twitter
    For Quick Alerts
    ALLOW NOTIFICATIONS  
    For Daily Alerts

    ರೈತರೊಂದಿಗೆ ಒಂದು ದಿನ ಕಳೆಯಲಿದ್ದಾರೆ ನಟ ದರ್ಶನ್: ಯಾವಾಗ? ಎಲ್ಲಿ?

    |

    ಸ್ಟಾರ್ ನಟ ದರ್ಶನ್‌ರ ಪ್ರಾಣಿ ಪ್ರೀತಿ, ಪಶುಸಂಗೋಪನೆ ಬಗ್ಗೆ ಆಸಕ್ತಿ ಮತ್ತು ಕೃಷಿ ಪ್ರೇಮ ಬಹುತೇಕರಿಗೆ ಗೊತ್ತಿರುವಂಥಹುದ್ದೆ.

    ದರ್ಶನ್‌ರ ಕೃಷಿ ಪ್ರೇಮ, ಪಶುಸಂಗೋಪನೆ ಬಗ್ಗೆ ಇರುವ ಕಾಳಜಿಯನ್ನು ಗಮನಿಸಿ ರಾಜ್ಯ ಬಿಜೆಪಿ ಸರ್ಕಾರವು ಅವರನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ಮಾಡಿದೆ. ದರ್ಶನ್ ಸಹ ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

    ರಾಜ್ಯ ಕೃಷಿ ಇಲಾಖೆಯ ಕಾರ್ಯಕ್ರಮವೊಂದರ ಭಾಗವಾಗಿ ನಟ ದರ್ಶನ್ ರೈತರೊಟ್ಟಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮ ಮುಂದಿನ ತಿಂಗಳು ನಡೆಯಲಿದೆ.

    Actor Darshan Will Spend One Day With Farmers In Hirekeruru On November 14

    ರಾಜ್ಯ ಕೃಷಿ ಇಲಾಖೆಯು 'ರೈತರೊಟ್ಟಿಗೆ ಒಂದು ದಿನ' ಹೆಸರಿನ ಕಾರ್ಯಕ್ರಮ ಆಯೋಜಿಸಿದ್ದು, ಅದೇ ಕಾರ್ಯಕ್ರಮದ ಅಂಗವಾಗಿ ನಟ ದರ್ಶನ್ ಒಂದು ದಿನ ರೈತರೊಟ್ಟಿಗೆ ಕಳೆಯಲಿದ್ದಾರೆ. ನವೆಂಬರ್ 14 ರಂದು ಹಿರೇಕೆರೂರಿನ ರೈತರೊಟ್ಟಿಗೆ ಒಂದು ದಿನವನ್ನು ಕಳೆಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಜೊತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ಇರಲಿದ್ದಾರೆ.

    ಯಡಿಯೂರಪ್ಪ ಸಿಎಂ ಆಗಿದ್ದಾಗ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಮಾಡಲಾಯ್ತು. ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಅವರು ದರ್ಶನ್‌ರ ಅತ್ಯಾಪ್ತ ಗೆಳೆಯರೇ ಆಗಿದ್ದು, ಸ್ವತಃ ಅವರೇ ದರ್ಶನ್‌ ಬಳಿ ರಾಯಭಾರಿ ಆಗುವಂತೆ ಮನವಿ ಮಾಡಿದ್ದರು. ಮನವಿಯನ್ನು ಗೌರವಪೂರ್ವಕವಾಗಿ ದರ್ಶನ್ ಒಪ್ಪಿಕೊಂಡಿದ್ದರು.

