For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ವಿವಾದ ಮತ್ತು ಚರ್ಚೆ ಹುಟ್ಟಾಕ್ಕಿದ ಹೇಳಿಕೆಗಳು!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟ್ರೈಟ್ ಫಾವರ್ಡ್. ಮನಸ್ಸಿಗೆ ಅನ್ನಿಸಿದ್ದನ್ನು ಹಿಂದು ಮುಂದು ನೋಡದೇ ಹೇಳಿಬಿಡ್ತಾರೆ. ಹಿಂದೊಂದು ಮುಂದೊಂದು ಮಾತನಾಡುವ ಜಾಯಮಾನ ದರ್ಶನ್‌ದಲ್ಲ. ನಟ ದರ್ಶನ್ ನೀಡುವ ಹೇಳಿಕೆಗಳು ಸಿಕ್ಕಾಪಟ್ಟೆ ವೈರಲ್ಲಾಗುತ್ತದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಬಹಳ ಜೋರಾಗಿ ರಾರಾಜಿಸುತ್ತಿರುತ್ತವೆ.

  ದರ್ಶನ್ ಹೇಳಿಕೆ ಕೆಲವೊಮ್ಮೆ ವಿವಾದ ಸೃಷ್ಟಿಸಿರುವುದು ಇದೆ. ಇಂತಹ ಹೇಳಿಕೆಗಳು ಅಭಿಮಾನಿಗಳಿಗೆ, ಆಪ್ತರಿಗೆ ಕಸಿವಿಸಿ ಉಂಟು ಮಾಡಿದ್ದನ್ನು ನೋಡಿದ್ದೇವೆ. "ನನಗೆ ಎರಡು ಮುಖ ಇದೆ. ಒಂದು ತುಂಬಾ ಒಳ್ಳೆಯದ್ದು. ಮತ್ತೊಂದು ತುಂಬಾ ಕೆಟ್ಟದ್ದು. ನಾನು ತುಂಬಾ ಮುಂಗೋಪಿ, ಕೋಪವನ್ನು ತಡೆಯೋದಿಲ್ಲ. ಕೋಪ ಬಂದರೆ ಯಾರೇ ಆಗಲಿ ಏನೇ ಆಗಲಿ ಎಂತಹವರೇ ಆಗಲಿ ನಾನು ಬಿಡಲ್ಲ" ಎಂದು ಸ್ವತಃ ದರ್ಶನ್ ಒಮ್ಮೆ ಹೇಳಿದ್ದರು.

  ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?

  ತೆರೆಮೇಲೆ ಹೀರೊ ಆಗಿ ಮಾತ್ರವಲ್ಲ ನಿಜಜೀವನದಲ್ಲಿ ತಮ್ಮ ಸಾಮಾಜಿಕ ಕೆಲಸಗಳಿಂದಲೂ ದರ್ಶನ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ಸೆಲೆಬ್ರೆಟಿಗಳು ವೈಯಕ್ತಿಕ ಜೀವನದಲ್ಲಿ ಸಂಯಮ ಕಾಯ್ದುಕೊಳ್ಳಬೇಕು. ಇಲ್ಲದೇ ಇದ್ದರೇ ಎಡವಟ್ಟುಗಳಾಗುತ್ತದೆ. ಕೆಲವೊಮ್ಮೆ ದರ್ಶನ್ ಹೇಳಿಕೆ ವಿವಾದ ಹುಟ್ಟು ಹಾಕಿದರೇ ಮತ್ತೆ ಕೆಲವೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇನ್ನು ಸಾಕಷ್ಟು ವಿವಾದಗಳಿಂದಲೂ ದರ್ಶನ್ ಸುದ್ದಿಯಾಗಿದ್ದಾರೆ.

   ಸುದೀಪ್ ಬಗ್ಗೆ ದರ್ಶನ್ ಟ್ವೀಟ್

  ಸುದೀಪ್ ಬಗ್ಗೆ ದರ್ಶನ್ ಟ್ವೀಟ್

  ಮಾರ್ಚ್ 5, 2017ರಂದು ನಟ ದರ್ಶನ್ ಒಂದು ಟ್ವೀಟ್ ಮಾಡಿದ್ದರು. "ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರಷ್ಟೇ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಸಿತ್ತು. ಸ್ಟಾರ್ ಒಬ್ಬರು ಮತ್ತೊಬ್ಬ ಸ್ಟಾರ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡಿದ್ದಾಗಿ ಟ್ವೀಟ್ ಮಾಡಿದ್ದು ಅದೇ ಮೊದಲು ಅನ್ನಿಸುತ್ತದೆ. ಆ ನಂತರವೂ ನಟ ಸುದೀಪ್ ಸ್ನೇಹ ಮುಂದುವರೆಸುವ ಮಾತನಾಡಿದ್ದರು. ಆದರೆ ನಟ ದರ್ಶನ್‌ ಮಾತ್ರ ಅದಕ್ಕೆ ಒಪ್ಪಲಿಲ್ಲ. ಈ ಬಗ್ಗೆ ಮಾಧ್ಯಮದವರು ಕೇಳಿದಾಗ ಖಾರವಾಗಿಯೇ ಉತ್ತರಿಸಿದ್ದರು.

