ಟ್ರೋಲಿಗರಿಗೆ ಆಹಾರವಾಯ್ತು ಚಾಲೆಂಜಿಂಗ್ ಸ್ಟಾರ್ ಎಡವಟ್ಟಿನ ಹೇಳಿಕೆ

Recommended Video

Kurukshetra Movie: ಟ್ರೋಲಿಗರಿಗೆ ಆಹಾರವಾಯ್ತು ಚಾಲೆಂಜಿಂಗ್ ಸ್ಟಾರ್ ಎಡವಟ್ಟಿನ ಹೇಳಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕುರುಕ್ಷೇತ್ರ' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುತಾರಾಗಣದ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ. ಇದೇ ತಿಂಗಳು ಆಗಸ್ಟ್ 9ಕ್ಕೆ ಕುರುಕ್ಷೇತ್ರ ತೆರೆಗೆ ಬರುತ್ತಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಚಿತ್ರದಲ್ಲಿ ದರ್ಶನ್ ದುರ್ಯೋದನನ ಪಾತ್ರದಲ್ಲಿ ಮಿಂಚಿದ್ದಾರೆ. ಸಾಕಷ್ಟು ಶ್ರಮವಹಿಸಿ ಇಷ್ಟಪಟ್ಟು ಮಾಡಿರುವ ಕುರುಕ್ಷೇತ್ರ ರಿಲೀಸ್ ಸಮಯ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಚಿತ್ರತಂಡ ಪ್ರೆಸ್ ಮೀಟ್ ಹಮ್ಮಿಕೊಂಡಿತ್ತು. ಮಾಧ್ಯಮದ ಜೊತೆ ಮಾತನಾಡುತ್ತಿದ್ದ ದರ್ಶನ್ ಒಂದು ಎಡವಟ್ಟಿನ ಹೇಳಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

"ಕುರುಕ್ಷೇತ್ರ ನಡೆದಿರೋದು, ಎಲ್ಲರೂ ನೋಡಿರೋದು, ಓದಿರೋದು ಬೇರೆಯದ್ದೆ ಇದೆ. ಗಧಾಯುದ್ಧನೆ ಒಂದು ವರ್ಷನ್ ಇದೆ. ವಾಲ್ಮೀಕಿ ಬರೆದಿರೋದು ಇನ್ನೊಂದು ಥರ ಇದೆ. ಹಾಗಾಗಿ ಇಂತಹ ಮಹಾಭಾರತವನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರವಹಿಸಬೇಕಾಗುತ್ತೆ" ಎಂದು ದರ್ಶನ್ ಹೇಳಿದ್ದಾರೆ.

Actor Darshan Wrong Statement About The Mahabharata

ರಾಮಾಯಣ ಮತ್ತು ಮಹಾಭಾರತ ದೇಶದ ಎರಡು ಶ್ರೇಷ್ಠ ಮಹಾಕಾವ್ಯಗಳು. ಮಹಾಭಾರತ ಬರೆದಿದ್ದು 'ವ್ಯಾಸ'. ರಾಮಾಯಣ ಬರೆದಿದ್ದು 'ವಾಲ್ಮೀಕಿ'. ಆದ್ರೆ ದರ್ಶನ್ ಮಾತನಾಡುವಾಗ 'ವಾಲ್ಮೀಕಿ' ಮಹಾಭಾರತ ಎಂದು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ದುರ್ಯೋದನ ಪಾತ್ರ ಮಾಡಿ ಮಹಾಭಾರತ ಬರೆದವರ ಬಗ್ಗೆ ತಪ್ಪು ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

More from Filmibeat

English summary
Actor Darshan wrong statement about the Mahabharata. Darshan get trolled about wrong statement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X