ಅವತ್ತು ದರ್ಶನ್ ಬೇಡ ಅಂದ್ರು, ಆದರೂ ದುಡ್ಡು ಕೊಟ್ಟಿದ್ವಿ, ಈಗ ನೋಡಿದ್ರೆ- ಯುವ ನಿರ್ದೇಶಕ

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿಢೀರ್ ನಟ ದರ್ಶನ್ ಬಂಧನವಾಗಿತ್ತು. ಎಲ್ಲಾ ಕೆಲಸಗಳನ್ನು ಅಲ್ಲಲ್ಲೇ ಬಿಟ್ಟು ಪೊಲೀಸ್ ವಿಚಾರಣೆ ಎದುರಿಸುವಂತಾಯಿತು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಟ್ಟರು. ದರ್ಶನ್ ಪರಪ್ಪನ ಅಗ್ರಹಾರ ಸೇರಿ ಒಂದು ತಿಂಗಳು ಕಳೆದಿದೆ. ಯಾವಾಗ ಬಿಡುಗಡೆ ಆಗಿ ಹೊರ ಬರುತ್ತಾರೆ ಎನ್ನುವುದು ಗೊತ್ತಿಲ್ಲ.

'ಕಾಟೇರ' ಸಿನಿಮಾ ಮಾಡಿ ದರ್ಶನ್ ಗೆದ್ದಿದ್ದರು. ಇದೇ ಸಂಭ್ರಮದಲ್ಲಿ 'ಡೆವಿಲ್' ಸಿನಿಮಾ ಒಪ್ಪಿಕೊಂಡಿದ್ದರು. ಮೊದಲು ಒಂದು ವಾರ ಚಿತ್ರೀಕರಣ ನಡೆದಿತ್ತು. ಅದೇ ಸಮಯದಲ್ಲಿ ಗಾಯಗೊಂಡು ಕೈಗೆ ಸರ್ಜರಿ ಮಾಡಿಸಿಕೊಳ್ಳುವಂತಾಯಿತು. ಕೈ ನೋವಿನ ನಡುವೆ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿ ಆಗಿದ್ದರು. ಬಳಿಕ ಮತ್ತೆ 'ಡೆವಿಲ್' ಚಿತ್ರೀಕರಣ ಆರಂಭವಾಗಿತ್ತು. ಅಷ್ಟರಲ್ಲೇ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು.

Actor Darshan was given an advance by the film team of Casino to play a guest role

ದರ್ಶನ್ ದಿಢೀರ್ ಜೈಲು ಸೇರಿದ್ದರಿಂದ ಕೆಲ ನಿರ್ಮಾಪಕರು ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ದರ್ಶನ್ ಜೊತೆ ಸಿನಿಮಾ ಮಾಡಲು ಕಾಲ್‌ಶೀಟ್ ಪಡೆದು ಅಡ್ವಾನ್ಸ್ ಕೊಟ್ಟವರು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಡೆವಿಲ್' ಬಳಿಕ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಕಾಲ್‌ಶೀಟ್ ಕೊಟ್ಟಿದ್ದರು. ಜೋಗಿ ಪ್ರೇಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿದೆ. 'ಸಿಂಧೂರ ಲಕ್ಷ್ಮಣ' ಬಯೋಪಿಕ್‌ನಲ್ಲಿ ನಟಿಸಲು ಒಪ್ಪಿದ್ದರು. ಮೀಡಿಯಾ ಹೌಸ್ ಸಂಸ್ಥೆ ಈ ಚಿತ್ರ ನಿರ್ಮಿಸಬೇಕಿದೆ.

