Darshan: ದರ್ಶನ್‌ಗೆ 'ಪುಷ್ಪ' ಚಿತ್ರದ ಜಾಲಿ ರೆಡ್ಡಿ ಪಾತ್ರ ಮಾಡಿ ಎಂದಿದ್ದ ನಿರ್ದೇಶಕ!

ನಟ ಚಾಲೆಂಜಿಂಗ್ ಸ್ಟಾರ್ ಸದ್ಯ 'ಕ್ರಾಂತಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಬೇರೆ ಭಾಷೆ ಚಿತ್ರಗಳಲ್ಲಿ ಇಲ್ಲಿ ತನಕ ಅಭಿನಯಿಸಿಲ್ಲ. ಅವರು ಅಭಿನಯದ ಚಿತ್ರಗಳು ಬೇರೆ ಭಾಷೆಗೆ ಡಬ್ ಆಗಿವೆ. ಹಾಗಂತ ದರ್ಶನ್‌ಗೆ ಬೇಡಿಕೆ ಇಲ್ಲ ಅಂತಲ್ಲ. ಬೇಡಿಕೆ ಬಂದರೂ ಕೂಡ ದರ್ಶನ್ ಅದನ್ನು ಒಪ್ಪಿಲ್ಲ. ಕನ್ನಡದಲ್ಲೇ ಟಾಪ್‌ನಲ್ಲಿ ಇರುವ ನಟ ದರ್ಶನ್ ಬೇರೆ ಭಾಷೆಗಳಲ್ಲಿ ಅಭಿನಯಿಸುವ ಅಗತ್ಯವೂ ಇಲ್ಲ.

ಕನ್ನಡ ಚಿತ್ರಂಗದಲ್ಲಿಯೇ ನಟ ದರ್ಶನ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಾಲೆಂಜಿಂಗ್ ಸ್ಟಾರ್ ಅದರದ್ದೇ ಆದ ಭದ್ರ ಕೋಟೆಯಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟ ದರ್ಶನ್‌ಗೆ ಬೇರೆ ಚಿತ್ರರಂಗದಿಂದ ದೊಡ್ಡ ಆಫರ್‌ಗಳು ಬಂದಿವೆ. ಆದರೆ ದರ್ಶನ್ ಮಾತ್ರ ಅದಕ್ಕೆ ಸೊಪ್ಪು ಹಾಕುವುದಕ್ಕೆ ಹೋಗಿಲ್ಲ. ಅದಕ್ಕೆ ಕಾರಣ ಇತ್ತೀಚೆಗೆ ದರ್ಶನ್‌ಗೆ ತೆಲುಗಿನ ದೊಡ್ಡ ಚಿತ್ರದಿಂದ ಬಂದಿದ್ದ ಆಫರ್.

ತೆಲುಗಿನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಅನಿಸಿಕೊಂಡ ಚಿತ್ರ 'ಪುಷ್ಪ'. ಈ ಚಿತ್ರ ರಿಲೀಸ್, ಆಗಿದ್ದೇ, ಆಗಿದ್ದು ಅದೇನು ಅಬ್ಬರ, ಅದೇನು ಅಟ್ಟಹಾಸ. ಆದರೆ, ಈ ಚಿತ್ರದಲ್ಲಿ ನಟಿಸುವಂತೆ ದರ್ಶನ್‌ರನ್ನು ಹುಡುಕಿಕೊಂಡು ನಿರ್ದೇಶಕ ಸುಕುಮಾರ್ ಬಂದಿದ್ದರು ಎನ್ನುವುದು ತಡವಾಗಿ ಗೊತ್ತಾಗಿದೆ.

'ಪುಷ್ಪ' ಚಿತ್ರಕ್ಕೆ ದರ್ಶನ್ ಬೇಕು ಎಂದಿದ್ದ ಸುಕುಮಾರ್!

'ಪುಷ್ಪ' ಚಿತ್ರಕ್ಕೆ ದರ್ಶನ್ ಬೇಕು ಎಂದಿದ್ದ ಸುಕುಮಾರ್!

ನಿಮಗೆಲ್ಲಾ ನೆನಪಿದೆಯಾ ಈ ಹಿಂದೆ ನಿರ್ದೇಶಕ ಸುಕುಮಾರ್ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಕರ್ನಾಟಕಕ್ಕೆ ಬಂದ 'ಪುಷ್ಪ' ಚಿತ್ರದ ನಿರ್ದೇಶಕ, ದರ್ಶನ್‌ರನ್ನು ಭೇಟಿ ಮಾಡಿದ್ದರು. ಆಗ ಇಬ್ಬರ ಭೇಟಿಯ ಬಗ್ಗೆ ಹತ್ತು ಹಲವು ಸುದ್ದಿಗಳು ಹಬ್ಬಿದ್ದವು. ಆದರೆ ನಿಜವೇನು ಎನ್ನುವುದು ಈಗ ಫಿಲ್ಮಿ ಬೀಟ್‌ಗೆ ಲಭ್ಯ ಆಗಿದೆ. ನಟ ದರ್ಶನ್‌ರನ್ನು 'ಪುಷ್ಪ' ಚಿತ್ರದಲ್ಲಿ ನಟಿಸುವಂತೆ ಕೇಳಲು ನಿರ್ದೇಶಕ ಸುಕುಮಾರ್ ಬಂದಿದ್ದರು.

ಜಾಲಿ ರೆಡ್ಡಿ ಪಾತ್ರವನ್ನು ದರ್ಶನ್ ನೀಡಿದ್ದ ಸುಕುಮಾರ್!

