ನಟ ದತ್ತಣ್ಣ ಮದುವೆಯೇ ಆಗಿಲ್ಲ ಕಾರಣವೇನು?
ನಟ ದತ್ತಣ್ಣ ಕನ್ನಡದ ಖ್ಯಾತ, ಹಿರಿಯ ನಟ. ನಟನೆಗಾಗಿ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಅವರು ಕಲಾತ್ಮಕ, ಕಮರ್ಶಿಯಲ್ ಎಲ್ಲ ಬಗೆಯ ಸಿನಿಮಾದವನ್ನೂ ತಮ್ಮ ಪ್ರತಿಭೆಯಿಂದ ಸುಂದರಗೊಳಿಸಿದ್ದಾರೆ.
Recommended Video
ಪ್ರೀತಿ, ಅಭಿಮಾನದಿಂದ ದತ್ತಣ್ಣ ಎಂದು ಕರೆಸಿಕೊಳ್ಳುವ ಇವರ ನಿಜ ಹೆಸರು ಎಚ್.ಜಿ.ದತ್ತಾತ್ರೇಯ. 78 ವರ್ಷ ವಯಸ್ಸಸಿನ ದತ್ತಣ್ಣ ಮದೆಯಾಗಿಲ್ಲ ಎಂಬುದು ಬಹುತೇಕರಿಗೆ ಗೊತ್ತು. ಆದರೆ ಏಕೆ ಮದುವೆ ಆಗಿಲ್ಲ? ಇದು ಹೆಚ್ಚು ಮಂದಿಗೆ ತಿಳಿದಿಲ್ಲ.
ದತ್ತಣ್ಣ ಏಕೆ ಮದುವೆಯಾಗಿಲ್ಲ ಎಂಬುದನ್ನು ನಟಿ ಹರಿಪ್ರಿಯ ಅವರೊಂದಿಗೆ ಮಾತನಾಡುವಾಗ ಒಮ್ಮೆ ಹೇಳಿದ್ದರಂತೆ. ಅದನ್ನು ಅವರು ತಮ್ಮ ಬ್ಲಾಗ್ ಬರಹದಲ್ಲಿ ದಾಖಲಿಸಿದ್ದಾರೆ.

ಎಚ್‌ಎಎಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ದತ್ತಣ್ಣ
ದತ್ತಣ್ಣ ಸಿನಿಮಾದಲ್ಲಿ ನಟಿಸಲು ಪ್ರಾರಂಭಿಸುವುದಕ್ಕೆ ಮುನ್ನಾ ಎಚ್‌ಎಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಉತ್ತಮ ಕೆಲಸ ಉತ್ತಮ ಸಂಪಾದನೆ ಹೊಂದಿದ್ದ ದತ್ತಣ್ಣ ಅವರಿಗೆ ಕೆಲಸದ ಒತ್ತಡವೂ ತುಸು ಹೆಚ್ಚೇ ಇದ್ದಂತಿತ್ತು. ಉದ್ಯೋಗ ನಿಮಿತ್ತ ಸಾಕಷ್ಟು ಕಡೆಗಳಲ್ಲಿ ಓಡಾಡಬೇಕಿತ್ತು ಅವರು.

ಎಚ್‌ಎಎಲ್‌ನಲ್ಲಿದ್ದಾಗ ತುಂಬಾ ಓಡಾಡಬೇಕಿತ್ತು: ದತ್ತಣ್ಣ
'ಎಚ್‌ಎಎಲ್‌ನಲ್ಲಿ ಕೆಲಸಕ್ಕೆ ಸೇರ್ದಾಗ ತುಂಬಾ ಓಡಾಡ್ಬೇಕಿತ್ತು. ಅಲ್ಲೇ ಕ್ಯಾಂಟೀನ್ ಇತ್ತು. ಊಟ-ತಿಂಡಿ ಸಮಸ್ಯೆ ಅನಿಸಿರಲಿಲ್ಲ. ಇನ್ನು ಬೇರೆ ಬೇರೆ ಕಡೆ ಟ್ರಾನ್ಸ್‌ಫರ್ ಆಗ್ತಿದ್ರಿಂದ ಒಂದೇ ಕಡೆ ಸೆಟಲ್ ಅನ್ನೋ ಥರ ಇರ್ಲಿಲ್ಲ' ಎಂದು ದತ್ತಣ್ಣ, 'ಮದುವೆ ಯಾಕಾಗಲಿಲ್ಲ ಎಂಬ ಹರಿಪ್ರಿಯ ಪ್ರಶ್ನೆಗೆ ಉತ್ತರವಾಗಿ ಹೇಳಿದ್ದರಂತೆ.

