ಪತ್ನಿ ಜೊತೆ ತಮಿಳುನಾಡಿನ ತಿರುನಲ್ಲರ್ ಗೆ ಭೇಟಿ ನೀಡಿದ ನಟ ದರ್ಶನ್
Recommended Video
ಚಾಲೆಂಜಿಂಗ್ ಸ್ಟಾರ್ ಸದ್ಯ ರಾಬರ್ಟ್ ಚಿತ್ರೀಕರಣ ಮುಗಿಸಿ ಕೊಂಚ ಬ್ರೇಕ್ ಪಡೆದಿದ್ದಾರೆ. ಇತ್ತೀಚಿಗಷ್ಟೆ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡಲು ಕ್ಯಾಮರಾ ಹೆಗಲಿಗೇರಿಸಿಕೊಂಡು ಉತ್ತರಾಖಂಡ ಕಡೆ ಪಯಣ ಬೆಳೆಸಿದ್ದ ಡಿ ಬಾಸ್ ಮೊನ್ನೆ ಮೊನ್ನೆಯಷ್ಟೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಈಗ ಮತ್ತೆ ಪತ್ನಿ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ.
ಹೌದು, ದರ್ಶನ್ ಈಗ ಪತ್ನಿ ಜೊತೆ ತಿರುನಲ್ಲರ್ ನಲ್ಲಿದ್ದಾರೆ. ತಮಿಳುನಾಡಿನ ತಿರುನಲ್ಲರ್ ನ ಪ್ರಸಿದ್ಧ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿರುವ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂದ್ಹಾಗೆ ದರ್ಶನ್ ತಿರುನಲ್ಲರ್ ಗೆ ಭೇಟಿ ನೀಡುತ್ತಿರುವುದು ಇದೆ ಮೊದಲೇನಲ್ಲ. ಪ್ರತಿವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ಹಿಂದೆ ಭೇಟಿ ನೀಡಿದ್ದಾಗ ದರ್ಶನ್ ತುಲಾಭಾರ ಮಾಡಿಸಿದ್ದರು. ಆದರೆ ಈ ಬಾರಿ ವಿಶೇಷ ಪೂಜೆ ಮಾಡಿಸಿದ್ದಾರೆ. ನೀಲಿ ಬಣ್ಣದ ಕಾಸ್ಟ್ಯೂಮ್ ನಲ್ಲಿ ದೇವರ ದರ್ಶನಕ್ಕೆ ತೆರಳಿರುವ ದರ್ಶನ್ ಸ್ನೇಹಿತರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂದ್ಹಾಗೆ ದರ್ಶನ್ ಈಗ ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೆ ಚಿತ್ರಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಫೆಬ್ರವರಿ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ರಾಜವೀರ ಮದಕರಿ ನಾಯಕ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಸಿನಿಮಾ ಚಿತ್ರೀಕರಣ ಪ್ರಾರಂಭಿಸುವ ಮೊದಲು ದೇವಸ್ಥಾನಕ್ಕೆ ಭೇಟಿ ನೀಡಿ ಶನಿದೇವರ ಆಶೀರ್ವಾದ ಪಡೆದಿದ್ದಾರೆ.


Click it and Unblock the Notifications











