ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ಒಡೆಯ' ರಿಲೀಸ್ ಡೇಟ್ ಫಿಕ್ಸ್

Recommended Video

ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ | FILMIBEAT

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ 'ಒಡೆಯ' ಚಿತ್ರದ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಒಡೆಯ ಈಗ ಚಿತ್ರಮಂದಿರಕ್ಕೆ ಲಗ್ಗೆ ಇಡಲು ಸಜ್ಜಾಗಿದೆ. ಒಡೆಯನ ಅಬ್ಬರ ನೋಡಲು ಬಾರಿ ಕುತೂಹಲದಿಂದ ಕಾಯುತ್ತಿರುವ ಡಿ ಬಾಸ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ.

ಸದ್ಯ ಒಡೆಯ ಅಡ್ಡಾದಿಂದ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ 'ಒಡೆಯ' ಸಿನಿಮಾ ಮುಂದಿನ ತಿಂಗಳು '12'ಕ್ಕೆ ತೆರೆಗೆ ಬರಲು ರೆಡಿಯಾಗಿದೆಯಂತೆ. ಈ ಮೊದಲು ಒಡೆಯ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಸಲ್ಮಾನ್ ಖಾನ್ ಮತ್ತು ಸುದೀಪ್ ಅಭಿನಯದ 'ದಬಾಂಗ್-3' ಚಿತ್ರದ ರಿಲೀಸ್ ದಿನವೆ 'ಒಡೆಯ' ಕೂಡ ದರ್ಶನ ನೀಡಲಿದ್ದಾನೆ ಎನ್ನುವ ಸುದ್ದಿ ಹರಿದಾಡಿತ್ತು.

ಆದರೀಗ ಚಿತ್ರತಂಡ ಅಂದುಕೊಂಡಿದಕ್ಕಿಂತ ಮುಂಚಿತವಾಗಿಯೆ ರಿಲೀಸ್ ಮಾಡಲು ಮುಂದಾಗಿದೆ. ಇನ್ನು ವಿಶೇಷ ಅಂದರೆ ಚಿತ್ರದ ಟ್ರೈಲರ್ ರಿಲೀಸ್ ಗೂ ಡೇಟ್ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ 'ಒಡೆಯ' ಟ್ರೈಲರ್ ಡಿಸೆಂಬರ್ '1'ಕ್ಕೆ ತೆರೆಗೆ ಬರುತ್ತಿದೆಯಂತೆ. ಒಡೆಯ ಟ್ರೈಲರ್ ಗಾಗಿ ಅಭಿಮಾನಿಗಳು ಸಾಕಷ್ಟು ದಿನಗಳಿಂದ ಕಾಯುತ್ತಿದ್ದರು. ಆದರೆ ಟ್ರೈಲರ್ ಯಾವಾಗ ರಿಲೀಸ್ ಆಗುತ್ತೆ ಎನ್ನುವುದು ರಿವೀಲ್ ಆಗಿರಲಿಲ್ಲ.

Actor Darshan Starrer Odeya Movie Will Release On December 12th

ಡಿಸೆಂಬರ್ 1ಕ್ಕೆ ಟ್ರೈಲರ್ ರಿಲೀಸ್ ಮಾಡಿ ಡಿಸೆಂಬರ್ 12ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಸೆನ್ಸಾರ್ ಸರ್ಟಿಫಿಕೇಟ್ ಬಂದ ನಂತರ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ. 'ಒಡೆಯ' ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ. ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಣವಿದೆ.

ದರ್ಶನ್ ಗೆ ನಾಯಕಿಯಾಗಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಬಣ್ಣಹಚ್ಚುತ್ತಿರುವ ಸನಾ ಸ್ಟಾರ್ ನಟನ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಒಡೆಯ ಸಿನಿಮಾ ತಮಿಳಿನ ವೀರಂ ಸಿನಿಮಾದ ರಿಮೇಕ್. 'ವೀರಂ' ಚಿತ್ರದಲ್ಲಿ ಅಜಿತ್ ನಾಯಕನಾಗಿ ಅಬ್ಬರಿಸಿದ್ದರು. ಅದೆ ಪಾತ್ರದಲ್ಲಿ ಈಗ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor Darshan starrer Odeya movie will release on December 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X