  ಮತ್ತೊಂದು ಆಡಿಯೋ ಬಾಂಬ್: ಪದೇ ಪದೇ ದರ್ಶನ್‌ಗೆ ಆಡಿಯೋ ಕಂಟಕ!ಮತ್ತೊಂದು ಆಡಿಯೋ ಬಾಂಬ್: ಪದೇ ಪದೇ ದರ್ಶನ್‌ಗೆ ಆಡಿಯೋ ಕಂಟಕ!

   ಪ್ರೇಮ್‌ ಪುಡುಂಗಾ ಎಂದಿದ್ದ ದರ್ಶನ್

  ಪ್ರೇಮ್‌ ಪುಡುಂಗಾ ಎಂದಿದ್ದ ದರ್ಶನ್

  25 ಕೋಟಿ ಲೋನ್ ಪ್ರಕರಣದ ವೇಳೆ ನಟ ದರ್ಶನ್ ಹಾಗೂ ನಿರ್ಮಾಪಕ ಶ್ರೀನಿವಾಸ್ ನಡುವಿನ ತಿಕ್ಕಾಟ ತಾರಕಕ್ಕೇರಿತ್ತು. ಅದೇ ಸಮಯದಲ್ಲಿ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಕೊಟ್ಟ ಹೇಳಿಕೆಗಳು ಸಾಕಷ್ಟು ಚರ್ಚೆ ಹುಟ್ಟಾಕ್ಕಿತ್ತು. "ಸಿನಿಮಾ ಮಾಡೋ ಉದ್ದೇಶದಿಂದ ನಾನು, ಉಮಾಪತಿ ಹಾಗೂ ಜೋಗಿ ಪ್ರೇಮ್​ ಒಟ್ಟಾಗಿದ್ದೆವು. ಜೋಗಿ ಪ್ರೇಮ್​ 100 ದಿನ ಕಾಲ್‌ಶೀಟ್​ ಕೇಳಿದರು. ನಾನು ಯಾವುದೇ ನಿರ್ದೇಶಕರಿಗಾದರೂ 70 ದಿನಗಳ ಮೇಲೆ ಕಾಲ್‌ಶೀಟ್​ ಕೊಡುವುದಿಲ್ಲ. ಪ್ರೇಮ್‌ಗೆ 100 ದಿನ ಕಾಲ್‌ಶೀಟ್‌​ ಕೊಡೋಕೆ ಅವರೇನು ದೊಡ್ಡ ಪುಡಂಗನೂ ಅಲ್ಲ. ಅವರಿಗೆ ಕೊಂಬೂ ಇಲ್ಲ" ಎಂದಿದ್ದರು. ಈ ಮಾತು ಪ್ರೇಮ್‌ ಹಾಗೂ ರಕ್ಷಿತಾ ಪ್ರೇಮ್‌ಗೂ ಬೇಸರ ತಂದಿತ್ತು. ನಿರ್ದೇಶಕ ಪ್ರೇಮ್ ಸಹ ಸುದ್ದಿಗೋಷ್ಠಿ ನಡೆಸಿ ದರ್ಶನ್‌ಗೆ ತಿರುಗೇಟು ನೀಡಿದ್ದರು.