ಜಾಲಿ ರೆಡ್ಡಿ ಪಾತ್ರವನ್ನು ದರ್ಶನ್ ನೀಡಿದ್ದ ಸುಕುಮಾರ್!

ಪುಷ್ಪ ಚಿತ್ರದಲ್ಲಿ ನಟ ದರ್ಶನ್ ಇಲ್ಲ. ಆದರೆ ದರ್ಶನ್‌ಗೆ ಯಾವ ಪಾತ್ರವನ್ನು ನೀಡಲು ಸುಕುಮಾರ್ ಮುಂದಾಗಿದ್ದರು ಗೊತ್ತಾ. ಅದುವೇ ಜಾಲಿ ರೆಡ್ಡಿ ಪಾತ್ರ. 'ಪುಷ್ಪ' ಚಿತ್ರದಲ್ಲಿ ನಟ ಧನಂಜಯ್ ಅಭಿನಯಿಸಿರುವ ಜಾಲಿ ರೆಡ್ಡಿ ಪಾತ್ರವನ್ನು ದರ್ಶನ್‌ಗಾಗಿ ತಂದಿದ್ದರು ಸುಕುಮಾರ್. ಜಾಲಿ ರೆಡ್ಡಿಯಾಗಿ ಧನಂಜಯ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದ್ಬುತವಾಗಿ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದಲ್ಲಿ ನಟ ದರ್ಶನ್ ಅವರನ್ನು ಊಹಿಸಿಕೊಳ್ಳುದು ಕೂಡ ಕಷ್ಟವೆ.

'ಪುಷ್ಪ' ಚಿತ್ರದಲ್ಲಿ ನಟಿಸಲು ದರ್ಶನ್ ನಿರಾಕರಣೆ!

'ಪುಷ್ಪ' ಚಿತ್ರದಲ್ಲಿ ನಟಿಸಲು ದರ್ಶನ್ ನಿರಾಕರಣೆ!

'ಪುಷ್ಪ' ಚಿತ್ರದಲ್ಲಿ ಅಭಿನಯಿಸಲು ನಟ ದರ್ಶನ್ ಒಂದೇ ಮಾತಲ್ಲಿ ತಿರಸ್ಕರಿಸದ್ದಾರೆ. ಹಾಗೊಂದು ವೇಳೆ ಒಪ್ಪಿದ್ದರೂ, ಕೂಡ ಅದು ವಿಲನ್ ಪಾತ್ರವೆ. ಕನ್ನಡದ ಒಬ್ಬ ಸ್ಟಾರ್ ನಟ ಅಲ್ಲಿ ವಿಲನ್ ಆಗಿ, ಅಲ್ಲಿನ ನಟನ ಕೈಯಲ್ಲಿ ಒದೆ ತಿನ್ನುವುದನ್ನು ನೋಡಲು ದರ್ಶನ್ ಅಭಿಮಾನಿಗಳು ಇಷ್ಟ ಪಡುತ್ತಿರಲಿಲ್ಲ. ಹೀಗಾಗಿ ದರ್ಶನ್ ಹುಡುಕಿಕೊಂಡು ಬಂದ ಸುಕುಮಾರ್ ಬರಿಗೈಯಲ್ಲಿ ಹೋಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ದರ್ಶನ್ ಜೊತೆಗೂಡಿ ಸಿನಿಮಾ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.

Recommended Video

KGF 2| ವಿದೇಶದಲ್ಲಿ ಹೇಗಿದೆ ನೋಡಿ 'ಕೆಜಿಎಫ್2' ಟಿಕೆಟ್ ಬುಕ್ಕಿಂಗ್ ಕ್ರೇಝ್! | Filmibeat Kannada
ದರ್ಶನ್ ಬಗ್ಗೆ ಮಾತನಾಡಿದ ನಿರ್ದೇಶಕ ರವಿಶ್ರೀವತ್ಸ!

ದರ್ಶನ್ ಬಗ್ಗೆ ಮಾತನಾಡಿದ ನಿರ್ದೇಶಕ ರವಿಶ್ರೀವತ್ಸ!

ಈ ವಿಚಾರವನ್ನು ನಿರ್ದೇಶಕ ರವಿ ಶ್ರೀವತ್ಸ ರಿವೀಲ್ ಮಾಡಿದ್ದಾರೆ. ವಿಡಿಯೋ ಒಂದರಲ್ಲಿ ಪರಭಾಷೆ ಚಿತ್ರಗಳ ಬಗ್ಗೆ ಮಾತನಾಡಿದ ರವಿಶ್ರೀವತ್ಸ, ದರ್ಶನ್ ಯಾಕೆ ಪರಭಾಷಾ ಚಿತ್ರಗಳನ್ನು ಮಾಡುವುದಿಲ್ಲ. ಎಂದು ಹೇಳಿದ್ದಾರೆ. 'ಈಗ' ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದಾರೆ. ಹಾಗೆ ಅವರು ನಮ್ಮ ನಾಯಕರಿಗೆ ಸಿನಿಮಾ ಮಾಡಬೇಕೆ ಹೊರತು, ಅವರ ಚಿತ್ರದಲ್ಲಿ ಪಾತ್ರ ಕೊಡುವುದಲ್ಲ ಎಂದು ಗುಡುಗಿದ್ದಾರೆ.

More from Filmibeat

English summary
Actor Darshan Was Rejected Jolly Reddy Role In Allu Arjun's Pushpa Movie Which Was Aproched By Director Sukumar,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X