D57, D58 ಬಳಿಕ ಕೂಡ ಒಂದಷ್ಟು ಸಿನಿಮಾಗಳನ್ನು ಮಾಡಲು ದರ್ಶನ್ ಒಪ್ಪಿಕೊಂಡಿದ್ದರು. ಅಡ್ವಾನ್ಸ್ ಪಡೆದಿದ್ದರು. ಬಹಳ ಹಿಂದೆ ರಂಗಪಟ್ಟಣ ಎನ್ನುವ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಕೊರೊನಾ ಹಾವಳಿಗೂ ಮುನ್ನ ಈ ಸಿನಿಮಾ ಶುರುವಾಗಿತ್ತು. ಬಳಿಕ 'ಕೆಸಿನೊ' ಎಂದು ಚಿತ್ರದ ಟೈಟಲ್ ಬದಲಾಗಿತ್ತು.

Actor Darshan was given an advance by the film team of Casino to play a guest role

ಖುದ್ದು ದರ್ಶನ್ ಬೇಡ ಎಂದರೂ ಒಂದು ಕೋಟಿ ಸಂಭಾವನೆ ಮಾತಾಡಿ 10 ದಿನ ಕಾಲ್‌ಶೀಟ್‌ಗಾಗಿ ಚಿತ್ರತಂಡ 1 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿತ್ತಂತೆ. ಕೊರೊನಾ ಹಾವಳಿಯಿಂದ 'ಕೆಸಿನೊ' ಸಿನಿಮಾ ನಿಂತು ಹೋಗಿತ್ತು. ಇದೀಗ ಚಿತ್ರದ ನಿರ್ದೇಶಕ ಚೇತನ್ ಚರಣ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ದರ್ಶನ್ ಬಂಧನ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಸದ್ಯ ನಿರ್ದೇಶಕ ಚೇತನ್ ಚರಣ್ ನ್ಯೂಸ್ 15 ಕನ್ನಡ ವಾಹಿನಿ ಈ ಬಗ್ಗೆ ಮಾತನಾಡಿದ್ದಾರೆ/ "ದರ್ಶನ ಅವರಿಗೆ 1 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದೆವು. ಅವರು ಸಂಭಾವನೆ ಬೇಡ,ನಿಮಗೆ ಸಹಾಯ ಮಾಡುತ್ತೇನೆ ಎಂದರು. ಆದರೆ ನಮ್ಮ ನಿರ್ಮಾಪಕರು ಸಂಭಾವನೆ ಕೊಡುತ್ತೇವೆ ಎಂದು 1 ಕೋಟಿ ಮಾತಾಡಿ 1 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರು"

"ಇನ್ನುಳಿದಂತೆ ಹಣ ನೀಡಿ 'ಕೆಸಿನೊ' ಸಿನಿಮಾ ಶುರು ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಬಂತು. ಚಿತ್ರರಂಗದ ಕತೆ ಏನಾಯ್ತು ಎಂದು ಗೊತ್ತೇಯಿದೆ. ನಾನು ಕೂಡ ಸಂಕಷ್ಟಕ್ಕೆ ಸಿಲುಕಿದ್ದು ಊಟಕ್ಕೂ ಪರದಾಡುವಂತಾಗಿದೆ. ದರ್ಶನ್ ಅವರು ಜೈಲಿನಲ್ಲಿದ್ದಾರೆ. ನಾನು ಬೀದಿಯಲ್ಲಿ ಇದ್ದೀನಿ ಅಷ್ಟೆ. ದರ್ಶನ್ ಸರ್ ಬಿಡುಗಡೆ ಆಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ನಿರ್ದೇಶಕ ಚೇತನ್ ಚರಣ್ ಹೇಳಿದ್ದಾರೆ.

ಅಭಿಮಾನಿಗಳು ಸಹ ದರ್ಶನ್ ಬೇಗ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಚಾರ್ಜ್‌ಶೀಟ್ ಸಲ್ಲಿಕೆ ಆಗುವವರೆಗೂ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುದಿಲ್ಲ ಎನ್ನಲಾಗ್ತಿದೆ.

More from Filmibeat

English summary
Young movie director whised to Darshan quick release from jail;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X