twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ದಾಖಲೆ ಬರೆದ ನಟ ದರ್ಶನ್ ಸಿನಿಮಾ 'ರಾಬರ್ಟ್'!

    |

    ಕನ್ನಡ ಚಿತ್ರ ರಂಗದಲ್ಲಿ ನಟ ದರ್ಶನ್ ಚಿತ್ರಗಳಿಗೆ ವಿಭಿನ್ನ ಬೇಡಿಕೆ ಇರುತ್ತದೆ. ನಟ ದರ್ಶನ್ ಚಿತ್ರಗಳಿಗೆ ಮಾಸ್ ಪ್ರೇಕ್ಷಕರು ಹೆಚ್ಚು. ದರ್ಶನ್ ಚಿತ್ರಗಳು ರಿಲೀಸ್‌ ಆಗೋದೊಂದೇ ತಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿ ಬಿಡುತ್ತವೆ. ಹಾಗಾಗಿ ದರ್ಶನ್‌ ಅವರಿಗಾಗಿ ಸಿನಿಮಾ ಮಾಡಲು ನಿರ್ಮಾಪಕರು ಕಾಯುತ್ತಿರುತ್ತಾರೆ. ಅದರಲ್ಲೂ ಇತ್ತೀಚೆಗೆ ದರ್ಶನ್‌ ಸಿನಿಮಾ ಕಥೆಗಳ ಆಯ್ಕೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟ ಆಗಿದೆ.

    ದರ್ಶನ್‌ ಸಿನಿಮಾಗಳು ಯಾವ ದಾಖಲೆ ಮಾಡುತ್ತವೆಯೋ ಇಲ್ಲವೋ, ಚಿತ್ರಕ್ಕೆ ದುಡ್ಡು ಹಾಕಿದ ನಿರ್ಮಾಪಕನಿಗೆ ಮಾತ್ರ ಲಾಭ ತಂದು ಕೊಡುತ್ತವೆ. ಕರ್ನಾಟಕದಲ್ಲಿ ಮಾತ್ರವೇ ರಿಲೀಸ್ ಆದರೂ ಕೂಡ ದರ್ಶನ್‌ ಅವರ ಸಿನಿಮಾಗಳು ಗಳಿಕೆಯಲ್ಲಿ ಸದಾ ಮುಂದು.

    ಈಗ ದರ್ಶನ್‌ ಅಭಿನಯದ 'ರಾಬರ್ಟ್‌' ಸಿನಿಮಾ ಹೊಸ ದಾಖಲೆ ಮಾಡಿದೆ. ಬುಕ್‌ ಮೈ ಶೋ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ 'ರಾಬರ್ಟ್‌' ದಾಖಲೆ ಬರೆದಿದೆ.

    2021ರಲ್ಲಿ ಹೆಚ್ಚಿನ ಬೇಡಿಕೆ ಇದ್ದ ಚಿತ್ರ 'ರಾಬರ್ಟ್‌'!

    2021ರಲ್ಲಿ ಹೆಚ್ಚಿನ ಬೇಡಿಕೆ ಇದ್ದ ಚಿತ್ರ 'ರಾಬರ್ಟ್‌'!

    ಮೊದಲ ಲಾಕ್‌ಡೌನ್‌ ಬಳಿಕ ಬಂದ ಎರಡನೇ ಚಿತ್ರ 'ರಾಬರ್ಟ್'. ಆದರೆ ಸಿನಿಮಾ ರಿಲೀಸ್‌ ಆಗಿದ್ದು ಈ ವರ್ಷದ ಆರಂಭದಲ್ಲಿ ಆದರೆ ಈ ಹೇಗೆ ದಾಖಲೆ ಸೇರಲು ಸಾಧ್ಯ ಎನ್ನುವು ಪ್ರಶ್ನೆ ಮೂಡ ಬಹುದು. ಆದರೆ ಇಡೀ ವರ್ಷವನ್ನು ತೆಗೆದುಕೊಂಡಾಗ 'ರಾಬರ್ಟ್‌' ದಾಖಲೆ ಪುಟ ಸೇರಿದ್ದಾನೆ.

    ಬೆಂಗಳೂರಿನಲ್ಲಿ ಈ ವರ್ಷ ಅತಿ ಹೆಚ್ಚು ಬೇಡಿಕೆ ಇದ್ದ ಚಿತ್ರ 'ರಾಬರ್ಟ್' ಎನ್ನುವುದು ಸರ್ವೆ ಇಂದ ಗೊತ್ತಾಗಿದೆ. ಈ ವಿಚಾರವನ್ನು ಬುಕ್‌ ಮೈ ಶೋ ಪೇಜ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಅಷ್ಟಕ್ಕೂ ಈ ಸಾಲಿನಲ್ಲಿ ಇರುವ ಏಕೈಕ ಕನ್ನಡ ಚಿತ್ರ ಇದು.

    ಸಿನಿಮಾ ಕ್ರೇಜಿ ಸಿಟಿಗಳ ಸಮೀಕ್ಷೆ!

    ಸಿನಿಮಾ ಕ್ರೇಜಿ ಸಿಟಿಗಳ ಸಮೀಕ್ಷೆ!

