For Quick Alerts
  ALLOW NOTIFICATIONS  
  For Daily Alerts

  ಹಿರೇಕೆರೂರು: ರೈತರ ಬಗ್ಗೆ ನಟ ದರ್ಶನ್ ಮಾತು

  |

  ಚಿತ್ರದುರ್ಗದ ಹಿರೆಕೆರೂರಿನಲ್ಲಿ ನಡೆದ ಕೃಷಿ ಇಲಾಖೆಯ 'ರೈತರೊಂದಿಗೊಂದು ದಿನ' ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಕೃಷಿ ಇಲಾಖೆಯ ರಾಯಭಾರಿ ಆಗಿರುವ ದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರನ್ನುದ್ದೇಶಿಸಿ ಮಾತನಾಡಿದರು.

  ರೈತರು ಮತ್ತು ಸೈನಿಕರು ದೇಶದ ಬೆನ್ನೆಲುಬು. ಭೂಮಿತಾಯಿಯನ್ನು ನಂಬಿ ಕಷ್ಟಪಟ್ಟು ದುಡಿಯುತ್ತಾನೆ. ರೈತ, ತಂತ್ರಜ್ಞಾನ, ಇಲಾಖೆಯ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಫಸಲು ಬೆಳೆದಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಬಹುದು ಎಂದರು.

  ಕೃಷಿ ಇಲಾಖೆಯು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು, ಸೌಲಭ್ಯಗಳನ್ನು ಹೊರತಂದಿದೆ. ರೈತರು ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಂಡು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.

  ಕೃಷಿ ಸಚಿವ ಬಿ.ಸಿ.ಪಾಟೀಲ್ ಕುರಿತು ಮಾತನಾಡಿದ ದರ್ಶನ್, ಪೊಲೀಸ್ ಆಗಿ, ನಟನಾಗಿ ನಂತರ ನಿರ್ಮಾಪಕನಾಗಿ ಈಗ ಸಚಿವನಾಗುವುದು ಬಹಳ ಸುಲಭದ ಕೆಲಸವಲ್ಲ. ಏನೇ ಕೆಲಸವಾಗಲೀ ಅದನ್ನು ಗುರಿಯಿಟ್ಟು ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ಇದಕ್ಕೆ ಬಿ.ಸಿ.ಪಾಟೀಲರೇ ಸಾಕ್ಷಿ. ಬಿ.ಸಿ.ಪಾಟೀಲರನ್ನು ನಾನು ಪ್ರೀತಿಯಿಂದ ಕಾಕ ಎಂದು ಕರೆಯುತ್ತೇನೆ. ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ನೀವು ತೋರಿಸುತ್ತಿರುವ ಪ್ರೀತಿ ಆದರ, ಗೌರವಗಳನ್ನು ಹೀಗೆ ಮುಂದುವರೆಸಿ ಎಂದು ದರ್ಶನ್ ಮನವಿ ಮಾಡಿಕೊಂಡರು.

  ಬಿ.ಸಿ.ಪಾಟೀಲ್ ನಿರ್ಮಿಮಿಸುತ್ತಿರುವ ಹೊಸ ಸಿನಿಮಾ 'ಗರಡಿ' ಕುರಿತು ಮಾತನಾಡಿ, ''ಕಲಾವಿದರ ಜೀವನ ಇರುವುದು ಅಭಿಮಾನಿಗಳಿಂದ. ಕಲಾವಿದರು ಪ್ರೀತಿ ಪ್ರೋತ್ಸಾಹದಿಂದ ಬೆಳೆಯುತ್ತಾರೆ. ನಿರ್ದೇಶಕ ಯೋಗರಾಜ್ ಭಟ್ 'ಗರಡಿ' ಚಿತ್ರ ನಿರ್ದೇಶಿಸುತ್ತಿದ್ದಾರೆ. ಯಶಸ್ ಸೂರ್ಯ ನಮ್ಮ ಹಿರೋ. ಯಶಸ್ ಸೂರ್ಯ ಸೇರಿದಂತೆ ಎಲ್ಲಾ ಕಲಾವಿದರ ಮೇಲೆ ಅಭಿಮಾನ ಪ್ರೀತಿಯಿರಲಿ'' ಎಂದು ದರ್ಶನ್ ಮನವಿ ಮಾಡಿದರು.

  English summary
  Actor Darshan talks about farmers in Hirekeruru. He said Farmers should be in touch with agriculture department and they should use the schemes of department to grow more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X