Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಯಾವತ್ತೋ 'ಮುತ್ತಪ್ಪ ರೈ' ಆಗ್ಬೇಕಿತ್ತು ನಟ 'ದರ್ಶನ್'!
ಸಿನಿಮಾರಂಗದಲ್ಲಿ ಅಂಡರ್ವರ್ಲ್ಡ್ ಕುರಿತಾದ ಸಿನಿಮಾಗಳು ಬಂದು ಗೆದ್ದು ಬೀಗಿವೆ. ಹಾಗಾಗಿ ಈಗಲೂ ಭೂಗತ ಲೋಕದ ಕಥೆಗೆಳಿಗೆ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಅದರಲ್ಲೂ ನಡೆದ ನೈಜ ಘಟನೆಗಳನ್ನು ಸಿನಿಮಾ ಮಾಡಿದರೆ ಅದಕ್ಕೆ ಹೆಚ್ಚಿನ ಕ್ರೇಜ್ ಇರುತ್ತದೆ.

ಕನ್ನಡದಲ್ಲಿ ಹಲವೂ ಭೂಗತ ಲೋಕದ ಕಥೆಗಳು ಬಂದಿವೆ. ಈಗ ಡಲಿ ಧನಂಜಯ್ ಜಯರಾಜ್ ಕಥೆಯಲ್ಲಿ ನಟಿಸುತ್ತಾ ಇದ್ದಾರೆ. ಆದರೆ ಅದ್ಯಾಕೋ ಭೂಗತ ಲೋಕವನ್ನು ಆಳಿದ ಮುತ್ತಪ್ಪ ರೈ ಕಥೆ ಮಾತ್ರ ತೆರೆಮೇಲೆ ಬರಲು ನೂರೆಂಟು ವಿಘ್ನ
ಉಪೇಂದ್ರ
ಹೊಸ
ಸಿನಿಮಾ
ರಹಸ್ಯ
ಜೂನ್
3ಕ್ಕೆ
ರಿವೀಲ್!
ಈಗ ಮತ್ತೆ ಮುತ್ತಪ್ಪ ರೈ ಸಿನಿಮಾ ಸೆಟ್ಟೇರುವ ಮಾತುಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಹಳೆ ವಿಚಾರ ಒಂದು ರಿವೀಲ್ ಆಗಿದೆ. ಮುತ್ತಪ್ಪ ರೈ ಸಿನಿಮಾ ಮಾಡ ಬೇಕು ಎಂದು ಹಲವು ವರ್ಷಗಳಿಂದ ಒಡಾಡುತ್ತಾ ಇರುವ ನಿರ್ದೇಶ ರವಿ ಶ್ರೀವತ್ಸ ಈ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. ಮುಂದೆ ಓದಿ....
ನಟರು
ಮಾಡಿದ್ದು
ತಪ್ಪು,
ಸರ್ಕಾರ
ಮಾಡಿದ್ದು
ಸರಿಯೇ
ಉಪೇಂದ್ರ
ಪ್ರಶ್ನೆ

ಮುತ್ತಪ್ಪ ರೈ ಸಿನಿಮಾಗೆ ಒಂದಲ್ಲಾ ಒಂದು ವಿಘ್ನ!
ಕೆಲವು ದಿನಗಳ ಹಿಂದೆ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಟಿ ನಡೆಸಿ, ಮುತ್ತಪ್ಪ ರೈ ಸಿನಿಮಾದ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಈ ಸಿನಿಮಾ ಮಾಡಲು ಅವರಗೆ ನೂರೆಂಟು ವಿಘ್ನಗಳು ಎದುರಾದ ಕಾರಣ ಅವರು ಈ ಸಿನಿಮಾ ಮಾಡದೇ ಇರಲು ನಿರ್ಧರಿಸಿ, ಸದ್ಯಕ್ಕೆ ಮುತ್ತಪ್ಪ ರೈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಆದರೆ ಮೊದಲು ಮುತ್ತಪ್ಪ ರೈ ಇದ್ದಾಗಲೇ, ಅವರ ಬಳಿ ಸಿನಿಮಾ ಮಾಡುವುದಾಗಿ ಕಥೆಯನ್ನು ಚರ್ಚೆ ಮಾಡಿದ್ದರಂತೆ ರವಿ ಶ್ರೀವತ್ಸ ಮತ್ತು ರವಿ ಬೆಳಗೆರೆ.

