»   » ಮತ್ತೆ ಶಾಲೆಯ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮತ್ತೆ ಶಾಲೆಯ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada

ಸ್ಟೂಡೆಂಟ್ಸ್ ಲೈಫ್ ಈಸ್ ಗೋಲ್ಟನ್ ಲೈಫ್ ಎಂಬ ಮಾತಿದೆ. ಹೌದು ಶಾಲೆಯ ದಿನಗಳಲ್ಲಿ ಮಾಡಿದ ತುಂಟಾಟ, ತರಲೆ ಎಲ್ಲವೂ ಮತ್ತೆ ಸಿಗೋದಕ್ಕೆ ಸಾಧ್ಯವಿಲ್ಲ. ಬಾಲ್ಯದಲ್ಲಿ ಕಳೆದ ಕ್ಷಣಗಳನ್ನ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಾರೆ. ಇದು ಬಿಗ್ ಸ್ಟಾರ್ ಗಳಿಗೂ ಹೊರೆತಾಗಿಲ್ಲ.

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಾಲೆಯ ನೆನಪು ಮಾಡಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಶಾಲೆ, ಕಾಲೇಜುಗಳಿಗೆ ಹೋಗಿ ಅಭಿನಯಿಸುವುಕ್ಕೆ ಅವಕಾಶ ಸಿಕ್ಕರೂ, ತಾವು ವ್ಯಾಸಂಗ ಮಾಡಿದ ಸ್ಕೂಲ್ ಮೆಟ್ಟಿಲೇರಿದ್ದಾರೆ.

ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿ 'ಡಿ-ಬಾಸ್' ಅಂಡ್ ಟೀಮ್

ಈ ವಯಸ್ಸಿನಲ್ಲಿ ದರ್ಶನ್ ಅವರಿಗೆ ಶಾಲೆಗೆ ಹೋಗೋ ಆಸೆ ಯಾಕಾಯ್ತು? ಅದಲ್ಲದೆ ದರ್ಶನ್ ಹೋಗಿದ್ದು ಯಾವ ಸ್ಕೂಲ್ ಗೆ? ಶಾಲೆಗೆ ದರ್ಶನ್ ಒಬ್ಬರೇ ಹೋದ್ರಾ ಅಥವಾ ಬೇರೆ ಯಾರಾದರೂ ಜೊತೆಯಲ್ಲಿ ಹೋಗಿದ್ರಾ? ಇವೆಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲೇ ಇದೆ. ಮುಂದೆ ಓದಿ...

ಓದಿದ ಸ್ಕೂಲ್ ನಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಮೈಸೂರಿನಲ್ಲಿ ತಾವು ವ್ಯಾಸಂಗ ಮಾಡಿದ ಶಾಲೆಗೆ ಭೇಟಿ ನೀಡಿದ್ದಾರೆ. 'ಟೆರೆಷಿಯನ್ ಕಾನ್ವೆಂಟ್' ಗೆ ಹೋಗಿ ಅಲ್ಲಿಯ ಶಿಕ್ಷಕರನ್ನ ಭೇಟಿ ಮಾಡಿದ್ದಾರೆ.

ಲೈಫ್ ಜೊತೆ ಒಂದು ಸೆಲ್ಫಿ ತೆಗಿಸಿಕೊಂಡ ಡಿ ಬಾಸ್ ದರ್ಶನ್

ಸ್ನೇಹಿತರನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್

ದರ್ಶನ್ ಶಾಲೆಯಲ್ಲಿ ಓದುತ್ತಿದ್ದಾಗ ಇದ್ದ ಸ್ನೇಹಿತರೆಲ್ಲರೂ ಒಟ್ಟಿಗೆ ಮೈಸೂರಿನಲ್ಲಿ ಸೇರಿದ್ದಾರೆ. 35ಕ್ಕೂ ಹೆಚ್ಚು ಸ್ನೇಹಿತರು ಭೇಟಿ ಮಾಡಿ ಬಾಲ್ಯದಲ್ಲಿ ಕಳೆದ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

ಸ್ನೇಹಕ್ಕೆ ಬೆಲೆ ನೀಡಿದ ದಚ್ಚು

ಚಿತ್ರೀಕರಣದಲ್ಲಿ ಬ್ಯುಸಿ ಆಗಿರೋ ದರ್ಶನ್ ಸ್ನೇಹಿತರಿಗಾಗಿ ದಿನವನ್ನ ಮೀಸಲಿಟ್ಟಿದ್ದಾರೆ. ಶಾಲೆಯಲ್ಲಿ ಕೆಲ ಸಮಯ ಕಳೆದು ಒಟ್ಟಿಗೆ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್

ಚಿತ್ರೀಕರಣದಲ್ಲಿ ಬಿಡುವಿದ್ದಾಗ ದರ್ಶನ್ ಮೈಸೂರಿನಲ್ಲಿಯೇ ಇರುತ್ತಾರೆ. ಈ ಬಾರಿ ಕ್ರಿಸ್ ಮಸ್ ಹಬ್ಬವನ್ನ ಚಿತ್ರರಂಗದ ಅನೇಕ ಸ್ನೇಹಿತರ ಜೊತೆಯಲ್ಲಿ ಆಚರಣೆ ಮಾಡಿದ್ದಾರೆ.

English summary
Kannada Actor challenging star Darshan visited the school which he studied at Mysore. More than 30 friends joined Darshan for a few hours.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X