twitter
    For Quick Alerts
    ALLOW NOTIFICATIONS  
    For Daily Alerts

    ದಾಸನ ಮನವಿಗೆ ಅಭಿಮಾನಿಗಳ ಸ್ಪಂದನೆ: ಡಿ ಬಾಸ್ ಮನೆಯಲ್ಲಿ ದವಸ-ಧಾನ್ಯಗಳ ರಾಶಿ

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನೆಚ್ಚಿನ ನಟನ ಹುಟ್ಟುಹಬ್ಬನ್ನು ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ಈಗಾಗಲೆ ಸಿದ್ಧರಾಗುತ್ತಿದ್ದಾರೆ. ಹುಟ್ಟುಹಬ್ಬ ಅಂದ್ಮೇಲೆ ಅಭಿಮಾನಿಗಳು ಕೇಕ್, ಹಾರ, ಗಿಫ್ಟ್ ಗಳನ್ನು ತರುವುದು ಸಾಮಾನ್ಯ ಆದರೆ ದರ್ಶನ್ ಇದ್ಯಾವುದನ್ನು ತರಬಾರದು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

    ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎನ್ನುವುದು ದರ್ಶನ್ ಮಾತು. ಕಳೆದ ವರ್ಷ ಕೂಡ ದರ್ಶನ್ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವರ್ಷ ಸಹ ಅರ್ಥ ಪೂರ್ಣ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಬದಲು ದವಸ ಧಾನ್ಯಗಳನ್ನು ತಂದು ಕೊಡಿ, ತಲುಪಬೇಕಾದ ಜಾಗಕ್ಕೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ್ದರು. ಹಾಗಾಗಿ ಅಭಿಮಾನಿಗಳು ದವಸ ಧಾನ್ಯಗಳನ್ನು ತಂದು ದರ್ಶನ್ ಅವರಿಗೆ ತಲುಪಿಸುತ್ತಿದ್ದಾರೆ.

    ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಅನುದಾನ ಸಾಗಿಸಿದ ದರ್ಶನ್: ವಿಡಿಯೋ ವೈರಲ್ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಅನುದಾನ ಸಾಗಿಸಿದ ದರ್ಶನ್: ವಿಡಿಯೋ ವೈರಲ್

    ದರ್ಶನ್ ಮನೆಯಲ್ಲಿ ದವಸ-ಧಾನ್ಯಗಳ ರಾಶಿ

    ದರ್ಶನ್ ಮನೆಯಲ್ಲಿ ದವಸ-ಧಾನ್ಯಗಳ ರಾಶಿ

    ದರ್ಶನ್ ಮನವಿ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ದವಸ ಧಾನ್ಯಗಳನ್ನು ತಂದು ನೀಡುತ್ತಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈಗಾಗಲೆ ಸಾಕಷ್ಟು ಅಭಿಮಾನಿಗಳು ದರ್ಶನ್ ಭೇಟಿಯಾಗಿ ತಾವು ತಂದ ಅಕ್ಕಿ ಬೇಳೆಯನ್ನು ದರ್ಶನ್ ಕೈಗೆ ತಲುಪಿಸುತ್ತಿದ್ದಾರೆ. ಈಗಾಗಲೆ ದವಸ-ಧಾನ್ಯಗಳು ತುಂಬಿರುವ ಮೂಟೆಗಳ ರಾಶಿಯನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.

    ದರ್ಶನ್ ಜೊತೆ ಅಭಿಮಾನಿಗಳ ಫೋಟೋ

    ದರ್ಶನ್ ಜೊತೆ ಅಭಿಮಾನಿಗಳ ಫೋಟೋ

    ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಕೈಲಾದ ಸಹಾಯ ಮಾಡಿದ ಖುಷಿಯಲ್ಲಿ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ದೂರದ ಊರುಗಳಿಂದ ಅಭಿಮಾನಿಗಳು ಬಂದು ದರ್ಶನ್ ಭೇಟಿಯಾಗಿ ದವಸ ಧಾನ್ಯಗಳನ್ನು ನೀಡುತ್ತಿದ್ದಾರೆ.

    ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?ಪ್ರೀತಿಯ ಅಭಿಮಾನಿಗಳಲ್ಲಿ 'ದಾಸ' ದರ್ಶನ್ ಮಾಡಿದ ಮನವಿ ಏನು.?

    ದರ್ಶನ್ ಮನವಿ ಮಾಡಿಕೊಂಡಿದ್ದೇನು?

    ದರ್ಶನ್ ಮನವಿ ಮಾಡಿಕೊಂಡಿದ್ದೇನು?

    ''ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು'' ಎಂದು ಪ್ರೀತಿಯ ಅಭಿಮಾನಿಗಳಲ್ಲಿ ನಟ ದರ್ಶನ್ ಮನವಿ ಮಾಡಿದ್ದಾರೆ.

    ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!

    ಗೋಶಾಲೆಗೆ ದರ್ಶನ್ ಅನುದಾನ

    ಗೋಶಾಲೆಗೆ ದರ್ಶನ್ ಅನುದಾನ

    ಇತ್ತೀಚಿಗೆ ದರ್ಶನ್ ಗೋಶಾಲೆ ವೊಂದಕ್ಕೆ ಅನುದಾನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲು ಸಾಲು ಟ್ರ್ಯಾಕ್ಟರ್ ಗಳಲ್ಲಿ ಗೋಶಾಲೆಗೆ ಹುಲ್ಲನ್ನು ಸಾಗಿಸಲಾಗಿದೆ. ಚಿತ್ರ ಗೋಶಾಲೆ ಇದಾಗಿದ್ದು ಹುಲ್ಲು ಮಾತ್ರಲ್ಲದೆ ಗೋಶಾಲೆಗೆ ಅಗತ್ಯವಿರುವ ಫುಡ್ ಕೂಡ ಸಾಗಿಸಿದ್ದಾರೆ. ಟ್ರ್ಯಾಕ್ಟರ್ ಗಳಲ್ಲಿ ಹುಲ್ಲನ್ನು ಸಾಗಿಸುವ ಜೊತೆಗೆ ಸ್ವತಃ ದರ್ಶನ್ ಗೋಶಾಲೆಗೆ ಭೇಟಿ ನೀಡಿ ಗೋವುಗಳನ್ನು ನೋಡಿ, ಅಲ್ಲಿರುವವರ ಜೊತೆ ಮಾತುಕಥೆ ನಡೆಸಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ.

    Read more about: darshan ದರ್ಶನ್
    English summary
    Kannada Actor Darshan will celebrating his birthday very Meaningful.
    Monday, January 20, 2020, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X