸ್ವೀಕರಿಸಿ ಉಡುಗೊರೆ ಪಡೆಯುತ್ತಿದ್ದರು. ಅಭಿಮಾನಿಗಳಿಗಾಗಿ ಆ ದಿನವನ್ನು ಮುಡಿಪಾಗಿ ಇಟ್ಟು ಬಿಡುತ್ತಾರೆ.

ಈ ಬಾರಿಯೂ ದರ್ಶನ್ ಬರ್ತ್‌ ಡೇ ಆಚರಣೆ ಡೌಟ್!

ಈ ಬಾರಿಯೂ ದರ್ಶನ್ ಬರ್ತ್‌ ಡೇ ಆಚರಣೆ ಡೌಟ್!

ಕೊರೊನಾ ಬಂದ ಬಳಿಕ ದರ್ಶನ್‌ ಹುಟ್ಟು ಹಬ್ಬದ ಸಂಭ್ರಮ ಮಾಯವಾಗಿದೆ. ಕೊರೊನಾ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ನಟ ದರ್ಶನ್ ಅಭಿಮಾನಿಗಳ ಜೊತೆಗೆ ಹುಟ್ಟು ಆಚರಿಸಿಕೊಂಡಿಲ್ಲ. ದರ್ಶನ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕವೇ ದರ್ಶನ್ ಅವರಿಗೆ ಅವರ ಅಭಿಮಾನಿಗಳು ಶುಭಕೋರುತ್ತಿದ್ದರು. ಇನ್ನೂ ಈಗ ಕೊರೊನಾ ಹಾವಳಿ ಮೊದಲಿನಷ್ಟು ಇಲ್ಲವಾದರೂ ಕೂಡ, ಓಮಿಕ್ರಾನ್‌ ಕೇಸ್‌ಗಳು ಹೆಚ್ಚುತ್ತಿವೆ. ಹಾಗಾಗಿ ನಟ ದರ್ಶನ್‌ ಈ ಬಾರಿಯೂ ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಬಹುತೇಕ ಅನುಮಾನ.

ಹೈದ್ರಾಬಾದ್‌ನಲ್ಲಿ ಶೂಟಿಂಗ್‌ ಮುಗಿಸಿದ ದರ್ಶನ್ 'ಕ್ರಾಂತಿ'!

ಹೈದ್ರಾಬಾದ್‌ನಲ್ಲಿ ಶೂಟಿಂಗ್‌ ಮುಗಿಸಿದ ದರ್ಶನ್ 'ಕ್ರಾಂತಿ'!

ಕ್ರಾಂತಿ ಚಿತ್ರದ ಶೂಟಿಂಗ್‌ ಈಗಾಗಲೇ ಆರಂಭ ಆಗಿದೆ. ಮೊದಲ ಹಲವು ದಿನಗಳ ಶೂಟಿಂಗ್‌ ಮುಗಿಸಿದೆ. ಕಳೆದ ಬಾರಿ ಚಿತ್ರೀಕರಣಕ್ಕಾಗಿ ಕ್ರಾಂತಿ ತಂಡ ಹೈದ್ರಾಬಾದ್‌ಗೆ ತೆರಳಿತ್ತು. ಹೈದ್ರಾಬಾದ್‌ನಲ್ಲಿ ಕೆಲವು ದಿನಗಳ ಶೂಟಿಂಗ್‌ ಮಾತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ನಟ ದರ್ಶನ್‌ಗೆ ರಚಿತಾ ರಾಮ್‌ ಜೊತೆ ಆಗುತ್ತಿದ್ದಾರೆ. ಹಾಗೆ ಕನ್ನಡದ ಹಲವು ಖ್ಯಾತ ಕಲಾವಿದರು ಕ್ರಾಂತಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Actor Darshan Starrer Kranti Movie First Look Will Be Out On His BirthDay February 16th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X