ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ
Recommended Video

ಮೈಸೂರು, ಫೆಬ್ರವರಿ 20 : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದರೆ ಪಂಚಪ್ರಾಣ ಎಂಬುದು ತಿಳಿದಿರುವ ವಿಷಯ. ಸಮಯ ಸಿಕ್ಕಾಗಲೆಲ್ಲಾ ಬಂಡೀಪುರ ಅರಣ್ಯಕ್ಕೆ ತೆರಳಿ ಸಫಾರಿ, ಹಾಗೂ ಫೋಟೋಗಳನ್ನು ಕ್ಲಿಕ್ ಮಾಡುವುದು ಅವರ ಹವ್ಯಾಸ ಕೂಡ ಹೌದು.
ಇಲ್ಲಿಯವರೆಗೂ ದರ್ಶನ್ ಅವರು ಸಾವಿರಾರು ಫೋಟೋಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಆ ಫೋಟೋಗಳನ್ನು ನೀವು ಯಾವತ್ತಾದರೂ ಕಣ್ತುಂಬಿಕೊಂಡಿದ್ದೀರಾ.? ಇಲ್ಲಾ ತಾನೇ.?!
ದಟ್ಟ ಕಾನನದಲ್ಲಿ ದರ್ಶನ್ ಕ್ಲಿಕ್ ಮಾಡಿದ ಛಾಯಾಚಿತ್ರ ಹೇಗಿದೆ ಎಂಬುದನ್ನು ನೀವೀಗ ಕಣ್ಣಾರೆ ನೋಡಬಹುದು. ಇಷ್ಟವಿದ್ದರೆ, ಅದನ್ನ ಖರೀದಿಯೂ ಮಾಡಬಹುದು. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

ಮೈಸೂರಿನಲ್ಲಿ ಛಾಯಾಚಿತ್ರ ಪ್ರದರ್ಶನ
ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಮಾರ್ಚ್ 1 ರಿಂದ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ದರ್ಶನ್ ಸೆರೆ ಹಿಡಿದಿರುವ ಚಿತ್ರಗಳು
'ಲೈಫ್ ಆನ್ ದಿ ವೈಲ್ಡ್ ಸೈಡ್' ಹೆಸರಿನಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದ್ದು, ನಟ ದರ್ಶನ್ ರವರು ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳನ್ನ ಪ್ರದರ್ಶನಕ್ಕೆ ಇಡಲಾಗುತ್ತದೆ.

ಬೆಲೆ ಎಷ್ಟು.?
ದರ್ಶನ್ ಕ್ಯಾಮರಾದಲ್ಲಿ ಸೆರೆ ಆಗಿರುವ ಒಂದು ಛಾಯಾಚಿತ್ರಕ್ಕೆ (16*24 ಫ್ರೇಮ್ ಸೈಜ್) ಗೆ ಎರಡು ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಇದರೊಟ್ಟಿಗೆ ನಟ ದರ್ಶನ್ ಅಭಿಮಾನಿಗಳಿಗೆ ಒಂದು ಸುವರ್ಣಾವಕಾಶ ಸಹ ಲಭಿಸಿದೆ. ಅದೇನಪ್ಪಾ ಅಂದರೆ, ಎರಡುವರೆ ಸಾವಿರ ರೂಪಾಯಿ ಕೊಟ್ಟರೆ, ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಕೂಡ ಸಿಗಲಿದೆ.

ವನ್ಯಜೀವಿ ಸಂರಕ್ಷಣಾ ನಿಧಿ
ಈ ಛಾಯಾಚಿತ್ರಗಳ ಮಾರಾಟದಿಂದ ಬಂದ ಹಣವನ್ನು ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಅರಣ್ಯ ಇಲಾಖೆ ತಿಳಿಸಿದೆ. ಹಾಗಾದ್ರೆ, ಇನ್ಯಾಕೆ ತಡ.. ನೀವು ಡಿ-ಬಾಸ್ ಫ್ಯಾನ್ ಆಗಿದ್ದರೆ, ದರ್ಶನ್ ಕ್ಲಿಕ್ ಮಾಡಿರುವ ಫೋಟೋಗಳನ್ನು ಕೊಂಡುಕೊಳ್ಳಲು ರೆಡಿ ಆಗಿರಿ...


Click it and Unblock the Notifications











