For Quick Alerts
  ALLOW NOTIFICATIONS  
  For Daily Alerts

  ಒಗ್ಗಟ್ಟಿನಿಂದ ಮಾತ್ರ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ: ಮೋದಿಗೆ ದರ್ಶನ್ ಸಾಥ್

  |

  ಇಡೀ ವಿಶ್ವವೆ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದೆ. ಕಿಲ್ಲರ್ ವೈರಸ್ ಅನ್ನು ಮಟ್ಟಹಾಕಲು ಭಾರತ 14 ದಿನಗಳ ಲಾಕ್ ನಿರ್ಧಾರ ತೆಗೆದುಕೊಂಡಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಹೊಸ ಟಾಸ್ಕ್ ನೀಡಿದ್ದಾರೆ. ಕಳೆದ ತಿಂಗಳು ಜನತಾ ಕರ್ಫ್ಯೂಗೆ ಮೋದಿ ಕರೆಕೊಟ್ಟಿದ್ದರು. ದೇಶದ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು.

  ಈ ಬಾರಿ ದೀಪ ಬೆಳಗುವ ಟಾಸ್ಕ್ ನೀಡಿದ್ದಾರೆ. ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲಾ ಲೈಟ್ಸ್ ಆರಿಸಿ ಮನೆಯ ಮುಂದೆ, ಅಥವಾ ಬಾಲ್ಕನಿಯಲ್ಲಿ ಮುಂಬೊತ್ತಿ, ದೀಪಾ, ಮೊಬೈಲ್ ಫ್ಲ್ಯಾಷ್ ಅಥವಾ ಟಾರ್ಚ್ ಬೆಳಗಿ ಕೊರೊನಾ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ದೇಶದ ಜನತೆಗೆ ಕರೆಕೊಟ್ಟಿದ್ದಾರೆ. ಮೋದಿಗೆ ಸಾಕಷ್ಟು ಮಂದಿ ಬೆಂಬಲಿಸಿ ದೀಪ ಬೆಳಗುವಂತೆ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬೆಂಬಲ ನೀಡಿದ್ದು, ದೀಪ ಬೆಳಗುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

  ಮೋದಿಗೆ ದರ್ಶನ್ ಬೆಂಬಲ

  ಮೋದಿಗೆ ದರ್ಶನ್ ಬೆಂಬಲ

  ಮೋದಿ ಕರೆ ಕೊಡುತ್ತಿದ್ದಂತೆ ಅನೇಕರು ಮೋದಿ ಬೆಂಬಲ ಸೂಚಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಬೆಂಬಲಿಸಿ ಅಭಿಮಾನಿಗಳಿಗೆ ಅಂಧಕಾರವನ್ನು ತೊಲಗಿಸಲು ರಾತ್ರಿ 9 ಗಂಟೆಗೆ ಮನೆಯಲ್ಲಿಯೆ ಮೊಂಬತ್ತಿ ಅಥವಾ ದೀಪ ಬೆಳಗಿ ಎಂದು ಹೇಳಿದ್ದಾರೆ.

  ದರ್ಶನ್ ಟ್ವೀಟ್

  ಈ ಬಗ್ಗೆ ಟ್ವೀಟ್ ಮಾಡಿರು ದರ್ಶನ್ "ನಮ್ಮ ಪ್ರಧಾನಿಗಳ ಕರೆಯಂತೆ ಕೊರೊನಾ ವೈರಸ್ ಇಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5, ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೊಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ" ಎಂದು ಹೇಳಿದ್ದಾರೆ.

  ಒಗ್ಗಟ್ಟಿನಿಂದ ಮಾತ್ರ ಈ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ

  ಇನ್ನು ಮತ್ತೊಂದು ಟ್ವೀಟ್ ನಲ್ಲಿ ದರ್ಶನ್ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಬೇಕಂದರೆ ಒಗ್ಗಟ್ಟು ಇರಬೇಕೆಂದು ಎಂದು ಹೇಳಿದ್ದಾರೆ. "ಎಲ್ಲಾ ಭಾರತೀಯರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ" ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

  ನಾಡಿನ ಜನತೆಗೆ ಸಲಹೆ ನೀಡಿದ್ದಾರೆ ದರ್ಶನ್

  ಈ ಮೊದಲು ದರ್ಶನ್ ಟ್ವೀಟ್ ಮಾಡಿ ನಾಡಿನ ಜನತೆಗೆ ಸಲಹೆ ನೀಡಿದ್ದರು. "ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು" ಎಂದು ಹೇಳಿದ್ದರು.

  English summary
  Kannada Actor Challenging star Darshan support Narendra modi new task.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X