ಮುತ್ತಪ್ಪ ರೈ ಆಗ್ಬೇಕಿತ್ತು ನಟ ದರ್ಶನ್!
ಇನ್ನು ಮೊದಲು ರವಿ ಶ್ರೀವತ್ಸ ಅವರು ಈ ಸಿನಿಮಾ ಮಾಡಲು ಸಾಧ್ಯವಾಗದೆ ಹೋದಾಗ, ಈ ಸಿನಿಮಾವನ್ನು ಕೆವಿ ರಾಜು ನಿರ್ಮಾಣ ಮತ್ತು ಓಂ ಪ್ರಕಾಶ್ ನಿರ್ದೇಶನದಲ್ಲಿ ಸಿನಿಮಾದ ಕೆಲಸಗಳು ಶುರುವಾದವು ಈ ಚಿತ್ರಕ್ಕಾಗಿ ನಟ ದರ್ಶನ್ ಅವರನ್ನು ಮುತ್ತಪ್ಪ ರೈ ಪಾತ್ರಕ್ಕೆ ತರಲು ಸಿದ್ಧತೆ ನಡೆದಿತ್ತು. ಇನ್ನು ದರ್ಶನ್ ಕೂಡ ಈ ಸಿನಿಮಾ ಒಪ್ಪಿಕೊಂಡಿದ್ದರಂತೆ. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಕೂಡ ನಿಂತು ಹೋಯ್ತು.

ಸಿನಿಮಾ ಬೇಡ ಎನ್ನುತ್ತಿದ್ದರು ಮುತ್ತಪ್ಪ ರೈ!
ಇನ್ನು ಮುತ್ತಪ್ಪ ರೈ ಅವರಿಗೆ ತಮ್ಮ ಬಗ್ಗೆ ಸಿನಿಮಾ ಮಾಡಬೇಕಾ, ಬೇಡವಾ ಎನ್ನುವ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವಂತೆ. ಇನ್ನು ಕೆಲವು ವಿಚಾರಗಳು ತೆರೆಮೇಲೆ ಹಾಗೆ ತೋರಿಸಲು ಮುತ್ತಪ್ಪ ರೈ ಒಪ್ಪುತ್ತಾ ಇರಲಿಲ್ಲವಂತೆ. ಹಾಗಾಗಿ ಇದೇ ಗೊಂದಲದಲ್ಲೇ ಮುತ್ತಪ್ಪ ರೈ ಸಿನಿಮಾ ನಾಲ್ಕು ಬಾರಿ ನಿಂತು ಹೋಗಿದೆ. ಈಗ ಮತ್ತೆ ಇದೆ ಕಥೆಯ ಬಗ್ಗೆ ಹೊಸ ಚರ್ಚೆ ಶುರುವಾಗಿದೆ.

RGV ಈ ಹಿಂದೆಯೇ ಈ ಸಿನಿಮಾ ಮಾಡಬೇಕಿತ್ತು!
ಇನ್ನು ಈ ಹಿಂದೆಯೇ ಮುತ್ತಪ್ಪ ರೈ ಸಿನಿಮಾ ಮಾಡಬೇಕಿತ್ತು ರಾಮ್ ಗೋಪಾಲ್ ವರ್ಮಾ. ವಿವೇಕ್ ಒಬೆರಾಯ್ ಮುತ್ತಪ್ಪ ರೈ ಆಗಿ ನಟಿಸಬೇಕಿತ್ತು. ಈ ಸಿನಿಮಾ ಅದ್ದೂರಿಯಾಗಿ ಲಾಂಚ್ ಆಯ್ತು. ಆದರೆ ಅದೇನೂ ಆಗದೆ ಅರ್ಧಕ್ಕೆ ನಿಂತು ಬಿಟ್ಟಿತು. ಈಗ ಮತ್ತೆ ಈ ಸಿನಿಮಾವನ್ನು ನಟ ಉಪೇಂದ್ರಗಾಗಿ, ರಾಮ್ ಗೋಪಾಲ್ ವರ್ಮಾ ಮಾಡಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ.