ಚಾಲೆಂಜಿಂಗ್ ಸ್ಟಾರ್ ಕಾಲ್ ಶೀಟ್ ಕೊಂಡುಕೊಂಡ ನಿರ್ಮಾಪಕರಿವರು
Recommended Video

ಸ್ಟಾರ್ ಗಳ ಹುಟ್ಟುಹಬ್ಬ ಅಂದರೆ ತುಂಬಾನೇ ಸ್ಪೆಷಲ್ ಆಗಿರುತ್ತೆ. ಅಭಿಮಾನಿಗಳು ವರ್ಷವಿಡಿ ಈ ಒಂದು ದಿನಕ್ಕಾಗಿ ಕಾದಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ತಮ್ಮ 42ನೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಕಲಾವಿದರ ಹುಟ್ಟುಹಬ್ಬ ಅಂದಾಗ ಅಭಿಮಾನಿಗಳು ಒಂದು ಕಡೆ ಸಂಭ್ರಮಾಚರಣೆ ಮಾಡಿದರೆ ಮತ್ತೊಂದು ಕಡೆ ಸಿನಿಮಾರಂಗದ ವತಿಯಿಂದಲೂ ಸೆಲಬ್ರೆಷನ್ ಇದ್ದೇ ಇರುತ್ತದೆ. ಅಂತೆಯೇ ಡಿ ಬಾಸ್ ಬರ್ತಡೇಗೆ ಸಾಕಷ್ಟು ಸಿನಿಮಾಗಳನ್ನ ಅನೌನ್ಸ್ ಮಾಡಲಾಗಿದೆ.
ಕುರುಕ್ಷೇತ್ರ ಚಿತ್ರದ ನಂತರ ದರ್ಶನ್ ಯಾವ ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಮುಂದಿನ ಸಿನಿಮಾಗಳನ್ನ ಯಾರು ನಿರ್ದೇಶನ ಮಾಡುತ್ತಾರೆ ? ಈ ಎಲ್ಲಾ ಮಾಹಿತಿಗಳು ಇಲ್ಲಿವೆ. ಮುಂದೆ ಓದಿ

ಶೀಘ್ರದಲ್ಲೇ ತೆರೆ ಮೇಲೆ ಕುರುಕ್ಷೇತ್ರ
ದರ್ಶನ್ ಅಭಿನಯದ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿರುವುದರಿಂದ ಬಿಡುಗಡೆ ದಿನಾಂಕ ಸ್ವಲ್ಪ ತಡವಾಗುವ ಸಾಧ್ಯತೆಗಳಿದೆ. ದರ್ಶನ್ ವೃತಿ ಬದುಕಿನಲ್ಲಿ ಕುರುಕ್ಷೇತ್ರ ಚಿತ್ರ ಮೈಲಿಗಲ್ಲಾಗಿ ನಿಲ್ಲಲಿದೆ.

ವಿನಯದ ಪರ್ವ ಯಜಮಾನ
ಕುರುಕ್ಷೇತ್ರ ಸಿನಿಮಾದ ನಂತರ ದರ್ಶನ್ ಈಗಾಗಲೇ ಮಹೂರ್ತ ಆಗಿರುವ ಶೈಲಾಜ ನಾಗ್ ನಿರ್ಮಾಣದ ಯಜಮಾನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನ ಪಿ ಕುಮಾರ್ ನಿರ್ದೇಶನ ಮಾಡುತ್ತಿದ್ದು ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಒಡೆಯರ್ ಸಿನಿಮಾದಲ್ಲಿ ಅಭಿನಯ
ಮಿಸ್ಟರ್ ಐರಾವತ ಸಿನಿಮಾ ನಿರ್ಮಾಣ ಮಾಡಿದ್ದ ಸಂದೇಶ್ ನಾಗರಾಜ್ ಅವರೊಂದಿಗೆ ದರ್ಶನ್ ಮತ್ತೊಂದು ಚಿತ್ರದಲ್ಲಿ ಕೆಲಸ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರಕ್ಕೆ ಒಡೆಯರ್ ಎಂದು ಶೀರ್ಷಿಕೆ ಫಿಕ್ಸ್ ಆಗಿದ್ದು ಎಂ ಡಿ ಶ್ರೀಧರ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.52ನೇ ಚಿತ್ರ ಒಡೆಯರ್ ಆಗುವ ಸಾಧ್ಯತೆಗಳಿವೆ.