    Actor Darshan Will Spend One Day With Farmers In Hirekeruru On November 14

    'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮವನ್ನು ಸಚಿವ ಬಿ.ಸಿ.ಪಾಟೀಲ್ ಅವರು ಕಳೆದ ವರ್ಷ ನವೆಂಬರ್ 14 ರಂದು ಮಂಡ್ಯದ ಮಡವಿನ ಕೋಡಿ ಗ್ರಾಮದಲ್ಲಿ ಉದ್ಘಾಟಿಸಿದರು. ತಮಗೆ ಹೆಸರು ತಂದುಕೊಟ್ಟ 'ಕೌರವ' ಸಿನಿಮಾವನ್ನು ಬಿ.ಸಿ.ಪಾಟೀಲ್ ಇದೇ ಊರಿನಲ್ಲಿಯೇ ಚಿತ್ರೀಕರಣ ಮಾಡಿದ್ದರು. ಹಾಗಾಗಿ ಇಲ್ಲಿಯೇ ತಮ್ಮ ಹುಟ್ಟುಹಬ್ಬದ ದಿನದಂದು (ನವೆಂಬರ್ 14) ಕಾರ್ಯಕ್ರಮ ಲೋಕಾರ್ಪಣೆ ಮಾಡಿದ್ದರು.

    ಈ ವರ್ಷದ 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮವನ್ನು ಹಾವೇರಿಯ ಹಿರೇಕೆರೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗುತ್ತಿರುವುದು ಖಚಿತವಾಗಿದೆ. ಜೊತೆಗೆ ಸಚಿವರೂ ಇರಲಿದ್ದಾರೆ. ಆದರೆ ದರ್ಶನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾರಣ ಭಾರಿ ಸಂಖ್ಯೆಯ ಜನ ಸೇರಬಹುದಾದ ಸಾಧ್ಯತೆ ಇದೆ.

    Actor Darshan Will Spend One Day With Farmers In Hirekeruru On November 14

    ದರ್ಶನ್ ಆಗಮಿಸುವುದರಿಂದ ಭಾರಿ ಸಂಖ್ಯೆಯ ಜನ ಸೇರುವ ಸಾಧ್ಯತೆ ಇದ್ದು, ನಿಜವಾದ ರೈತರು ಹಾಗೂ ಇತರರ ನಡುವೆ ಅಂತರ ಗುರುತಿಸುವುದು ಕಷ್ಟವಾಗುತ್ತದೆ. ನಿಜವಾದ ಫಲಾನುಭವಿಗಳ ಮೇಲೆ ಗಮನವಹಿಸಲಾಗುವುದಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರ ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

    ದರ್ಶನ್ ನಟನೆಯ ಜೊತೆಗೆ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ದರ್ಶನ್ ಅವರ ಮೊದಲ ಉದ್ಯೋಗ ಪಶು ಸಂಗೋಪನೆ ಆಗಿತ್ತು. ಇಂದಿಗೂ ಅವರು ತಮ್ಮ ಮೈಸೂರಿನ ಫಾರಂ ಹೌಸ್‌ನಲ್ಲಿ ಸಾಕಷ್ಟು ಹಸುಗಳನ್ನು ಹಾಗೂ ಇನ್ನಿತರೆ ಪ್ರಾಣಿಗಳನ್ನು ಸಾಕಿದ್ದಾರೆ ಅವುಗಳ ಆರೈಕೆ ಮಾಡುತ್ತಾರೆ.

    Actor Darshan Will Spend One Day With Farmers In Hirekeruru On November 14

    ಕೃಷಿ ಇಲಾಖೆಗೆ ಮಾತ್ರವೇ ಅಲ್ಲದೆ ಅರಣ್ಯ ಇಲಾಖೆಗೂ ಗೌರವ ರಾಯಭಾರಿ ಆಗಿದ್ದಾರೆ ನಟ ದರ್ಶನ್. ಕಳೆದ ಲಾಕ್‌ಡೌನ್ ಅವಧಿಯಲ್ಲಿ ದರ್ಶನ್‌ ಕೊಟ್ಟ ಕರೆಯಿಂದಾಗಿ ರಾಜ್ಯದಾದ್ಯಂತ ಸಾವಿರಾರು ಮಂದಿ ಮೃಗಾಲಯಗಳಲ್ಲಿನ ಪ್ರಾಣಿಗಳನ್ನು ದತ್ತು ತೆಗೆದುಕೊಂಡರು.

    English summary
    Actor Darshan will spend one day with farmers in Havieri district Hirekerur on November 14, Agriculture minister BC Patil will also be with Darshan on that day.
    Thursday, October 28, 2021, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X