For Quick Alerts
  ALLOW NOTIFICATIONS  
  For Daily Alerts

  ನಿತ್ಯಾ ಮೆನನ್ ರಿಂದ ಕನ್ನಡದಲ್ಲಿ ಆಟೋಗ್ರಾಫ್ ಹಾಕಿಸಿದ ದತ್ತಣ್ಣ

  |

  'ಮಿಷನ್ ಮಂಗಲ್' ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ (ಎಚ್ ಜಿ ದತ್ತಾತ್ರೇಯ) ಒಂದು ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ್ದು, ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ. ದತ್ತಣ್ಣ ಹೇಳಿದ ಒಂದು ಘಟನೆ ಅವರ ಕನ್ನಡ ಪ್ರೇಮ ಎಂತಹುದು ಎನ್ನುವುದನ್ನು ತೋರಿಸುತ್ತಿದೆ.

  'ಮಿಷನ್ ಮಂಗಲ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಒಂದು ದೊಡ್ಡ ಬೋರ್ಡ್ ಮೇಲೆ ಎಲ್ಲರಿಂದ ಆಟೋಗ್ರಾಫ್ ತೆಗೆದುಕೊಂಡರಂತೆ. ಆಗ ಅಲ್ಲಿದ್ದ ಎಲ್ಲ ತಾರೆಯರು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ತಮ್ಮ ಆಟೋಗ್ರಾಫ್ ಹಾಕಿದ್ದಾರೆ.

  Exclusive : 'ಮಂಗಲಯಾನ' ಮುಗಿಸಿದ ದತ್ತಣ್ಣ ಮದುವೆ ಯಾಕೆ ಆಗ್ಲಿಲ್ಲ? Exclusive : 'ಮಂಗಲಯಾನ' ಮುಗಿಸಿದ ದತ್ತಣ್ಣ ಮದುವೆ ಯಾಕೆ ಆಗ್ಲಿಲ್ಲ?

  ದತ್ತಣ್ಣ ತಮ್ಮ ಸರದಿ ಬಂದಾಗ ಕನ್ನಡದಲ್ಲಿ ಆಟೋಗ್ರಾಫ್ ಹಾಕಿದ್ದಾರೆ. ಹಿಂದಿ ಇಂಗ್ಲೀಷ್ ನಲ್ಲೇ ತುಂಬಿಕೊಂಡಿದ್ದ ಆ ಬೋರ್ಡ್ ನಲ್ಲಿ ಕನ್ನಡ ಪದ ಬರೆದದ್ದು ಅವರೊಬ್ಬರೆ. ದತ್ತಣ್ಣನ ಈ ಕೆಲಸವನ್ನು ನಿತ್ಯಾ ಮೆನನ್ ಗಮನಿಸಿದ್ದಾರೆ. ಏಕೆಂದರೆ, ಅವರಿಗೆ ಕೂಡ ಕನ್ನಡ ಬರುತ್ತದೆ.

  ದತ್ತಣ್ಣನ ಬಳಿಕ ನಿತ್ಯಾ ಸರದಿ ಬರುತ್ತದೆ.. ಆಗ ನಿತ್ಯಾ ಖುಷಿಯಿಂದ ಏನು ದತ್ತಣ್ಣ ಕನ್ನಡದಲ್ಲಿ ಆಟೋಗ್ರಾಫ್ ಹಾಕಿದ್ದೀರಿ ಎಂದು ಹೇಳುತ್ತಾರೆ. ಆಗ ದತ್ತಣ್ಣ ನೀನೂ ಕೂಡ ಕನ್ನಡದಲ್ಲಿ ಆಟೋಗ್ರಾಫ್ ಹಾಕು ಎಂದು ಹೇಳುತ್ತಾರೆ. ದತ್ತಣ್ಣ ಮಾತಿಗೆ ಮುಗುಳು ನಕ್ಕ ನಿತ್ಯಾ ತಾವೂ ಕೂಡ ಕನ್ನಡದಲ್ಲಿಯೇ ಆಟೋಗ್ರಾಫ್ ಹಾಕಿದ್ದಾರೆ.

  ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ ಕನ್ನಡದ ದತ್ತಣ್ಣ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸಿದ ಕನ್ನಡದ ದತ್ತಣ್ಣ

  ಸದ್ಯ, ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಸಿನಿಮಾ ಮಾಡಿರುವ ನಿತ್ಯಾ ಮೂಲತಃ ಬೆಂಗಳೂರಿನವರು. ಅಲ್ಲದೆ, ಅವರ ಸಿನಿ ಕೆರಿಯರ್ ಶುರು ಆಗಿದ್ದು ಕೂಡ ಕನ್ನಡದ 'ಸೆವೆನ್ ಒ ಕ್ಲಾಕ್' ಎಂಬ ಸಿನಿಮಾದ ಮೂಲಕ.

  ಈ ರೀತಿ ಬಾಲಿವುಡ್ ನೆಲದಲ್ಲಿ ನಟ ದತ್ತಣ್ಣ ಹಾಗೂ ನಿತ್ಯಾ ಮೆನನ್ ಕನ್ನಡದ ಅಭಿಮಾನವನ್ನು ತೋರಿದ್ದಾರೆ.

  English summary
  Kannada actor Dathanna (H. G. Dattatreya) and Nithya Menon gave their autograph in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X