ಅಭಿಮಾನಿ ಕಡೆ ಕೈ ಬೀಸಿದ ದಾಸ; ಈ ಬಾರಿ ದರ್ಶನ್ ಪ್ರೀತಿಯ ಕುದುರೆ ಕಿಚ್ಚು ಹಾಯಿಸಿದ್ಯಾರು?
ತೂಗುದೀಪ ಕುಟುಂಬದಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಸಂಕಷ್ಟದಿಂದ ಪಾರಾಗಿ ದರ್ಶನ್ ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಸದ್ಯ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಓಡಾಡುತ್ತಿದ್ದಾರೆ. ಈ ಬಾರಿ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ಆಪ್ತರ ಜೊತೆ ಸುಗ್ಗಿ ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ಸಂಕ್ರಾಂತಿ ಬೆನ್ನಲ್ಲೇ ದರ್ಶನ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಮೊನ್ನೆಯಷ್ಟೆ ಮಂಡ್ಯದ ಆರತಿ ಉಕ್ಕಡ ಮಾರಮ್ಮ ದೇವಸ್ಥಾನಕ್ಕೆ ದರ್ಶನ್ ಭೇಟಿ ನೀಡಿದ್ದರು. ನಿನ್ನೆ ಪತ್ನಿ ಸಮೇತ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗುತ್ತಿದೆ.

ದರ್ಶನ್ ಕಾರಿನಲ್ಲಿ ಪ್ರಯಾಣಿಸುವಾಗ ಅಭಿಮಾನಿಗಳು ಹಿಂಬಾಲಿಸುತ್ತಾರೆ. ಕೆಲವೊಮ್ಮೆ ತಮ್ಮ ಫೋಟೊಗಳನ್ನು ಆಟೋ ಮೇಲೆ ಹಾಕಿಕೊಂಡ ಅಭಿಮಾನಿಗಳಿಗೆ ದರ್ಶನ್ ಧನ್ಯವಾದ ತಿಳಿಸುವುದು ಇದೆ. ಚಾಮುಂಡಿ ಬೆಟ್ಟಕ್ಕೆ ಪತ್ನಿ ಜೊತೆ ಪ್ರಯಾಣಿಸುವ ವೇಳೆ ಆಟೋ ಡ್ರೈವರ್ ಕಡೆ ತಿರುಗಿ ದರ್ಶನ್ ಕೈ ಬೀಸಿರುವ ವೀಡಿಯೋ ವೈರಲ್ ಆಗುತ್ತಿದೆ.
ತಮ್ಮ ವಾಹನವನ್ನು ಹಿಂಬಾಲಿಸುವ ಅಭಿಮಾನಿಗಳಿಗೆ ದರ್ಶನ್ ಬುದ್ಧಿ ಹೇಳುವುದು ಇದೆ. ಸುಖಾ ಸುಮ್ಮನೆ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತಿರುತ್ತಾರೆ. ಇನ್ನು ದರ್ಶನ್ ಕಾರಿನಲ್ಲಿ ಪ್ರಯಾಣಿಸುವ ವೇಳೆ ಹೀಗೆ ಕೈ ಬೀಸಿರುವ ಸಾಕಷ್ಟು ವೀಡಿಯೋಗಳಿಗೆ. ಇತ್ತೀಚೆಗೆ ಬೆನ್ನು ನೋವಿನಿಂದ ದರ್ಶನ್ ಕಾರ್ ಡ್ರೈವ್ ಮಾಡುವುದು ಕಮ್ಮಿ ಮಾಡಿದ್ದಾರೆ. ಆದರೆ ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗುವಾಗ ತಾವೇ ಕಾರ್ ಚಲಾಯಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಕಾರಿನಲ್ಲಿ ವಾಪಸ್ ಬರುವಾಗ ವಿಜಯಲಕ್ಷ್ಮಿ ಪ್ರಸಾದ ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೊವನ್ನು "ಸರ್ವ ಮಂಗಳ ಮಾಂಗಲ್ಯೆ" ಹಾಡಿನ ಜೊತೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ದರ್ಶನ್ ಫಾರ್ಮ್‌ಹೌಸ್ ಸಂಕ್ರಾಂತಿ ಸಂಭ್ರಮಚರಣೆಯ ಫೋಟೊ, ವೀಡಿಯೋಗಳು ವೈರಲ್ ಆಗುತ್ತಲೇ ಇದೆ.

