ಇಲ್ಲ್ ಕೇಳಿ, 'ಇದು' ದರ್ಶನ್ ಅವರ ಆಜ್ಞೆ ಯಾರೂ ಮೀರಬೇಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸಿನಿಮಾಗಳ ವಿಚಾರಕ್ಕೆ ಬಂದಾಗ ತಮ್ಮದೇ ಆದ ಎಲ್ಲಾ ರೂಲ್ಸ್ ಗಳನ್ನು ಫಾಲೋ ಮಾಡ್ತಾರೆ. ಮಾತ್ರವಲ್ಲದೇ ಎಲ್ಲಾ ವಿಚಾರಗಳಲ್ಲೂ ಅವರು ತುಂಬಾ ಸ್ಟ್ರಿಕ್ಟ್ ಜೊತೆಗೆ ಅವರಿಗೆ ಎಲ್ಲವೂ ಸರಿಯಾಗಿ ಇರಬೇಕು. ಇದಕ್ಕೆಲ್ಲಾ ಉತ್ತಮ ನಿದರ್ಶನ 'ಜಗ್ಗುದಾದಾ' [ನಿರ್ಮಾಪಕರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ 'ಜಗ್ಗುದಾದಾ' ದರ್ಶನ್.!] ಚಿತ್ರದ ಸಕ್ಸಸ್ ಮೀಟ್ ನಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳಬಹುದು.
ಇದೀಗ ನಟ ದರ್ಶನ್ ವಿಚಾರ ಪೀಠಿಕೆ ಹಾಕಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ಅವರ ಶೂಟಿಂಗ್ ಹಂತದಲ್ಲಿರುವ 'ಚಕ್ರವರ್ತಿ' ಚಿತ್ರ. ಹೌದು 'ಜಗ್ಗುದಾದಾ' ಚಿತ್ರ 25 ದಿನ ಪೂರೈಸುವವರೆಗೆ ಅವರ ಚಕ್ರವರ್ತಿ ಚಿತ್ರದ ಯಾವುದೇ ಮೇಕಿಂಗ್ ವಿಡಿಯೋ, ಶೂಟಿಂಗ್ ಸ್ಟಿಲ್ಸ್ ಗಳನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಬೇಡಿ ಎಂದು ತಮ್ಮ ಅಭಿಮಾನಿ ಬಳಗದವರಿಗೆ ಖುದ್ದು ತಾವೇ ತಿಳಿಸಿದ್ದಾರೆ.['ಚಕ್ರವರ್ತಿ' ಜೀವನದಲ್ಲಿ ಶಾಂತಿಯ 'ದರ್ಶನ']

ಸದ್ಯಕ್ಕೆ ಒಂದು ಸಿನಿಮಾ ಬಿಡುಗಡೆ ಆಗೋವರೆಗೂ ಮತ್ತೊಂದು ಸಿನಿಮಾದಲ್ಲಿ ತೊಡಗಿಸಿಕೊಳ್ಳಬಾರದು. ಒಪ್ಪಿಕೊಂಡ ಚಿತ್ರವನ್ನು ಹೆಚ್ಚು ದಿನ ಜಗ್ಗಾಡದೇ, ಫಟಾಫಟ್ ಅಂತ ಕೆಲಸ ಮುಗಿಸಿಕೊಡಬೇಕು ಅಂತೆಲ್ಲಾ ಇತ್ತೀಚೆಗೆ ದರ್ಶನ್ ಅವರು ಹೊಸ-ಹೊಸ ತೀರ್ಮಾನ ತೆಗೆದುಕೊಂಡಿದ್ದಾರೆ.['ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!]

ಮಾತ್ರವಲ್ಲದೇ ಚಿತ್ರಮಂದಿರದಲ್ಲಿ ತಮ್ಮ ಚಿತ್ರವೊಂದು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹೊತ್ತಲ್ಲಿ, ಮತ್ತೊಂದು ಚಿತ್ರದ ಫೋಟೋ, ವಿಡಿಯೋ ಹರಿಯಬಿಟ್ಟರೆ ಓಡುತ್ತಿರುವ ಚಿತ್ರಕ್ಕೆ ಪೆಟ್ಟು ಬೀಳಬಾರದು ಎಂಬ ಕಾರಣಕ್ಕೆ ಹೊಸ ಚಿತ್ರದ ಸ್ಟಿಲ್ಸ್, ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಬಾರದು ಎಂದು ಸ್ಟ್ರಿಕ್ಟ್ ಆಗಿ ಆಜ್ಞೆ ಮಾಡಿದ್ದಾರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.[ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]

ಸದ್ಯಕ್ಕೆ 'ಚಕ್ರವರ್ತಿ' ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ನಟ ಸೃಜನ್ ಲೋಕೇಶ್ ಮತ್ತು ನಟಿ ದೀಪಾ ಸನ್ನಿಧಿ ಅವರ ಭಾಗದ ಚಿತ್ರೀಕರಣ ಮುಗಿದಿದೆ. ಎರಡನೇ ಭಾಗದ ಶೂಟಿಂಗ್ ಜುಲೈನಲ್ಲಿ ಜರುಗಲಿದೆ. ಚಿತ್ರಕ್ಕೆ ಚಿಂತನ್ ಅವರು ಆಕ್ಷನ್-ಕಟ್ ಹೇಳಿದ್ದಾರೆ.


Click it and Unblock the Notifications











