ನಂಗೂ ನಿಮ್ಮ ಬ್ಯಾನರ್‌ನಲ್ಲಿ ಚಾನ್ಸ್ ಕೊಡಿ, ಸಿನಿಮಾ ಮಾಡುತ್ತೇನೆ ಎಂದು ಧನಂಜಯ್‌ಗೆ ಕೇಳಿದ ನಟ ದರ್ಶನ್!

ನಟ ರಾಕ್ಷಸ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಟಗರು ಪಲ್ಯ ತಯಾರಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ದರ್ಶನ್ ತೂಗುದೀಪ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ನಟ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ಈ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೂ ಸಜ್ಜಾಗಿದೆ. ಬಿಡುಗಡೆಯ ಹೊಸ್ತಿಲಲ್ಲೇ ಟ್ರೈಲರ್ ಲಾಂಚ್ ಮಾಡಲಾಗಿದೆ. ಚಿತ್ರದ ಕಲಾವಿದರು, ತಂತ್ರಜ್ಞರು ಸೇರಿದಂತೆ ಹಲವು ಹಿರಿಯ ನಟ ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸತೀಶ್ ನಿನಾಸಂ, ದರ್ಶನ್ ತೂಗುದೀಪ ಮತ್ತು ನೆನಪಿರಲಿ ಪ್ರೇಮ್ ಮುಖ್ಯ ಆಕರ್ಷಣೆಯಾಗಿದ್ದರು.

Actor Darshan Thoogudeepa at Tagaru Palya Movie Trailer Launch

ಅಮೃತಾಗೆ ಇಂಡಸ್ಟ್ರೀಗೆ ಸ್ವಾಗತ ಕೋರಿದ ಚಾಲೆಂಜಿಂಗ್ ಸ್ಟಾರ್

ಕಾರ್ಯಕ್ರಮದಲ್ಲಿ ಮಾತನಾಡಿರುವ ನಟ ದರ್ಶನ್ ತೂಗುದೀಪ, ಟಗರು ಪಲ್ಯದ ಎಲ್ಲಾ ಕಲಾವಿದರನ್ನು ಹೊಗಳಿದ್ದಾರೆ. ಟ್ರೈಲರ್ ಮೊದಲೆ ನೋಡಿದ್ದೆ. ಈಗ ಮತ್ತೆ ನೋಡಿದೆ. ಇದು ನಮ್ಮ ನೆಲದ ಸೊಗಡು ಎಂದು ಹೊಗಳಿದ್ದಾರೆ. ಜೊತೆಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟಿ ಅಮೃತಾ ಪ್ರೇಮ್‌ಗೆ ಸ್ವಾಗತ ಕೋರಿದ್ದಾರೆ.

"ಟ್ರೈಲರ್ ನೋಡಿದ ತಕ್ಷಣ ಖುಷಿಯಾಗಿತ್ತು. ಮೊನ್ನೆ ಮತ್ತೆ ನೋಡಿದಾಗ ಇವರಿಗೆ ಹೇಳಿದೆ ಟಗರು ಪಲ್ಯ ಅಂತ ಯಾಕೆ ಸಿನಿಮಾಗೆ ಹೆಸರು ಇಟ್ಟಿದ್ದು? ಟಗರು ಖಲಿಜಾ.... ಬೋಟಿ ಅಂತ ಏನಾದ್ರು ಇದಬೇಕಿತಲ್ವಾ ಎಂದು. ಆಮೇಲೆ ಸಿನಿಮಾ ಕಥೆಗೆ ತಕ್ಕಂತೆ ಇದೆ ಎಂದು ಸುಮ್ಮನಾದೆ" ಎಂದು ಕಾಲೆಳೆದಿದ್ದಾರೆ. ಬಳಿಕ ಅಮೃತಾ ಪ್ರೇಮ್ ಬಗ್ಗೆ ಮಾತನಾಡಿರುವ ಅವರು, ಅಮೃತಾ ತುಂಬಾ ಚೆನ್ನಾಗಿ ನಟಿಸಿದ್ದಿಯ. ನಮ್ಮದು ಚಿಕ್ಕ, ಚೊಕ್ಕ, ನೀಟ್ ಆದ ಇಂಟಸ್ಟ್ರೀ. ಇಲ್ಲಿಗೆ ನಿನಗೆ ಆತ್ಮೀಯ ಸ್ವಾಗತ ಎಂದು ಮನದುಂಬಿ ಸ್ವಾಗತಿಸಿದ್ದಾರೆ.

ಇದು ನಮ್ಮ ಸೋಗಡಿನ ಸಿನಿಮಾ

ಮುಂದುವರಿದು ಮಾತನಾಡಿರುವ ಅವರು, "ಇನ್ನು ಈ ಬಗ್ಗೆ ಜನರಿಗೆ ಹೇಳಬೇಕು, ನಮ್ಮ ಸೋಗಡಿನ ಸಿನಿಮಾ ಇಲ್ಲ ಅಂತಿರಾ.. ಆದರೆ ಅಂತ ಸಿನಿಮಾ ಮಾಡಿದರೇ ನೊಡಲ್ಲ. ಇದು ಎಲ್ಲಾ ಸೋಗಡು ತುಂಬಿರುವ ಸಿನಿಮಾ. ಅದು ಟ್ರೈಲರ್‌ನಲ್ಲೆ ಕಾಣುತ್ತಿದೆ" ಎಂದು ದರ್ಶನ್ ಹೇಳಿದ್ದಾರೆ.

