twitter
    For Quick Alerts
    ALLOW NOTIFICATIONS  
    For Daily Alerts

    ದಾವಣಗೆರೆಯಲ್ಲಿ ಗರಂ ಆದ ದರ್ಶನ್: ಆದರೂ ಬೆಣ್ಣೆದೋಸೆ ಮರೆಯಲಿಲ್ಲ!

    |

    ದಾವಣಗೆರೆಯಲ್ಲಿ ನಡೆದ ಮಾಜಿ ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ ಅವರ ಅದ್ಧೂರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನಟ ದರ್ಶನ್ ನಿನ್ನೆ (ಸೆಪ್ಟೆಂಬರ್ 22) ಪಾಲ್ಗೊಂಡಿದ್ದರು.

    ತಮ್ಮ ಮೆಚ್ಚಿನ ನಟ ದರ್ಶನ್ ಅನ್ನು ಕಣ್ತುಂಬಿಸಿಕೊಳ್ಳಲು ಹಲವು ಜಿಲ್ಲೆಗಳಿಂದ ಜನ ಬಂದಿದ್ದರು. ದರ್ಶನ್ ಕಾರ್ಯಕ್ರಮ ಸಂಜೆ ಇದ್ದರೂ ಬೆಳಿಗ್ಗಿನಿಂದಲೇ 'ಡಿ ಬಾಸ್... ಡಿ ಬಾಸ್' ಘೋಷಿಣೆ ಮೊಳಗಿತ್ತು. ಇನ್ನು ಸಂಜೆ 6 ಗಂಟೆಗೆ ದರ್ಶನ್ ಬರಬೇಕಾಗಿತ್ತು, ಆದರೆ ಬಂದಿದ್ದು 9 ಕ್ಕೆ ಆದರೂ ಜನ ದರ್ಶನ್‌ಗಾಗಿ ಕಾದಿದ್ದರು. ದರ್ಶನ್ ವೇದಿಕೆಗೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಯಿತು. ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ನುಗ್ಗಲು ಶುರು ಮಾಡಿದರು‌. ವೇದಿಕೆ ಅಕ್ಕಪಕ್ಕದಲ್ಲಿ ಹೆಚ್ಚಾಗಿ ಜನರು ಸೇರಿದ್ದರು. ಪೊಲೀಸರು, ಆಯೋಜಕರು ಮನವಿ ಮಾಡಿದರೂ ಅಭಿಮಾನಿಗಳು ಕ್ಯಾರೇ ಎನ್ನಲಿಲ್ಲ.

    ಅಣ್ಣಾವ್ರ ಮಕ್ಕಳು, ದರ್ಶನ್ ಸ್ಟಾರ್ ಆಗ್ತಾ ಇದ್ರಾ? ನೆಪೋಟಿಸಂ ಬಗ್ಗೆ ತುಟಿಬಿಚ್ಚಿದ ನಟಿ ಶೃತಿ!ಅಣ್ಣಾವ್ರ ಮಕ್ಕಳು, ದರ್ಶನ್ ಸ್ಟಾರ್ ಆಗ್ತಾ ಇದ್ರಾ? ನೆಪೋಟಿಸಂ ಬಗ್ಗೆ ತುಟಿಬಿಚ್ಚಿದ ನಟಿ ಶೃತಿ!