ಮದುವೆ ಬಗ್ಗೆ ಯೋಚನೆಯೇ ಮೂಡಲಿಲ್ಲ: ದತ್ತಣ್ಣ
'ನಂತರ ಸಿನಿಮಾಗೆ ಬಂದ ಮೇಲೂ ಅಷ್ಟೇ. ಶೂಟಿಂಗ್ ಅಂತ ದಿನಗಟ್ಟಲೆ ಹೋಗುತ್ತಿದ್ದರಿಂದ ಮದ್ವೆ ಬಗ್ಗೆ ಯೋಚನೆ ಮಾಡ್ಲೇ ಇಲ್ಲ. ಮೋರೋವರ್ ನನ್ನ ಪ್ರೊಫೆಷನ್ ಮದ್ವೆಗೆ ಸಫೋರ್ಟ್ ಮಾಡಿಲ್ಲ. ಅಷ್ಟಕ್ಕೂ ಮದ್ವೆ ಬಗ್ಗೆ ನನ್ನ ನಂಬಿಕೆನೇ ಬೇರೆ' ಎಂದು ಹೇಳಿದ್ದರು ದತ್ತಣ್ಣ. ಇದು ಅವರು ಮದುವೆ ಆಗದೇ ಇರಲು ಕಾರಣ.

ಮದುವೆ ಆಗಬೇಡಿ ಎಂದು ಹೇಳುವುದಿಲ್ಲ ದತ್ತಣ್ಣ
ಅವರು ಮದುವೆ ಆಗಿಲ್ಲವೆಂದು ಬೇರೆಯವರಿಗೂ ಮದುವೆ ಆಗಬೇಡಿ ಎನ್ನುವುದಿಲ್ಲ ದತ್ತಣ್ಣ, 'ನೀನು ಮ್ಯಾರೇಜ್ ಮೆಟೀರಿಯಲ್ಲು, ಮದ್ವೆ ಆಗ್ಬೇಕು,. ಅರ್ಥಾತ್ ನಮ್ಮನೆ ಹುಡುಗಿ ಅನಿಸ್ತೀಯಾ, ನಂಗೆ ತಮ್ಮ.. ನೋ, ಮಗನೋ ಇದ್ದಿದ್ರೆ ತಂದ್ಕೊಬಿಡ್ತಿದ್ದೆ' ಹರಿಪ್ರಿಯಾಗೆ ಹೀಗೆ ಹೇಳಿದ್ದರು ದತ್ತಣ್ಣ.

ನೀರ್‌ದೋಸೆ ಸಿನಿಮಾದಲ್ಲಿ ಒಟ್ಟಿಗೆ ನಟನೆ
ದತ್ತಣ್ಣ ಮತ್ತು ನಟಿ ಹರಿಪ್ರಿಯ 'ನೀರ್‌ದೋಸೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಜಗ್ಗೇಶ್ ಸಹ ಇದ್ದ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹರಿಪ್ರಿಯ, ದತ್ತಣ್ಣ, ಜಗ್ಗೇಶ್ ಪೈಪೋಟಿಗೆ ಬಿದ್ದಂತೆ ನಟಿಸಿದ್ದರು ಆ ಸಿನಿಮಾದಲ್ಲಿ.


Click it and Unblock the Notifications











