ಹಿರಿಯ ನಟ 'ದತ್ತಣ್ಣ' ಫಿಲ್ಮಿಬೀಟ್ ಕನ್ನಡಕ್ಕೆ ಬರೆದಿರುವ ಪತ್ರ...

ಹಿರಿಯ ನಟ ಹೆಚ್.ಜಿ.ದತ್ತಾತ್ರೇಯ (ದತ್ತಣ್ಣ) ಅವರ 75ನೇ ಹುಟ್ಟುಹಬ್ಬದ ವಿಶೇಷವಾಗಿ ನಿಮ್ಮ ಫಿಲ್ಮಿ ಬೀಟ್ ಕನ್ನಡದಲ್ಲಿ ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನಕ್ಕೆ ಹಿರಿಯ ನಟ ದತ್ತಣ್ಣ ಪ್ರತಿಕ್ರಿಯಿಸಿದ್ದು, ನಮ್ಮ ವರದಿಗೆ ಪೂರಕವಾದ ಮತ್ತಷ್ಟು ಮಾಹಿತಿಯನ್ನ ನೀಡಿದ್ದಾರೆ.

ಇತ್ತೀಚೆಗಷ್ಟೇ ದತ್ತಣ್ಣ ಅವರು ತಮ್ಮ 75ನೇ ಹುಟ್ಟುಹಬ್ಬವನ್ನ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದರು. ಈ ವೇಳೆ ದತ್ತಣ್ಣ ಅವರ ಬಾಲ್ಯ, ಶಾಲಾದಿನ, ಕಾಲೇಜು, ರಂಗಭೂಮಿ ಹಾಗೂ ಸಿನಿ ಜೀವನ ಕುರಿತು ಲೇಖನದಲ್ಲಿ ಬರೆಯಲಾಗಿತ್ತು. ಈ ಲೇಖನವನ್ನ ಓದಿದ ದತ್ತಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ವಂದನೆ ಸಲ್ಲಿಸಿದ್ದು, ಅದರ ಜೊತೆಗೆ ಕೆಲವು ಆಸಕ್ತಿದಾಯಕ ವಿಷಯವನ್ನ ಹಂಚಿಕೊಂಡಿದ್ದಾರೆ.

Actor Dattanna Has Responded To Article Published in Filmibeat Kannada

ದತ್ತಣ್ಣ ಅವರು ನಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಬರೆದಿರುವ ಪತ್ರ ಇಲ್ಲಿದೆ ಓದಿ.....

''ನಿಮ್ಮ ಲೇಖನಕ್ಕಾಗಿ ವಂದನೆ. ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬ ಆಚರಿಸುವ ಪದ್ಧತಿ ಬೆಳೆದುಬಂದಿಲ್ಲ. ಹಾಗಾಗಿ ನನ್ನ 75ನೇ ಹುಟ್ಟುಹಬ್ಬವನ್ನು ನಾನು ಹಮ್ಮಿಕೊಂಡಿದ್ದಲ್ಲ. ಸ್ನೇಹಿತರು ಆಗಿಂದಾಗ್ಗೆ ಅಲ್ಲಿ-ಇಲ್ಲಿ ಸೇರುತ್ತಿರುತ್ತೇವೆ. ಆವತ್ತೂ ಹಾಗೆಯೇ ಸೇರಲು ಕರೆ ಬಂದಿತ್ತು. ಅಲ್ಲಿಗೆ ಹೋದಮೇಲೆ ಅದು ಸ್ವಲ್ಪ ಸ್ಪೆಷಲ್ ಅಂತ ಗೊತ್ತಾಯಿತು. ಅಲ್ಲಿ ಇದ್ದ ಸ್ನೆಹಿತರ ಪ್ರೀತಿಪೂರ್ವ ಆದೇಶಕ್ಕೆ ತಲೆಬಾಗಿ ಅವರು ಹೇಳಿದಂತೆ ನಡೆದುಕೊಂಡೇ.

ನಾನು ಓದಿದ್ದು ಬಾಲಕರ ಶಾಲೆಯಲ್ಲಿ. ಅನಿವಾರ್ಯವಾಗಿ ನಾನು ಹೆಣ್ಣು ಪಾತ್ರ ಮಾಡಬೇಕಾಯಿತು. ಆಗಿನ ಕಾಲದಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೆಣ್ಣುಮಕ್ಕಳಿರಲಿಲ್ಲ. ಹಾಗಾಗಿ ಅಲ್ಲಿಯೂ ನಾನೇ ಹೆಣ್ಣು ಪಾತ್ರಗಳನ್ನು ನಿಭಾಯಿಸಬೇಕಾಯಿತು. (ಇಲ್ಲದಿದ್ದರೆ ನಾಟಕವೇ ಆಗುತ್ತಿರಲಿಲ್ಲ).

ನನಗೆ ಇದುವರೆಗೂ ಬಂದಿರುವ ಪ್ರಶಸ್ತಿಗಳು ಹೀಗಿವೆ. ಪೋಷಕ ನಟ ರಾಜ್ಯ ಪ್ರಶಸ್ತಿ (ಆಸ್ಫೋಟ), ಬೆಸ್ಟ್ ನಟ ರಾಜ್ಯ ಪ್ರಶಸ್ತಿ (ಮುನ್ನುಡಿ), ಪೋಷಕ ನಟ ರಾಷ್ಟ್ರ ಪ್ರಶಸ್ತಿ (ಮುನ್ನುಡಿ), ನಟನೆಗಾಗಿ ಎರಡು ಬಾರಿ ಸ್ಪೆಸಲ್ ಮೆನ್ಷನ್ ರಾಷ್ಟ್ರ ಪ್ರಶಸ್ತಿಗಳು ( ಮೌನಿ, ಭಾರತ್ ಸ್ಟೋರ್ಸ್ ), ಫೀಜಿ ಫಿಲಂ ಫೆಸ್ಟಿವಲ್ ನ ಬೆಸ್ಟ್ ಆಕ್ಟರ್ ಪ್ರಶಸ್ತಿ (ಭಾರತ್ ಸ್ಟೋರ್ಸ್). ಇದುವರೆಗೂ ನಾನು ಸುಮಾರು 180 ಸಿನೆಮಾಗಳಲ್ಲಿ ನಟಿಸಿದ್ದೇನೆ. - ಇಂತಿ ನಿಮ್ಮವ, ಹೆಚ್.ಜಿ.ದತ್ತಾತ್ರೇಯ (ದತ್ತಣ್ಣ)

ದತ್ತಣ್ಣ ಅವರ ಬಗ್ಗೆ ಮೊದಲು ಪ್ರಕವಾಟಗಿದ್ದ ಲೇಖನ ಇದು [ನೀರ್ ದೋಸೆ 'ದತ್ತಣ್ಣ'ಗೆ 75 ವರ್ಷ ಆಯ್ತಣ್ಣಾ.!]

More from Filmibeat

English summary
Versatile Kannada actor Dattatreya, well known as Dattanna, has responded to a article published in Filmibeat Kannada on his 75th birthday celebration, with some clarifications. Thank you very much sir. Wishing many more laurels to come in your film career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X