    ಮೈಕ್ ಹಿಡಿದು ಮಾತನಾಡಲು ಶುರು ಮಾಡಿದ ದರ್ಶನ್ ನೂಕಾಟ-ತಳ್ಳಾಟ ಮಾಡುತ್ತಿದ್ದವರ ಅತಿರೇಕ ವರ್ತನೆಗೆ ಸಿಡಿಮಿಡಿಗೊಂಡರು‌. ''ಅಣ್ಣಾ ಯಾಕ್ರೀ ಅಡ್ಡ ನಿಲ್ತೀರಾ‌. ತಳ್ಳಾಟ, ನೂಕಾಟ ಮಾಡಬೇಡಿ‌. ವೇದಿಕೆ ಮೇಲೆ ನುಗ್ಗಬೇಡಿ‌. ಸೈಡ್ ಗೆ ಹೋಗಿ'' ಎಂದು ಗದರಿದರು‌. ನಿಮ್ಮ ಕೈಯಲ್ಲೇ ಅಭಿಮಾನಿಗಳನ್ನು ಸರಿಸಲು ಆಗಲ್ಲ‌. ನಾನೇ ಮಾಡ್ತೇನೆ ಎಂದ್ರು. ಆ ಬಳಿಕ ಸ್ವಲ್ಪ ಮಟ್ಟಿಗೆ ಅಭಿಮಾನಿಗಳ ವರ್ತನೆ ಕಡಿಮೆ ಆಯ್ತು.

    Actor Darshan Talked About Benne Dosa in Davangere

    ವೇದಿಕೆ ಮೇಲಿದ್ದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆರಗಿ ಆಶೀರ್ವಾದ ಪಡೆದ ದರ್ಶನ್, ಬಳಿಕ ಗೆಳೆಯ ಎಸ್‌ಎಸ್ ಮಲ್ಲಿಕಾರ್ಜುನ್‌ಗೆ ಕೇಕ್ ತಿನ್ನಿಸಿ ಆಲಿಂಗಿಸಿಕೊಂಡರು. ಆಗಂತೂ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತು.

    ''ಬೆಣ್ಣೆದೋಸೆಯಷ್ಟೇ ಇಲ್ಲಿನ ಜನರ ಮನಸ್ಸು ಮತ್ತು ಮಾತು ಇಷ್ಟ.‌ ನಾನು ಡಯಟ್ ಮಾಡುತ್ತಿದ್ದರೂ ಬೆಣ್ಣೆದೋಸೆ ತಿಂದೇ ಹೋಗುತ್ತೇನೆ. ನನಗೆ ಬೆಣ್ಣೆದೋಸೆ ಅಂದ್ರೆ ತುಂಬಾನೇ ಇಷ್ಟ. ಇಷ್ಟೊಂದು ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಖುಷಿ ತಂದಿದೆ'' ಎಂದರು. ಗೆಳೆಯ ಮಲ್ಲಿಕಾರ್ಜುನ್ ಪರವಾಗಿಯೂ ಮಾತನಾಡಿದ ದರ್ಶನ್, ''ಜನ ಸೇವೆ ಮಾಡಲು ನಮ್ಮ ಮಲ್ಲಣ್ಣನಿಗೆ ಅವಕಾಶ ನೀಡಿ'' ಎಂದರು.

    ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನಡೆಸಿಕೊಟ್ಟ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಫಿದಾ ಆದರು. ಹರಿಕೃಷ್ಣ ಸಂಗೀತ ನಿರ್ದೇಶನದ ಸಿನಿಮಾಗಳ ಹಾಡಿಗೆ ಹುಚ್ಚೆದ್ದು ಕುಣಿದರು. ಇನ್ನು ಕಾಮಿಡಿ ಕಿಲಾಡಿಗಳು ತಂಡದವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

    ವೇದಿಕೆ ಮೇಲೆ ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕುಟುಂಬದವರು ಹಾಜರಿದ್ದರು. ಮಲ್ಲಿಕಾರ್ಜುನ್ ಗೆ ದರ್ಶನ್ ಕೇಕ್ ತಿನ್ನಿಸಿದರು. ಇಬ್ಬರು ಆಲಿಂಗಿಸಿಕೊಂಡರು. ಈ ವೇಳೆ ಅಭಿಮಾನಿಗಳ ಜೈಕಾರ ಮತ್ತಷ್ಟು ಜೋರಾಯಿತು.

    English summary
    Actor Darshan visited Davangere and participated in SS Mallikarjun's birthday. He talks about his friend SS Mallikarjun and Davangere Benne Dosa.
    Thursday, September 29, 2022, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X