ಕಾಟೇರ ಯಶಸ್ಸು: 'ಡಾ. ರಾಜ್‌ಕುಮಾರ್ ಅವರ ಕಾಲು ಧೂಳಿಗೂ ನಾವು ಸಮರಲ್ಲ' ಎಂದ ನಟ ದರ್ಶನ್

ಕಾಟೇರ ಸಿನಿಮಾ ಕರುನಾಡಿನಲ್ಲಿ ಅಬ್ಬರ ಸೃಷ್ಟಿಸಿದೆ. ಬೇರೆ ಭಾಷೆಗಳಿಂದ ಚಿತ್ರಕ್ಕೆ ಬೇಡಿಕೆ ಬಂದಿದ್ದು, ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ 'ಕಾಟೇರ'ನ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ತರುಣ್ ಕಿಶೋರ್ ಸುಧೀರ್ ಮತ್ತು ದರ್ಶನ್ ತೂಗುದೀಪ ಕಾಂಬಿನೇಷನ್‌ನ ಎರಡನೇ ಸಿನಿಮಾಕ್ಕೆ ದೇಶದೆಲ್ಲೇಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಸಿನಿಮಾ ಕಮಾಲ್ ಮಾಡುತ್ತಿದೆ.

ಚಿತ್ರಕ್ಕೆ ಜನರಿಂದ ಬರುತ್ತಿರುವ ಪ್ರಶಂಸೆಗಳ ಬೆನ್ನಲ್ಲೇ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಚಿತ್ರದಲ್ಲಿನ ದರ್ಶನ್ ನಟನೆಗೆ ಪ್ರೇಕ್ಷಕ ಪ್ರಭು ಉಘೇ ಎಂದಿದ್ದಾನೆ. ಜೊತೆಗೆ ಸಿನಿಮಾದಲ್ಲಿನ ಪೌರಾಣಿಕ ಪಾತ್ರವೊಂದರ ಡೈಲಾಗ್‌ಗೆ ಭಾರಿ ಮೆಚ್ಚುಗೆ ಬಂದಿತ್ತು. ಇದನ್ನೇ ಸುದ್ದಿಗೋಷ್ಠಿಯಲ್ಲಿ ಹಲವು ಮಂದಿ ಕೇಳಿದ್ದಾರೆ.

Actor Darshan Thoogudeepa talks about dr Rajkumar in Kaatera Press Meet

'ಡಾ. ರಾಜ್‌ಕುಮಾರ್ ಕಾಲು ಧೂಳಿಗೂ ನಾವು ಸಮ ಅಲ್ಲ': ದರ್ಶನ್

'ಕಾಟೇರ' ಸಿನಿಮಾದಲ್ಲಿ ದರ್ಶನ್ ತೂಗುದೀಪ ಅವರು ಒಬ್ಬ ಮಾಸ್ ಹೀರೋ ಅಲ್ಲದೇ ಪಕ್ಕ ಹಳ್ಳಿಯ ಹೈದನಾಗಿ ಅಬ್ಬರಿಸಿದ್ದಾರೆ. ದರ್ಶನ್ ಸಿನಿಮಾ ಎನ್ನುವುದರ ಬದಲು ಇದನ್ನು ಕಾಟೇರನ ಸಿನಿಮಾ ಎನ್ನಬಹುದು. ಸಿನಿಮಾದಲ್ಲಿ ದರ್ಶನ್ ಎರಡು ಶೇಡ್ ಇರುವ ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಸಿನಿಮಾದಲ್ಲಿ ಹಳ್ಳಿಗಳಲ್ಲಿ ನಡೆಯುವಂತೆ ನಾಟಕದ ತಯಾರಿ ನಡೆಯುತ್ತದೆ. ಅದು ಹಿರಣ್ಯ ಕಶಿಪು ನಾಟಕದ ಒಂದಯ ದೃಶ್ಯ. ಇನ್ನು ಹಿರಣ್ಯ ಕಶಿಪು ಪಾತ್ರಕ್ಕಾಗಿ ನಟ ಕುಮಾರ್ ಗೋವಿಂದ್ ಮತ್ತು ವೈಜನಾಥ್ ಬಿರಾದಾರ್ ನಡುವೆ ಪೈಪೋಟಿಯು ಇರುತ್ತದೆ. ಮಾತು ಬರದ ವೈಜನಾಥ್ ಬಿರಾದಾರ್ ವೇದಿಕೆ ಮೇಲೆ ಹಿರಣ್ಯ ಕಶಿಪು ಆಗಿ ನಟಿಸುತ್ತಾರೆ. ಆದರೆ, ಅದಕ್ಕೆ ದನಿಯಾಗುವುದು ನಟ ದರ್ಶನ್.

