For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ದರ್ಶನ್ 'ಸಾರಥಿ'ಯಾಗಿ ಇಂದಿಗೆ 9 ವರ್ಷ

  |

  ಸ್ಯಾಂಡಲ್ ವುಡ್ ನ ಡಿ ಬ್ರದರ್ಸ್ ಗೆ ಇಂದು ವಿಶೇಷವಾದ ದಿನ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ ಸಾರಥಿ ಸಿನಿಮಾ ರಿಲೀಸ್ ಆದ ದಿನವಿದು. ಚಾಲೆಂಜಿಂಗ್ ಸ್ಟಾರ್ ಸಿನಿ ಜೀವನಕ್ಕೆ ಹೊಸ ತಿರುವು ಕೊಟ್ಟ ಸೂಪರ್ ಹಿಟ್ ಸಿನಿಮಾವಿದು. 2011ರಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು.

  ಈ ಸೂಪರ್ ಹಿಟ್ ಸಿನಿಮಾಗೆ ಈಗ 9 ವರ್ಷದ ಸಂಭ್ರಮ. ಇನ್ನೇನು ದರ್ಶನ್ ಸಿನಿಮಾ ಕರಿಯರ್ ಮುಗಿತೇ ಹೋಯಿತು ಎಂದು ಇಡೀ ಗಾಂಧಿನಗರ ಮಾತನಾಡಿಕೊಳ್ಳುತ್ತಿದ್ದ ಸಮಯದಲ್ಲಿ ಬಂದ 'ಸಾರಥಿ' ಸಿನಿಮಾ ಡಿ ಬಾಸ್ ರನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತು. 'ಸಾರಥಿ'ಯನ್ನು ಅಭಿಮಾನಿಗಳು ತಲೆಮೇಲೆ ಹೊತ್ತು ಮೆರವಣಿಗೆ ಮಾಡಿದ್ರು. ಆ ನಂತರ ಬಂದ ಚಾಲೆಂಜಿಂಗ್ ಸ್ಟಾರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದವು.

  ರೈತರ ಬಗ್ಗೆ ದರ್ಶನ್‌ಗಿರುವ ಕಾಳಜಿ ಕುರಿತು ಪವನ್ ಒಡೆಯರ್ ಮಾತುರೈತರ ಬಗ್ಗೆ ದರ್ಶನ್‌ಗಿರುವ ಕಾಳಜಿ ಕುರಿತು ಪವನ್ ಒಡೆಯರ್ ಮಾತು

  ಈ ಸಿನಿಮಾದಲ್ಲಿ ದರ್ಶನ್ ಆಟೋ ಸಾರಥಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜ ಅನ್ನೋ ಪಾತ್ರದಲ್ಲಿ ಮಿಂಚಿದ್ದ ದರ್ಶನ್ ಅಭಿಮಾನಿಗಳ ಮನಗೆದ್ದಿದರು. ಚಿತ್ರದ ಮೇಕಿಂಗ್, ಪವರ್ ಪುಲ್ ಪಂಚಿಂಗ್ ಡೈಲಾಗ್ಸ್, ಲವ್ ಸ್ಟೋರಿ, ಫ್ಲ್ಯಾಶ್ ಬ್ಯಾಕ್ ಕಥೆ ಎಲ್ಲವೂ ಚಿತ್ರಪ್ರಿಯರಿಗೆ ತುಂಬಾ ಇಷ್ಟವಾಗಿತ್ತು.

  ಜಗ್ಗುದಾದನಿಗೆ ಸಾಥ್ ಕೊಟ್ಟಿದ್ದು ಈ ಪ್ರೀತಿಯ ಕುದುರೆ | Filmibeat Kannada

  ಇದೀಗ 9 ವರ್ಷ ತುಂಬಿರುವ ಖುಷಿಯನ್ನು ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಡಿ ಬ್ರದರ್ಸ್ ಮತ್ತೊಂದು ಸೂಪರ್ ಹಿಟ್ ಸಿನಿಮಾವನ್ನು ಆದಷ್ಟು ಬೇಗ ಮಾಡಲಿ ಎಂದು ಹರಿಸುತ್ತಿದ್ದಾರೆ. ದರ್ಶನ್ ಸದ್ಯ ಮದಕರಿ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದ್ದಾರೆ.

  English summary
  Actor Darshan starrer Sarathi Kannada film completes 9 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X