Actor Darshan Thoogudeepa at Tagaru Palya Movie Trailer Launch

"ಜನ ಕೇಳ್ತಾರೆ ಹೀರೋಗಳು ಏನ್ ಮಾಡ್ತಿದ್ದಾರೆ ಎಂತ. ಅವರಿಗೆ ಇಂದು ನಾನು ಎದೆ ಮುಟ್ಟಿಕೊಂಡು ಹೇಳ್ತಿನಿ. ಕೆಲವು ಹೀರೋಗಳು ಪ್ರೋಡ್ಯೂಸ್ ಮಾಡ್ತಿದ್ದಾರೆ. ಧನಂಜಯ್‌ಗೆ ನಾನು ಹೇಳೋದು ಏನೆಂದರೆ ಡಾಲಿ ಫಿಕ್ಚರ್ ದೊಡ್ಡ ಪ್ರೋಡಕ್ಸನ್ ಕಂಪನಿಯಾಗಲಿ. ಇದು ಅವರ ಮೂರನೇ ಸಿನಿಮಾ. ಇದರಲ್ಲಿ ಎರಡು ವಿಧಗಳಿವೆ. ಹಠದಿಂದ ಬೆಳೆಯೋದು ಬೇರೆ, ಛಲದಿಂದ ಬೆಳೆಯೊದು ಬೇರೆ. ಹಠದಿಂದ ಬೆಳೆಯುವುದಕ್ಕಿಂತ ಛಲದಿಂದ ಬೆಳೆಯಲಿ. ಅಂತಹ ಛಲ ಇರುವುದಕ್ಕೆ ಇವರು ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ" ಎಂದು ಹೊಗಳಿದ್ದಾರೆ.

ನಿಮ್ಮ ಬ್ಯಾನರ್‌ನಲ್ಲಿ ನಂಗೂ ಒಂದು ಚಾನ್ಸ್ ಕೊಡಿ!

ಇನ್ನು, ಸಿನಿಮಾ ತಂಡದಲ್ಲಿ ಹೆಚ್ಚಿನ ಎಂಜಿನಿಯರ್‌ಗಳು ಇರುವುದನ್ನು ಗಮನಿಸಿದ ಅವರು, ಈ ಬಗ್ಗೆ ತಮಾಷೆ ಮಾಡಿದ್ದಾರೆ. "ಆಕ್ಟಿಂಗ್ ಕಲಿಯಲು ಎಲ್ಲೇಲ್ಲೋ ಹೋಗಬೇಕಿಲ್ಲ. ಎಂಜಿನಿಯರಿಂಗ್ ಮಾಡಿ ಇಲ್ಲಿಗೆ ಬಂದುಬಿಡಿ" ಎಂದು ಧನಂಜಯ್, ನಾಗಭೂಷಣ, ಅಮೃತಾ ಪ್ರೇಮ್ ಅವರ ಕಾಲು ಎಳೆದಿದ್ದಾರೆ.

ಡಾಲಿ ಪಿಕ್ಚರ್ಸ್ ಬಗ್ಗೆ ಮಾತನಾಡಿ, " ನಾವು ಇನ್ನು ಚಿಕ್ಕ ನಟ, ನಿಮ್ಮ ಬ್ಯಾನರ್‌ನಲ್ಲಿ ನನಗೂ ಅವಕಾಶ ಕೊಡಿ. ದಯವಿಟ್ಟು ನಿಮ್ಮ ಬ್ಯಾನರ್‌ನಲ್ಲಿ ಒಂದು ಚಾನ್ಸ್ ಕೊಡಿ ಖಂಡಿತ ಬಂದು ಸಿನಿಮಾ ಮಾಡ್ಯಿನಿ. ನಮಗೆ ಅದು ಇದು ಅಂತಿಲ್ಲ. ಕೆಲಸ ಮಾಡುತ್ತೇನೆ, ನಾನು ಇನ್ನೂ ಬೆಳೆಯುತ್ತಿರುವ ನಟ" ಎಂದಿದ್ದಾರೆ. ಇದಕ್ಕೆ ಜನ ಜೋರು ಚಪ್ಪಾಳೆ ಹೊಡೆದು ಸ್ವಾಗತಿಸಿದರೇ, ಡಾಲಿ ಧನಂಜಯ್ ನಾಚಿಕೆಯಿಂದ ಮುದುಡಿದ್ದರು.

ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ 'ಟಗರು ಪಲ್ಯ' ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಅಕ್ಟೋಬರ್ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Tagaru Palya Movie Trailer Launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X