ನಟ ದರ್ಶನ್ ಈ ದೃಶ್ಯದಲ್ಲಿ ತುಂಬಾ ಚೆನ್ನಾಗಿ ಹಿರಣ್ಯ ಕಶಿಪು ಡೈಲಾಗ್ ಹೇಳುತ್ತಾರೆ. ಇದಕ್ಕೂ ಹೆಚ್ಚು ಮೆಚ್ಚುಗೆ ಬಂದಿದೆ. ಪೌರಾಣಿಕ ಪಾತ್ರಗಳಲ್ಲಿ ಮಾಡುವಲ್ಲಿ ರಾಜ್‌ಕುಮಾರ್ ಅವರಂತೆಯೇ ನಟ ದರ್ಶನ್ ಎಂದು ಅಭಿಮಾನಿಗಳು ಹೋಲಿಸಿದ್ದರು. ಇದನ್ನೇ ಪ್ರೆಸ್‌ಮೀಟ್‌ನಲ್ಲಿಯೂ ಕೇಳಿದ್ದಾರೆ. ಇದಕ್ಕೆ ನಟ ದರ್ಶನ್ ಅವರ ರಿಪೈ ತುಂಬಾ ಕುತೂಹಲಕರವಾಗಿದೆ.

Actor Darshan Thoogudeepa talks about dr Rajkumar in Kaatera Press Meet

ಪತ್ರಕರ್ತರ ಪ್ರಶ್ನೆಯನ್ನು ಅರ್ಧಕ್ಕೆ ತಡೆದ ನಟ ದರ್ಶನ್, "ಡಾ. ರಾಜ್‌ಕುಮಾರ್ ಹೆಸರು ಹೇಳಲು ಅಲ್ಲ... ಅವರ ಕಾಲು ಧೂಳಿಗೂ ನಾವು ಸಮರಲ್ಲ .. ನೀವು ದಯವಿಟ್ಟು ಈ ವಿಷಯವನ್ನು ಅಲ್ಲಿಯವರೆಗೂ ತೆಗೆದುಕೊಂಡು ಹೋಗಲೇಬೇಡಿ. ನಾವು ಪ್ರಯತ್ನ ಪಡಬಹುದು ಅಷ್ಟೇ. ಅವರು ಮಾಡಿದ್ದರಲ್ಲಿ 5 ಪರ್ಸೆಂಟ್ ಅಲ್ಲ 000.1% ಕೂಡ ನಾವಿಲ್ಲ" ಎಂದು ಹೇಳಿದ್ದಾರೆ.

ನೂರು ಕೋಟಿಯತ್ತ ಕಾಟೇರ...?

ಇನ್ನು, ಕಾಟೇರ ಸಿನಿಮಾ ಬಾಕ್ಸ್ ಅಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಚಿತ್ರ ಬಿಡುಗಡೆಯಾದ ನಾಲ್ಕು ದಿನಕ್ಕೇ ನೂರು ಕೋಟಿಯತ್ತ ಸಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಮೂರು ದಿನಕ್ಕೆ 58.8 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ಶನಿವಾರ ಮತ್ತು ಭಾನುವಾರ ಎಲ್ಲಾ ಥಿಯೇಟರ್‌ಗಳು ಹೌಸ್‌ಫುಲ್ ಆಗಿದ್ದವು. ಸಿನಿಮಾ ಬಿಡುಗಡೆಯಾದ ಮೊದಲ ದಿನ 19.79 ಕೋಟಿ, ಎರಡನೇ ದಿನ 17.35 ಕೋಟಿ, ಮೂರನೇ ದಿನ ಕಾಟೇರ 20.94 ಕೋಟಿ ರೂಪಾಯಿ ಗಳಿಸಿದೆ. ನಾಲ್ಕನೇ ದಿನ 18.20 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಸಿನಿಮಾದ ಒಟ್ಟು ಗಳಿಕೆ 77.6 ಕೋಟಿ ರೂಪಾಯಿ ಆಗಿದೆ.

More from Filmibeat

English summary
Actor Darshan talks about dr Rajkumar in Kaatera Pressmeet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X