ಮಂತ್ರಾಲಯ ರಾಯರ ಮಠಕ್ಕೆ ಭೇಟಿ ನೀಡಿದ ನಟ ದರ್ಶನ್
'ರಾಬರ್ಟ್' ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ದರ್ಶನ್ ಇಂದು (ಮಾರ್ಚ್ 17) ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದಾರೆ.
Recommended Video
ರಾಯರ ಮಠದಲ್ಲಿ ಇಂದು ನಡೆದ ವೈಭವೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸಿದ್ದರು, ಮಠದ ವತಿಯಿಂದ ದರ್ಶನ್ ಅವರಿಗೆ ಸನ್ಮಾನ ಸಹ ಮಾಡಲಾಯಿತು.
ಈ ಸಮಯ ಮಠದ ಭಕ್ತಾದಿಗಳು, ವಿದ್ಯಾರ್ಥಿಗಳು ಹಾಗೂ ಇತರರು ನಟ ದರ್ಶನ್ ಅವರೊಂದಿಗೆ ಫೊಟೊ ತೆಗೆಸಿಕೊಂಡು, ಆಟೋಗ್ರಾಫ್ ಹಾಕಿಸಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದ ನಂತರ ಎದುರಾದ ಮಾಧ್ಯಮದವರೊಟ್ಟಿಗೆ ಚುಟುಕಾಗಿ ಮಾತನಾಡಿದ ದರ್ಶನ್, 'ರಾಯರ ಮಠಕ್ಕೆ ಬಂದು ಬಹಳ ಕಾಲವಾಗಿತ್ತು ಹಾಗಾಗಿ ಇಂದು ಬಂದಿದ್ದೇನೆ. ಮಠಕ್ಕೆ ಬರುವುದೇ ಒಂದು ಖುಷಿ. ಇಲ್ಲಿಗೆ ಬಂದರೆ ನೆಮ್ಮದಿ ಎನಿಸುತ್ತದೆ' ಎಂದರು.
ಪೈರಸಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದರ್ಶನ್, 'ಈ ಪ್ರಶ್ನೆಯನ್ನು ಪೈರಸಿ ಮಾಡಿದವರಿಗೆ ಕೇಳಿ' ನಗುತ್ತಲೇ ಉತ್ತರಿಸಿದರು.
'ರಾಬರ್ಟ್' ಸಿನಿಮಾವನ್ನು ಜನ ಒಪ್ಪಿಕೊಂಡಿದ್ದಾರೆ ಅವರಿಗೆ ಖುಷಿಯಾಗಿದೆ. ನಮಗೆ ಅದೇ ಸಾಕು. ಸದ್ಯಕ್ಕೆ ರಾಬರ್ಟ್ ಸಿನಿಮಾ ಮುಗಿಯಲಿ ಆ ಮೇಲೆ ಮುಂದಿನ ಸಿನಿಮಾ ಬಗ್ಗೆ ಯೋಚನೆ ಮಾಡುತ್ತೇನೆ. ಸದ್ಯಕ್ಕೆ ಇಲ್ಲಿ ಮಠಕ್ಕೆ ಬಂದಿದ್ದೇನೆ. ಮುಂದೆ ಈ ಬಗ್ಗೆ ಮಾತನಾಡೋಣ' ಎನ್ನುತ್ತಾ ನಿರ್ಗಮಿಸಿದರು ದರ್ಶನ್.


Click it and Unblock the Notifications











