For Quick Alerts
  ALLOW NOTIFICATIONS  
  For Daily Alerts

  ಬೇಲೂರು ಚೆನ್ನಕೇಶವ ದೇಗುಲದಲ್ಲಿ ನಟ ದರ್ಶನ್!

  |

  ನಟ ದರ್ಶನ್ ಇತ್ತೀಚೆಗೆ ಹೆಚ್ಚು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕ್ರಾಂತಿ ಸಿನಿಮಾದ ಮುಹೂರ್ತ ಕಾರ್ಯಕ್ರಮದ ಬಳಿಕ ದರ್ಶನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿದ್ದಾರೆ. ದರ್ಶನ್ ಈಗ ಬೇಲೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೇಲೂರು ದೇವಾಲಯಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ಬೇಲೂರಿನ ಚೆನ್ನಕೇಶವ ದೇವಸ್ಥಾನಕ್ಕೆ ತೆರಳಿ ದರ್ಶನ್ ದೇವರ ಆಶೀರ್ವಾದ ಪಡೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ನೇರವಾಗಿ ಬೇಲೂರಿಗೆ ಹೊರಟು, ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

  ದರ್ಶನ್ ಹಿಂದೆ ಬಿದ್ದ ಅಭಿಮಾನಿಗಳು: ದರ್ಶನ್ ಮತ್ತೆ ವಾರ್ನಿಂಗ್!

  ದರ್ಶನ್‌ ರಸ್ತೆಗೆ ಇಳಿದಿದ್ದಾರೆ ಎನ್ನುವ ಸುದ್ದಿ ಗೊತ್ತಾದರೆ ಸಾಕು, ಅಭಿಮಾನಿಗಳು ಅವರ ಕಾರಿನ ಹಿಂದೆ ಬಿದ್ದು ಬಿಡುತ್ತಾರೆ. ತಮ್ಮ ನೆಚ್ಚನ ನಟನನ್ನು ಒಮ್ಮೆ ನೋಡಿದರೆ ಸಾಕು ಅಂತ ಕಾರು ಹಿಂಬಾಲಿಸುತ್ತಾರೆ. ಇಂತಹ ಪ್ರಸಂಗ ಮತ್ತೆ ನಡೆದಿದೆ. ಹಾಗಾಗಿ ದರ್ಶನ್‌ ದೇವಸ್ಥಾನದ ಒಳಗಡೆ ಅಭಿಮಾನಿಗಳಿಗೆ ಗದರಿದ್ದಾರೆ. ಆದರೂ ಅಭಿಮಾನಿಗಳ ಸಮ್ಮುಖದಲ್ಲಿ ದರ್ಶನ್ ಇಂದು ಚೆನ್ನಕೇಶವನ ದರ್ಶನ ಪಡೆದು ಕೊಂಡಿದ್ದಾರೆ. ಈ ಹಿಂದೆಯೂ ದರ್ಶನ್‌ ಕುಟುಂಬದೊಂದಿಗೆ ಪ್ರವಾಸ ಹೊರಟಾಗ ಅಭಿಮಾನಿಗಳು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಆಗಲೂ ದರ್ಶನ್ ಅಭಿಮಾನಿಗಳಿಗೆ ಬೈದು ಬುದ್ಧಿ ಹೇಳಿದ್ದರು.

  ನಟ ದರ್ಶನ್ ಸದ್ಯ ಕ್ರಾಂತಿ ಸಿನಿಮಾಕ್ಕಾಗಿ ತಯಾರಿ ನಡೆಸಿದ್ದಾರೆ. ಕ್ರಾಂತಿ ಸಿನಿಮಾಗಾಗಿ ಹೇಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರವನ್ನು ದರ್ಶನ್ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇತ್ತೀಚೆಗೆ ದರ್ಶನ್ ಹಿರಿಯ ನಟಿ ಬಿ.ಸರೋಜಾ ದೇವಿ ಮನೆಗೆ ಭೇಟಿ ನೀಡಿದ್ದರು. ಬಳಿಕ ಸಾಲು ಮರದ ತಿಮ್ಮಕ್ಕನ ಆರೋಗ್ಯ ವಿಚಾರಿಸಿ ಬಂದಿದ್ದಾರೆ.

  ಈ ನಡುವೆ ತುಂಬಾ ವಿಶೇಷವಾಗಿ ಗಮನ ಸೆಳೆದ ಮತ್ತೊಂದು ವಿಚಾರ ಅಂದರೆ ಅದು ದರ್ಶನ್ ಪತ್ನಿ, ಮಗನ ಜೊತೆಗೆ ಹೆಚ್ಚಾಗಿ ಕಾಣಿಸಿ ಡಿದ್ದು. ಹೌದು ದರ್ಶನ್ ಮಗ ವಿನೀಶ್ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಹಲವು ವರ್ಷಗಳ ಬಳಿಕ ಈಗ ಮತ್ತೆ ಪತ್ನಿ ವಿಜಯ್ ಲಕ್ಷ್ಮಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಪತ್ನಿ ಮಗನೊಂದಿಗೆ ದರ್ಶನ್ ಕಾಡು ಮೇಡು ಸುತ್ತಿದ್ದಾರೆ.

  Actor Darshan Visited to Beluru Chennakeshava Temple

  ವಂಚನೆ ಪ್ರಕರಣದ ಬಳಿಕ ದರ್ಶನ್ ವಿವಾದಗಳ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಕ್ರಾಂತಿ ಸಿನಿಮಾದ ಮೂಲಕ ಕ್ರಾಂತಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ರಾಬರ್ಟ್ ಸಿನಿಮಾದ ಬಳಿಕ ಕ್ರಾಂತಿ ಸಿನಿಮಾ ಯಾವ ರೀತಿ ಕ್ರಾಂತಿ ಮಾಡಲಿದೆ ಎಂಬ ಕೌತುಕ ಮನೆ ಮಾಡಿದೆ. ಸದ್ಯ ಕ್ರಾಂತಿ ಚಿತ್ರದ ಪ್ರಿ-ಪ್ರೊಡಕ್ಷನ್‌ ಕೆಲಸಗಳು ಆರಂಭವಾಗಿವೆ. ಆದಷ್ಟು ಬೇಗ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  English summary
  Actor Darshan visited to belur, darshan visit belur chenna keshava temple ,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X