   ಅಪ್ಪು ಬಳಿ ಇರುವ ಕಾರು ನನ್ನತ್ರನೂ ಇದೆ

  ಅಪ್ಪು ಬಳಿ ಇರುವ ಕಾರು ನನ್ನತ್ರನೂ ಇದೆ

  ಇನ್ನು ಮೈಸೂರು ಫಾರ್ಮ್‌ಹೌಸ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ದರ್ಶನ್‌ "ನಾನು ಕಷ್ಟಪಟ್ಟಿರುವುದು ನನ್ನ ಹಣೆ ಬರಹ, ನನ್ನತ್ರ ಇರುವ ಲ್ಯಾಂಬೋರ್ಗಿನಿ ಉರುಸ್ ಗಾಡಿ, ಇದೇ ಪುನೀತ್ ರಾಜ್‌ಕುಮಾರ್ ಹತ್ರಾನೂ ಇದೆ. ನನ್ ಹತ್ರಾನೂ ಇದೆ. ಬೇರೆ ಯಾರತ್ರ ಇದೆ ತೋರ್ಸಿ ನೋಡೋಣ" ಎಂದಿದ್ದರು. ತಮ್ಮ ವಿವಾದದಲ್ಲಿ ಪುನೀತ್‌ ರಾಜ್‌ಕುಮಾರ್ ಹೆಸರನ್ನು ಅವರ ಬಳಿ ಇರುವ ಕಾರಿನ ವಿಚಾರವನ್ನು ಎಳೆದು ತಂದಿದ್ದು ಅಪ್ಪು ಅಭಿಮಾನಿಗಳಿಗೆ ಬೇಸರ ತಂದಿತ್ತು.

   ಪುನೀತ್ ಸಾವಿನ ಬಗ್ಗೆ ದರ್ಶನ್ ಹೇಳಿಕೆ

  ಪುನೀತ್ ಸಾವಿನ ಬಗ್ಗೆ ದರ್ಶನ್ ಹೇಳಿಕೆ

  ಇತ್ತಿಚೆಗಷ್ಟೇ ಸಂದರ್ಶನವೊಂದರಲ್ಲಿ ನಟ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ದರ್ಶನ್ ಮಾತನಾಡಿದ್ದು, ಇಬ್ಬರು ಫ್ಯಾನ್ಸ್‌ ವಾರ್‌ಗೆ ಕಾರಣವಾಗಿತ್ತು. ಅಭಿಮಾನಿಗಳು 'ಕ್ರಾಂತಿ' ಚಿತ್ರದ ಪ್ರಚಾರವನ್ನು ಬಹಳ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುತ್ತಾ "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಫ್ಯಾನ್ಸ್‌ಗಳು ನಾನು ಬದುಕಿದ್ದಾಗಲೇ ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಅನಿಸಬಿಡ್ತು. ಬಿಡಯ್ಯ ಇದಕ್ಕಿಂತ ಇನ್ನೇನು ಬೇಕು." ಎಂದಿದ್ದರು. ಇದು ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳನ್ನು ಕೆರಳಿಸಿತ್ತು. ಇಬ್ಬರ ನಟರ ಫ್ಯಾನ್ಸ್‌ ನಡುವಿನ ವಾರ್‌ಗೆ ಕಾರಣವಾಗಿತ್ತು.

   ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಮಾತು

  ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಮಾತು

  ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆಯೂ ದರ್ಶನ್ ಇತ್ತೀಚೆಗೆ ಮಾತನಾಡಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. "ನಾವು ನಮ್ಮ ಸಿನಿಮಾ ಡಬ್ ಮಾಡಿ ಕೊಡ್ತೀವಿ. ಆದರೆ ನಾವು ಅಲ್ಲಿ ಹೋಗಿ ಕಾಕಾ ಹೊಡೆಯೋದಿಲ್ಲ, ಇದು ನಮ್ಮ ಟೆರಿಟರಿ. ಯಾರು ಏನೇ ಹೇಳಿದ್ರು 'ಮೇರಾ ಕುತ್ತಾ ಮೇರಾ ಗಲಿ ಶೇರ್ ಹೈ' ಅನ್ನೋ ಗಾದೆ ಇದೆ. ಅಂದರೆ ನಮ್ಮ ಬೀದಿಗೆ ನಮ್ಮ ನಾಯಿನೇ ಅಂತ. ಇದು ನನ್ನ ಟೆರಿಟರಿ. ನಾನು ಇಲ್ಲಿಗೆ ಸಿನಿಮಾ ಮಾಡುತ್ತೀನಿ. ಹೊರಗಡೆಯವರಿಗೆ ಡಬ್ ಮಾಡಿ ಕೊಡ್ತಿನಿ. ಅವರು ತಗೊಂಡು ಹೋಗಿ ಹಾಕಿದ್ರು ಖುಷಿ ಹಾಕದೇ ಇದ್ದರೂ ಖುಷಿ." ಎಂದಿದ್ದಾರೆ. ಸದ್ಯ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಂತಹ ಸಮಯದಲ್ಲಿ ಈ ಹೇಳಿಕೆ ಸರಿಯಲ್ಲ ಅನ್ನುವುದು ಕೆಲವರ ವಾದ.

  Recommended Video

  Gaalipata 2 | Yograj Bhat | 'ಗಾಳಿಪಟ 2' ನೋಡಲು ಟಿಪ್‌ಟಾಪ್ ಆಗಿ ಬಂದ ಭಟ್ರು | Filmibeat Kannada
  English summary
  Actor Darshan Wrong Statements Create Controversies. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X