ಡಿ ಕಂಪನಿ ಹೆಸರಿನಲ್ಲಿ ಸಿನಿಮಾ
ಮೆಜೆಸ್ಟಿಕ್ ಮತ್ತು ದಾಸ ಚಿತ್ರವನ್ನ ನಿರ್ಮಾಣ ಮಾಡಿದ್ದ ರಾಮಮೂರ್ತಿ ಅವರಿಗೆ 53ನೇ ಚಿತ್ರದ ಕಾಲ್ ಶೀಟ್ ಅನ್ನು ನೀಡಿದ್ದಾರೆ ದರ್ಶನ್. ಚಿತ್ರಕ್ಕೆ ತಾತ್ಕಾಲಿಕವಾಗಿ 'ಡಿ ಕಂಪನಿ' ಎಂದು ಶೀರ್ಷಿಕೆಯನ್ನ ಇಟ್ಟುಕೊಳ್ಳಲಾಗಿದೆ.

ಎಂ ಡಿ ಶ್ರೀಧರ್ ಜೊತೆ ಮತ್ತೆ ಸಿನಿಮಾ
ಬುಲ್ ಬುಲ್ ಸಿನಿಮಾ ಮಾಡಿ ಹಿಟ್ ಆಗಿದ್ದ ನಿರ್ದೇಶಕ ಎಂ ಡಿ ಶ್ರೀಧರ್ ಜೊತೆಯಲ್ಲಿ ಎರಡು ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ದರ್ಶನ್. ಒಡೆಯರ್ ಹಾಗೂ ಪ್ರೊಡಕ್ಷನ್ ನಂ 2 ಎಂದು ಘೋಷಣೆ ಆಗಿರುವ ಚಿತ್ರವನ್ನ ಶ್ರೀಧರ್ ಅವರೇ ಡೈರೆಕ್ಟ್ ಮಾಡಲಿದ್ದಾರೆ. ಎಸ್ ಎಂ ಜಿ ಮೂವೀಸ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ.

ಅಣ್ಣನಿಗೆ ತಮ್ಮ ಡೈರೆಕ್ಷನ್
ಬಹಳ ಹಿಂದೆಯೇ ಅನೌನ್ಸ್ ಮಾಡಿರುವಂತೆ ದರ್ಶನ್ ಅವರ ಸಹೋದರ ದಿನಕರ್ ದರ್ಶನ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಚಿತ್ರಕ್ಕೆ 'ಸರ್ವಾಂತರ್ಯಾಮಿ' ಎಂದು ಟೈಟಲ್ ಕೂಡ ಫಿಕ್ಸ್ ಮಾಡಿ ಆಗಿದೆ. ಆದರೆ ಚಿತ್ರ ಯಾವಾಗ ಸೆಟ್ಟೇರುತ್ತದೆ ಎನ್ನುವುದು ಮಾತ್ರ ಇನ್ನು ಗುಟ್ಟಾಗಿಯೇ ಉಳಿದಿದೆ.

ತರುಣ್ ಸುಧೀರ್ ಜೊತೆ ಚಿತ್ರ
ತರುಣ್ ಸುಧೀರ್ ನಿರ್ದೇಶನದ ಚೌಕ ಚಿತ್ರದಲ್ಲಿ ವಿಶೇಷ ಪಾತ್ರವನ್ನ ನಿರ್ವಹಿಸಿದ್ದ ದರ್ಶನ್, ತರುಣ್ ಡೈರೆಕ್ಷನ್ ನಲ್ಲಿ ಅಭಿನಯಿಸುವುದಾಗಿ ತಿಳಿಸಿದ್ದಾರೆ. ಡಿ ಬಾಸ್ ಗಾಗಿ ತರುಣ್ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ.


Click it and Unblock the Notifications











