'ಮಿಷನ್ ಮಂಗಲ್' ಚಿತ್ರಕ್ಕೆ ದತ್ತಣ್ಣ ಆಯ್ಕೆ ಆಗಿದ್ದು ಹೇಗೆ?

Recommended Video

Mission Mangal Movie: ಮಿಷನ್ ಮಂಗಲ್' ಚಿತ್ರಕ್ಕೆ ದತ್ತಣ್ಣ ಆಯ್ಕೆ ಆಗಿದ್ದು ಹೇಗೆ? | FILMIBEAT KANNADA

ಅಕ್ಷಯ್ ಕುಮಾರ್ ನಟನೆಯ 'ಮಿಷನ್ ಮಂಗಲ್' ಹಿಂದಿ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕನ್ನಡದ ಖ್ಯಾತ ಹಿರಿಯ ನಟ ದತ್ತಣ್ಣ (ಎಚ್ ಜಿ ದತ್ತಾತ್ರೇಯ) ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಮಾತನಾಡಿದ ದತ್ತಣ್ಣ ಈ ಸಿನಿಮಾಗೆ ಆಯ್ಕೆ ಆಗಿದನ್ನು ವಿವರಿಸಿದ್ದಾರೆ.

ಮೇಕಪ್ ನಾಣಿ ಅವರ ಅಳಿಯ ಸತ್ಯ ಎಂಬುವವರಿಗೆ ಬಾಂಬೆಯಲ್ಲಿ ಒಳ್ಳೆಯ ಸಂಪರ್ಕ ಇದೆಯಂತೆ. ಅಲ್ಲಿ ಅವರಿಗೆ ಒಬ್ಬರು ದತ್ತಣ್ಣನ ಮೊಬೈಲ್ ನಂಬರ್ ಕೊಡಿ ಎಂದು ಕೇಳಿದ್ದರಂತೆ. ಬಳಿಕ ಅವರೇ ದತ್ತಣ್ಣನನ್ನು ಸಂಪರ್ಕ ಮಾಡಿದ್ದಾರೆ. ಹೀಗಾಗಿ ದತ್ತಣ್ಣನಿಗೆ ಈ ಸಿನಿಮಾ ಸಿಗಲು ಸತ್ಯ ಮೊದಲ ಕಾರಣ ಆಗಿದ್ದಾರೆ.

ಜೊತೆಗೆ ಹಿಂದಿಯವರು ಕೂಡ ಕನ್ನಡ ಸಿನಿಮಾಗಳನ್ನು ಗಮನಿಸುತ್ತ ಇರುತ್ತಾರೆ. ದತ್ತಣ್ಣನ ಹಿಂದಿನ ಸಿನಿಮಾಗಳ ನಟನೆ ನೋಡಿ ಇಷ್ಟ ಪಟ್ಟಿದ್ದರು. ಅಲ್ಲದೆ ನಿರ್ದೇಶಕ ಜಗನ್ ಶಕ್ತಿ ಕೂಡ ಕನ್ನಡದವರೆ ಆಗಿದ್ದು, ಈ ಹಿಂದೆ ದತ್ತಣ್ಣನ 'ದುಸ್ರ' ಎಂಬ ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಿದ್ದರಂತೆ.

actor dathanna spoke about how he got mission mangal movie offer

ಇದೆಲ್ಲದರ ಜೊತೆಗೆ 'ಮಿಷನ್ ಮಂಗಲ್' ಸಿನಿಮಾ ಬೆಂಗಳೂರು ಬೆಸ್ಡ್ ಆಗಿರುವ ಕಾರಣ ದತ್ತಣ್ಣ ಚಿತ್ರತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಎಲ್ಲ ಅಂಶಗಳು ಕೂಡಿ ಬಂದಿದ್ದರಿಂದ ನಾನು ಸಿನಿಮಾದಲ್ಲಿ ನಟಿಸುವ ಹಾಗೆ ಆಯ್ತು ಎಂದು ಹೇಳಿದ್ದಾರೆ ದತ್ತಣ್ಣ.

ಅಂದಹಾಗೆ, 'ಮಿಷನ್ ಮಂಗಲ್' ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ

More from Filmibeat

English summary
Kannada actor Dathanna (H. G. Dattatreya) spoke about how he got 'Mission Mangal' hindi movie offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X