ನಟ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ಚಿಕ್ಕಂದಿನಿಂದಲೂ ಅವರಿಗೆ ಕುದುರೆ ಅಂದ್ರೆ ಬಹಳ ಇಷ್ಟ. ವಿವಿಧ ತಳಿಗಳ ಕುದುರೆಗಳು ಅವರ ಬಳಿಯಿದೆ. ಅದರಲ್ಲಿ ಬಿಳಿಯ ಬಣ್ಣದ ಕುದುರೆ ಅಂದರೆ ಅಚ್ಚುಮೆಚ್ಚು. ಪ್ರತಿ ವರ್ಷ ಸಂಕ್ರಾಂತಿಗೆ ರಾಸುಗಳನ್ನು ತೊಳೆದು, ಸಿಂಗರಿಸಿ ಪೂಜೆ ಮಾಡಿ ಸಂಭ್ರಮಿಸುತ್ತಾರೆ. ತಮ್ಮ ಪ್ರೀತಿಯ ಕುದುರೆಯನ್ನು ಕಿಚ್ಚು ಹಾಯಿಸುತ್ತಿದ್ದರು.
ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಹಾಗಾಗಿ ಈ ಬಾರಿ ದರ್ಶನ್ ಬದಲು ಸಹೋದರ ದಿನಕರ್ ತೂಗುದೀಪ ಆ ಬಿಳಿ ಕುದುರೆ ಜೊತೆ ಕಿಚ್ಚು ಹಾಯ್ದಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ಈಗ ಹರಿದಾಡುತ್ತಿದೆ. ನಟ ದರ್ಶನ್ ಹಾಗೂ ದಿನಕರ್ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದವು. ಸಂಕಷ್ಟದ ಸಮಯದಲ್ಲಿ ಎಲ್ಲರೂ ಒಂದಾಗಿದ್ದರು.
ಈ ಬಾರಿ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಜೊತೆ ಸುಗ್ಗಿ ಸಂಭ್ರಮ ಆಚರಿಸಿದ್ದಾರೆ. ದಿನಕರ್ ತೂಗುದೀಪ ಕೂಡ ಪತ್ನಿ ಮಕ್ಕಳ ಜೊತೆ ಭಾಗಿ ಆಗಿದ್ದರು. ಆಪ್ತರಾದ ಹಾಸ್ಯ ನಟ ಚಿಕ್ಕಣ್ಣ, ನಟ ಧನ್ವೀರ್ ಕೂಡ ಈ ವೇಳೆ ಹಾಜರಿದ್ದರು. ದಿನಕರ್ ನಿರ್ದೇಶನದ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಟ್ರೈಲರ್ ಬಿಡುಗಡೆ ಆಗಿ ಸದ್ದು ಮಾಡ್ತಿದೆ. 'ರಾಯಲ್' ಚಿತ್ರದ ಟ್ರೈಲರ್ ಅನ್ನು ದರ್ಶನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಬೆಂಬಲ ಸೂಚಿಸಿದ್ದಾರೆ.
ವಿರಾಟ್ ಹಾಗೂ ಸಂಜನಾ ಆನಂದ್ ನಟನೆಯ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ 'ರಾಯಲ್' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಇತ್ತೀಚಿಗೆ ಚಿತ್ರದ ಹಾಡೊಂದನ್ನು ನೋಡಿ ವಿಜಯಲಕ್ಷ್ಮಿ ದರ್ಶನ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚಿಕೊಂಡಿದ್ದರು.


Click it and Unblock the Notifications











