ಮಾಧ್ಯಮಗಳ ಕ್ಯಾಮರಾ ಕಂಡು ಕಣ್ಣು ಹೊಡೆದ ವಿನೀಶ್ ದರ್ಶನ್; ವೀಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ನಟ ದರ್ಶನ್ ಜೈಲು ಸೇರಿ 4 ತಿಂಗಳು ಕಳೆಯುತ್ತಾ ಬಂತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿ 17 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದರಲ್ಲಿ ಮೂವರು ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪದೇ ಪದೆ ಮುಂದಕ್ಕೆ ಹೋಗುತ್ತಿದೆ.

ಸದ್ಯ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ವಾರಕ್ಕೊಮ್ಮೆ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆಗೆ ತೆರಳಿ ದರ್ಶನ್ ಭೇಟಿ ಮಾಡಿ ಬಂದಿದ್ದರು. ಇನ್ನು ಹಿರಿಯ ವಕೀಲರಾದ ಸಿವಿ ನಾಗೇಶ್ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ.

actor Darshan s son Vineesh eye wink in front of camera near bellary jail video goes viral

ಶಾರ್ಜ್‌ಶೀಟ್‌ನಲ್ಲಿರುವ ಲೋಪದೋಷಗಳನ್ನು ಮುಂದಿಟ್ಟುಕೊಂಡು ದರ್ಶನ್ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಶತಾತಗತಾಯ ದರ್ಶನ್‌ಗೆ ಜಾಮೀನು ಕೊಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾಳೆ(ಅಕ್ಟೋಬರ್ 8) ಮತ್ತೆ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಪರ ಸಿವಿ ನಾಗೇಶ್ ಎರಡು ದಿನ ತಮ್ಮ ವಾದ ಮಂಡಿಸಿದ್ದು ಮಂಗಳವಾರ ಎಸ್‌ಪಿಪಿ ಪ್ರಸನ್ನ ಕುಮಾರ್ ತಮ್ಮ ವಾದ ಮುಂದಿಡಲಿದ್ದಾರೆ. ಕುಟುಂಬಸ್ಥರು ಹಾಗೂ ಅಭಿಮಾನಿಗಳು ದರ್ಶನ್‌ಗೆ ಬೇಗ ಜಾಮೀನು ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವಕೀಲರಾದ ಸಿವಿ ನಾಗೇಶ್ ಜಾಮೀನು ಅರ್ಜಿ ವಿಚಾರಣೆ ವೇಳೆ ಚಾರ್ಜ್‌ಶೀಟ್‌ನಲ್ಲಿರುವ 20 ವಿಚಾರಗಳನ್ನು ಪ್ರಸ್ತಾಪಿಸಿ ಕೆಲ ಸಾಕ್ಷ್ಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆಲ್ಲಾ ಸ್ಪಷ್ಟನೆ ಕೇಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಪೊಲೀಸರ ತನಿಖಾ ವರದಿ ಅರೇಬಿಯನ್ ನೈಟ್ಸ್ ಕಥೆ ರೀತಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದರು. ನಾಳೆ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಸಹ ನಡೆಯಲಿದೆ.

ಮೂರು ದಿನಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಬಳ್ಳಾರಿ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ರಾಜಾತಿಥ್ಯ ಸಿಗುತ್ತಿದೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಹೋದ ಮೇಲೆ ಪತ್ನಿ, ತಾಯಿ, ಸಹೋದರ, ಕೆಲ ಆಪ್ತರು ಮತ್ತು ವಕೀಲರು ಮಾತ್ರ ಭೇಟಿ ನೀಡಿ ಮಾತುಕತೆ ನಡೆಸಿ ಬಂದಿದ್ದರು.

ಗುರುವಾರ(ಅಕ್ಟೋಬರ್ 3) ಮೊದಲ ಬಾರಿ ವಿನೀಶ್ ಬಳ್ಳಾರಿ ಜೈಲಿಗೆ ಭೇಟಿ ನೀಡಿ ತಂದೆಯನ್ನು ಭೇಟಿಯಾಗಿದ್ದರು. ಇನ್ನು ಭೇಟಿಗೆ ಹೆಚ್ಚುವರಿ ಸಮಯ ಕೇಳಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಮನವಿ ಸಲ್ಲಿಸಿದ್ದರು. ಹಾಗಾಗಿ 40 ನಿಮಿಷಗಳ ಕಾಲ ಮಾತನಾಡಲು ಅವಕಾಶ ಸಿಕ್ಕಿತ್ತು. ವಿನೀಶ್ ತಾಯಿ ಜೊತೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ಹೊರ ಬಂದಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ವಿಜಯಲಕ್ಷ್ಮಿ ಹಾಗೂ ವಿನೀಶ್ ಜೈಲಿನ ಒಳಗೆ ಹೋಗುವುದು, ಮರಳಿ ವಾಪಸ್ ಬರುವುದನ್ನು ಮಾಧ್ಯಮ ಛಾಯಾಗ್ರಾಹಕರು ಸೆರೆ ಹಿಡಿಸಿದ್ದಾರೆ. ಇನ್ನು ಹೊರಬಂದ ಬಳಿಕ ಕಾರ್ ಏರುವ ಮುನ್ನ ವಿನೀಶ್ ಕ್ಯಾಮರಾ ಕಡೆ ನೋಡಿ ಕಣ್ಣು ಹೊಡೆದಿರುವ ವೀಡಿಯೋವನ್ನು ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ಅಂದಹಾಗೆ ಖಾಸಗಿ ಶಾಲೆಯಲ್ಲಿ ವಿನೀಶ್ 10ನೇ ತರಗತಿ ಓದುತ್ತಿದ್ದಾನೆ. 'ಮಿ. ಐರಾವತ' ಹಾಗೂ 'ಯಜಮಾನ' ಚಿತ್ರಗಳ ಸಣ್ಣ ಸಣ್ಣ ಝಲಕ್‌ನಲ್ಲಿ ವಿನೀಶ್ ತಂದೆ ಜೊತೆ ತೆರೆ ಹಂಚಿಕೊಂಡಿದ್ದ. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ಈ ಹಿಂದೆ ದರ್ಶನ್ ಮಾತನಾಡಿದ್ದರು.

More from Filmibeat

English summary
Vijayalakshmi Darshan and son Vineesh Met Darshan At Bellary Jail recently;
Read more about: darshan sandalwood vijayalakshmi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X