ದರ್ಶನ್ ಬರ್ತ್‌ಡೇಗೆ ದೊಡ್ಡ ಉಡುಗೊರೆ ಸಿದ್ಧ; ಸಂಭ್ರಮಾಚರಣೆಗೆ ತಯಾರಾಗಿ ಫ್ಯಾನ್ಸ್

ನಟ ದರ್ಶನ್ ಮತ್ತೆ ಸಿನಿಮಾಗಳ ಕಡೆ ಮುಖ ಮಾಡುತ್ತಿದ್ದಾರೆ. ಹುಟ್ಟುಹಬ್ಬ ಕೂಡ ಹತ್ತಿರ ಬರ್ತಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ಅದ್ಧೂರಿಯಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ? ಇಲ್ವಾ? ಎನ್ನುವ ಗೊಂದಲ ಕೂಡ ಇದೆ. ಇನ್ನು ಆ ದಿನ ಏನಾದರೂ ಸರ್‌ಪ್ರೈಸ್ ಸಿಗುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಬೆನ್ನು ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಆದಷ್ಟು ಬೇಗ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹೆಚ್ಚು ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಸಿಕ್ಕಿ ದರ್ಶನ್ ನಿರಾಳರಾಗಿದ್ದಾರೆ. ಮುಂದಿನ ತಿಂಗಳು 'ಡೆವಿಲ್' ಚಿತ್ರೀಕರಣ ಶುರುವಾಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

Actor Darshan s birthday celebrations begin with re-release of Namma Preethiya Ramu

ದರ್ಶನ್ ನಾಲ್ಕೈದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಎಲ್ಲವೂ ತಡವಾಗುತ್ತಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ಆ ಚಿತ್ರಗಳಿಗೆ ಸಂಬಂಧಿಸಿದಂತೆ ಏನಾದರೂ ಸರ್‌ಪ್ರೈಸ್ ಸಿಗುತ್ತಾ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇನ್ನು ಅಭಿಮಾನಿಗಳ ಸಂಭ್ರಮಾಚರಣೆಗೂ ಒಂದು ಕಾರಣ ಸಿಕ್ಕಿದೆ. ಸದ್ಯ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ದರ್ಶನ್ ಸಿನಿಮಾಗಳು ಆ ಲಿಸ್ಟ್‌ ಮುಂದೆ ಇವೆ.

ದರ್ಶನ್ ನಟನೆಯ 'ನಮ್ಮ ಪ್ರೀತಿಯ ರಾಮು' ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಎರಡು ದಿನ ಮುನ್ನ ಅಂದರೆ ಫೆಬ್ರವರಿ 14ಕ್ಕೆ ಹೊಸ ರೂಪದಲ್ಲಿ ಸಿನಿಮಾ ತೆರೆಗೆ ಬರ್ತಿದೆ. 2003ರಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಸಂಜಯ್- ವಿಜಯ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಿಲ್ಲ. ಆದರೆ ದರ್ಶನ್ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

Actor Darshan s birthday celebrations begin with re-release of Namma Preethiya Ramu

ಮಲಯಾಳಂನಲ್ಲಿ ಬಂದಿದ್ದ 'ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ನೀಯುಂ' ಚಿತ್ರದ ರೀಮೆಕ್ 'ನಮ್ಮ ಪ್ರೀತಿಯ ರಾಮು'. ಈ ಸಿನಿಮಾ ತಮಿಳು, ತೆಲುಗಿನಲ್ಲೂ ರೀಮೆಕ್ ಆಗಿತ್ತು. ಕಣ್ಣು ಕಾಣದ ವಿಶೇಷ ಚೇತನ ರಾಮು ಪಾತ್ರದಲ್ಲಿ ನಟಿಸಿ ದರ್ಶನ್ ನಟಿಸಿ ಮೋಡಿ ಮಾಡಿದ್ದರು. ಪಾತ್ರಕ್ಕಾಗಿ ಬಹಳ ರಿಸ್ಕ್ ತಗೊಂಡಿದ್ದರು. ಅದೇ ಕಾರಣಕ್ಕೆ ಅವರ ಕಣ್ಣಿಗೆ ಸಮಸ್ಯೆ ಆಗಿ ಅದರಿಂದ ಇವತ್ತಿಗೂ ಕಷ್ಟಪಡುವಂತಾಗಿದೆ.

ನಂದ ಕುಮಾರ್, ರಾಮೇ ಗೌಡ 'ನಮ್ಮ ಪ್ರೀತಿಯ ರಾಮು' ಚಿತ್ರ ನಿರ್ಮಾಣ ಮಾಡಿದ್ದರು. ಇಳಯರಾಜಾ ಸಂಗೀತವಿತ್ತು. ಕಳೆದೊಂದು ವರ್ಷದಿಂದ ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಮತ್ತೆ ಬಿಡುಗಡೆ ಮಾಡಲಾಗುತ್ತಿದೆ. 'ಜಾಕಿ', 'ಎ', 'ಉಪೇಂದ್ರ' ಸೇರಿದಂತೆ ಹಲವು ಸಿನಿಮಾಗಳು ಹೀಗೆ ಪ್ರೇಕ್ಷಕರ ಮುಂದೆ ಬಂದಿದ್ದವು. ಇನ್ನು ದರ್ಶನ್ ಜೈಲು ಸೇರಿದ್ದ ಸಂದರ್ಭದಲ್ಲಿ 'ಶಾಸ್ತ್ರಿ', 'ಕರಿಯ' ಸಿನಿಮಾಗಳು ಮರು ಬಿಡುಗಡೆ ಆಗಿತ್ತು. ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದರು.

ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದ ಬೆನ್ನಲ್ಲೇ 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗಿತ್ತು. ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರತಂಡ ಭರ್ಜರಿ ಪ್ರಚಾರ ಸಹ ಮಾಡಿತ್ತು. ಇದೀಗ 'ನಮ್ಮ ಪ್ರೀತಿಯ ರಾಮು' ಸಿನಿಮಾ ಸರದಿ. ಎಂ/ಎಸ್ ಕೆನ್‌ವುಡ್ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ಮರುಬಿಡುಗಡೆ ಮಾಡಲು ಮುಂದಾಗಿದೆ. ಈ ಸಂಬಂಧ ಪೋಸ್ಟರ್ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಪ್ರಚಾರ ಆರಂಭಿಸಲು ವಿತರಕರು ಮುಂದಾಗಿದ್ದಾರೆ. 5D ಮಾಡಿಸಿ ಡಿಟಿಎಸ್‌ ಸೌಂಡ್‌ ಜೊತೆಗೆ ಸಿನಿಮಾ ತೆರೆಗೆ ತರಲಾಗುತ್ತಿದೆ.

ಆಗ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲದಿದ್ದರೂ ಟಿವಿಯಲ್ಲಿ ನೋಡಿ ಜನ ಮೆಚ್ಚಿದ್ದರು. ಇದೀಗ ದೊಡ್ಡ ಪರದೆಯಲ್ಲಿ ಮತ್ತೆ ಆ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ. ಇದು ದರ್ಶನ್ ಅಭಿಮಾನಿಗಳಿಗೂ ಕೂಡ ಒಳ್ಳೆ ಅನುಭವ ನೀಡಲಿದೆ.

More from Filmibeat

English summary
Darshan's 48th birthday becomes more special with the re-release of this film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X