    ಯಾವ ಯಾವ ಸಿಟಿಗಳಲ್ಲಿ ಸಿನಿಮಾ ಕ್ರೇಜ್‌ ಹೆಚ್ಚಾಗಿ ಇದೆ ಎನ್ನುವ ಬಗ್ಗೆ ಒಂದು ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ, ಬೆಂಗಳೂರು, ಹೈದ್ರಾಬಾದ್, ಚೆನ್ನೈ ಮತ್ತು ಮುಂಬೈ ಸಿಟಿಗಳು ಇವೆ. ಆಯಾ ಸಿಟಿಗಳಲ್ಲಿ ಈ ವರ್ಷ (2021) ಯಾವ ಯಾವ ಚಿತ್ರಗಳಿಗೆ ಹೆಚ್ಚಿನ ಕ್ರೇಜ್‌ ಇತ್ತು ಎನ್ನುವ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಈ ಪೈಕಿ ಮುಂಬೈನಲ್ಲಿ 'ಸೂರ್ಯವಂಶಿ', ಚೆನ್ನೈನಲ್ಲಿ 'ಮಾಸ್ಟರ್', ಹೈದ್ರಾಬಾದ್‌ನಲ್ಲಿ 'ಜಾತಿ ರತ್ನಾಲು', ಮತ್ತು ಬೆಂಗಳೂರಿನಲ್ಲಿ 'ರಾಬರ್ಟ್‌' ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇತ್ತು ಎನ್ನುವುದು ತಿಳಿದು ಬಂದಿದೆ.

    ಮೊದಲ ಲಾಕ್‌ ಡೌನ್‌ ಬಳಿಕ ತೆರೆಗೆ ಬಂದ 2ನೇ ಚಿತ್ರ ರಾಬರ್ಟ್!

    ಮೊದಲ ಲಾಕ್‌ ಡೌನ್‌ ಬಳಿಕ ತೆರೆಗೆ ಬಂದ 2ನೇ ಚಿತ್ರ ರಾಬರ್ಟ್!

    ರಾಬರ್ಟ್‌ ಚಿತ್ರವನ್ನು ನಿರ್ದೇಶಕ ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ಉಮಾಪತಿ ಬಂಡವಾಳ ಹೂಡಿದ್ದಾರೆ. ನಟ ದರ್ಶನ್‌ ಎರಡು ಶೇಡ್‌ಗಳಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ ರೂಪದಲ್ಲಿ ಶಾಂತ ಮೂರ್ತಿ ಆಗಿ, ರಾಬರ್ಟ್‌ ಅವತಾರದಲ್ಲಿ ಉಗ್ರ ರೂಪ ತಾಳಿದ್ದಾರೆ. ಈ ಚಿತ್ರ ಹೆಚ್ಚಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದಿದೆ. ಅನ್‌ಲಾಕ್ ಬಳಿಕ ರಿಲೀಸ್‌ ಆಗಿ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ಸಿನಿಮಾ ಎನ್ನುವ ಹೆಗ್ಗಳಿಕೆ ರಾಬರ್ಟ್‌ ಚಿತ್ರಕ್ಕಿದೆ. ಅಧಿಕೃತವಾಗಿ ಈ ಚಿತ್ರ 78ಕೋಟಿ ಗೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನಲಾಗಿದೆ.

    ಪರಭಾಷೆ ಹಾವಳಿ ನಡುವೆಯೂ ಗೆದ್ದ ಕನ್ನಡ ಚಿತ್ರ!

    ಪರಭಾಷೆ ಹಾವಳಿ ನಡುವೆಯೂ ಗೆದ್ದ ಕನ್ನಡ ಚಿತ್ರ!

    ಬೆಂಗಳೂರಿನಲ್ಲಿ ಕನ್ನಡಿಗರು ಮಾತ್ರ ಇಲ್ಲ. ಬೇರೆ, ಬೇರೆ ಭಾಷೆ ದೇಶದ ಜನರು ಇದ್ದಾರೆ. ಹಾಗಾಗಿ ಇಲ್ಲಿ ಕನ್ನಡ ಚಿತ್ರಗಳಿಗಿಂತ ಪರ ಭಾಷೆಯ ಚಿತ್ರಗಳ ಹಾವಳಿಯೇ ಹೆಚ್ಚು. ಆದರೆ ಅಂತಹ ಹಾವಳಿಗಳ ನಡುವೆಯೂ ರಾಬರ್ಟ್‌ ಚಿತ್ರ ಗೆದ್ದಿದೆ. ಬೆಂಗಳೂರಿನಲ್ಲಿ ಕನ್ನಡ ಚಿತ್ರಕ್ಕೆ ಹೆಚ್ಚಿನ ಕ್ರೇಜ್ ಇದೆ, ಹೆಚ್ಚಿನ ಬೇಡಿಕೆ ಇದೆ ಎನ್ನುವುದೇ ಸಂತಸದ ಸಮಾಚಾರ.

    English summary
    Actor Darshan Starrer Roberrt Movie Set New Record In 2021, Know More
    Thursday, December 23, 2021, 11:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X